ಚಾಮರಾಜನಗರ: ಕಲಾವಿದರ ಬಳಗದ ವತಿಯಿಂದ ಕನ್ನಡ ಚಿತ್ರ ನಟರು, ನಿರ್ಮಾಪಕರು ಹಿರಿಯರು ಆಗಿದ್ದ ದ್ವಾರಕೀಶ್ ರವರ ನಿಧನಕ್ಕೆ ಸಂತಾಪ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ಬೇದಿ ದ್ವಾರಕೀಶ್ ರವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಅಪಾರ ಕೊಡುಗೆ ಬಗ್ಗೆ ಸ್ಮರಿಸಿದರು. ಎಸ್ ಪಿ ಬಾಲಸುಬ್ರಮಣ್ಯಂ ಗಾನಗಂಧರ್ವ ವೇದಿಕೆ ಅಧ್ಯಕ್ಷ ಶಿವಣ್ಣ, ಗಡಿನಾಡು ಕೋಗಿಲೆಗಳ ಕಲಾವಿದ ಸಂಘದ ಅಧ್ಯಕ್ಷರಾದ ಸುರೇಶನಾಗ್ ಹರದನಹಳ್ಳಿ, ಡಾ. ಸುಗಂಧರಾಜು, ಶಿವು, ಪ್ರಕಾಶ್, ಮಹೇಶ್,ಹರಿ ಪ್ರಸಾದ್ ಇದ್ದರು.