Saturday, May 24, 2025
Google search engine

Homeರಾಜ್ಯಸುದ್ದಿಜಾಲಚಾಮರಾಜನಗರ ದಸರಾ ಮಹೋತ್ಸವ : ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು, ಕಲಾವಿದರೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್...

ಚಾಮರಾಜನಗರ ದಸರಾ ಮಹೋತ್ಸವ : ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು, ಕಲಾವಿದರೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಭೆ


ಚಾಮರಾಜನಗರ: ಮೈಸೂರು ದಸರಾ ಮಹೋತ್ಸವ ಭಾಗವಾಗಿ ಚಾಮರಾಜನಗರ ಜಿಲ್ಲೆಯಲ್ಲೂ ಅ. 17 ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿರುವ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಸರ್ವರು ಸಹಕರಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಾಮರಾಜನಗರ ದಸರಾ ಮಹೋತ್ಸವ ಸಂಬಂಧ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಲಾವಿದರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಾಮರಾಜನಗರ ದಸರಾ ಮಹೋತ್ಸವಕ್ಕೆ ಈ ಹಿಂದೆ ನೀಡಿದಂತೆ ಈ ಬಾರಿಯೂ ಎಲ್ಲರ ಸಹಕಾರ, ಸಲಹೆ ಅಗತ್ಯವಿದೆ. ಸರ್ವರ ಸಹಭಾಗಿತ್ವದಲ್ಲಿ ದಸರಾ ನಡೆಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರ ಅಭಿಪ್ರಾಯ ಸಲಹೆಗಳು ಮುಖ್ಯವಾಗಿವೆ. ಎಲ್ಲರು ಸೇರಿ ಅರ್ಥಪೂರ್ಣವಾಗಿ ದಸರಾ ಮಹೋತ್ಸವ ಆಚರಿಸೋಣ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ದಸರಾ ಮಹೋತ್ಸವದಲ್ಲಿ 4 ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ. ಇದರೊಂದಿಗೆ ದಸರಾ ಕವಿಗೋಷ್ಠಿ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ ಎಂದರು. ಸಭೆಯಲ್ಲಿ ಹಾಜರಿದ್ದ ಮುಖಂಡರು, ಕಲಾವಿದರು ಮಾತನಾಡಿ ವಿದ್ಯುತ್ ದೀಪಾಲಂಕಾರ ರಾಮಸಮುದ್ರದ ಕೊನೆಯವರೆಗೂ ಮಾಡಬೇಕು. ನಗರದ ಎಲ್ಲಾ ಪ್ರಮುಖ ವೃತ್ತಗಳು, ರಸ್ತೆಗಳು ಸೇರಿದಂತೆ ವಿವಿಧೆಡೆ ದೀಪಾಲಂಕಾರ ಆಗಬೇಕು. ಜನನ ಮಂಟಪ ಸೇರಿದಂತೆ ಐತಿಹಾಸಿಕ ಸ್ಥಳಗಳಲ್ಲಿ ಸ್ವಚ್ಚತೆ ದೀಪಾಲಂಕಾರಕ್ಕೆ ವಿಶೇಷ ಗಮನಹರಿಸಬೇಕು. ಜೈ ಭುವನೇಶ್ವರಿ ಪ್ರತಿಮೆಗೆ ದಸರಾ ಉದ್ಘಾಟನೆಯಂದು ಗೌರವ ಸಲ್ಲಿಸಬೇಕು ಎಂದರು.

ದಸರಾ ಸಂದರ್ಭದಲ್ಲಿ ವಜ್ರಮುಷ್ಠಿ ಕಾಳಗ ಅಣಕು ಪ್ರದರ್ಶನಕ್ಕೆ ಅವಕಾಶ ವಾಗಬೇಕು. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡುವ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು. ಸಂಭಾವನೆ ಹೆಚ್ಚಳವಾಗಬೇಕು. ಇನ್ನಿತರ ಕಲಾವಿದರ ಕಾರ್ಯಕ್ರಮಗಳನ್ನು ಜಿಲ್ಲೆಯ ಜನತೆಗೆ ನೋಡಲು ಅವಕಾಶವಾಗಬೇಕು. ರಂಗಭೂಮಿ ಕಲಾವಿದರು, ಕಾಲೇಜು ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ನೆರವು ನೀಡಬೇಕು. ದಸರಾ ಸಮಯದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಸಂಪ್ರದಾಯವಿದೆ. ಇದಕ್ಕೆ ಜಿಲ್ಲಾಡಳಿತ ಗುರುತಿಸಿ ಉತ್ತೇಜಿಸಬೇಕು. ದಸರಾ ಕಾರ್ಯಕ್ರಮಗಳ ಆಯೋಜನೆ ನಿರ್ವಹಣೆ ಕುರಿತು ಪಾರದರ್ಶಕ ಪ್ರಕ್ರಿಯೆ ನಡೆಯಬೇಕು ಎಂಬೂದು ಸೇರಿದಂತೆ ಇತರೆ ಹಲವು ಸಲಹೆಗಳನ್ನು ಮುಖಂಡರು, ಕಲಾವಿದರು ನೀಡಿದರು.

ಇದೇ ವೇಳೆ ಕೆಲ ಉದ್ಯಮಿಗಳು, ಮುಖಂಡರು ಕಾರ್ಯಕ್ರಮದ ಆಯೋಜನೆಗೆ ಪ್ರಾಯೋಜಕತ್ವ ನೆರವು ನೀಡುವ ಬಗ್ಗೆ ತಿಳಿಸಿದರು. ಎಲ್ಲರ ಅಭಿಪ್ರಾಯ ಸಲಹೆಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಸರ್ವರ ಸಹಕಾರದೊಂದಿಗೆ ಈ ಬಾರಿಯು ಚಾಮರಾಜನಗರ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ನುಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ಮುಖಂಡರಾದ ಶಾ. ಮುರಳಿ, ಚಾ.ರಂ. ಶ್ರೀನಿವಾಸಗೌಡ, ಸುರೇಶ್ ನಾಯಕ, ಸಿ.ಎಂ. ಕೃಷ್ಣಮೂರ್ತಿ, ಸಿ.ಎಂ. ನರಸಿಂಹಮೂರ್ತಿ, ಸಿ.ಕೆ. ಮಂಜುನಾಥ್, ಸುರೇಶ್ ವಾಜಪೇಯಿ, ಸೋಮಶೇಖರ್ ಬಿಸಲ್ವಾಡಿ ಕೆ.ಎಂ. ನಾಗರಾಜು, ನಿಜಧ್ವನಿ ಗೋವಿಂದರಾಜು, ಚಾ.ಗು.ನಾಗರಾಜು, ಗು.ಪುರುಷೋತ್ತಮ್, ಜಿ.ಬಂಗಾರು, ಸಂಘಸೇನಾ, ಮಹೇಶ್ ಗೌಡ, ನಾರಾಯಣ, ಬಸವಣ್ಣ, ರವಿಚಂದ್ರ ಪ್ರಸಾದ್, ಎಲ್. ಸುರೇಶ್, ವಾಸು, ಜಬಿವುಲ್ಲಾ ಖಾನ್, ಸುರೇಶ್ ಎನ್. ಋಗ್ವೇದಿ, ಅರುಣ್ ಕುಮಾರ್, ಬ್ಯಾಡಮೂಡ್ಲು ಬಸವಣ್ಣ, ಪಣ್ಯದಹುಂಡಿ ರಾಜು, ಸೋಮನಾಯಕ, ಶಿವು, ಶಿವಣ್ಣ, ಅವತಾರ್ ಪ್ರವೀಣ್ ಸೇರಿದಂತೆ ಇತರೆ ಮುಖಂಡರು ಕಲಾವಿದರು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular