Thursday, August 14, 2025
Google search engine

Homeರಾಜ್ಯಸುದ್ದಿಜಾಲಚಾಮರಾಜನಗರ: ನಶಾ ಮುಕ್ತ ಭಾರತ ಅಭಿಯಾನಕ್ಕೆ ಯುವಕರ ದೃಢ ಪ್ರತಿಜ್ಞೆ

ಚಾಮರಾಜನಗರ: ನಶಾ ಮುಕ್ತ ಭಾರತ ಅಭಿಯಾನಕ್ಕೆ ಯುವಕರ ದೃಢ ಪ್ರತಿಜ್ಞೆ

ಚಾಮರಾಜನಗರ: ಯುವಕರು ಪ್ರತಿ ರಾಷ್ಟ್ರದ ಶಕ್ತಿಯಾಗಿರುತ್ತಾರೆ. ಯುವಶಕ್ತಿಯು ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆಯನ್ನು ನೀಡುವಲ್ಲಿ ಪಾತ್ರವನ್ನು ವಹಿಸುತ್ತಿದೆ. ಆದ್ದರಿಂದ ಅತಿ ಹೆಚ್ಚು ಯುವಕರು ನಶಾ ಮುಕ್ತ ಭಾರತ ಅಭಿಯಾನದಲ್ಲಿ ಭಾಗವಹಿಸಿ ಕೊಡುಗೆ ನೀಡುವುದು ಬಹಳ ಮುಖ್ಯ.

ದೇಶದ ಈ ಸವಾಲನ್ನು ಸ್ವೀಕರಿಸಿ ಇಂದು ನಾವು ನಶಾ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಒಂದಾಗುತ್ತಿದ್ದೇವೆ ಮತ್ತು ಸಮುದಾಯ ಕುಟುಂಬ ಸ್ನೇಹಿತರು ಮಾತ್ರವಲ್ಲದೆ ನಾವು ಮಾದಕ ವ್ಯಸನದಿಂದ ಮುಕ್ತರಾಗುತ್ತೇವೆ ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇವೆ. ಏಕೆಂದರೆ ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಬೇಕಿರುತ್ತದೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ನಮ್ಮ ಮಾದಕ ವ್ಯಸನದಿಂದ ಮುಕ್ತಗೊಳಿಸಲು ದೃಢ ನಿರ್ಧಾರ ತೆಗೆದುಕೊಳ್ಳುತ್ತೇವೆ. ನನ್ನ ದೇಶವನ್ನು ಮಾದಕ ವಸ್ತು ವ್ಯಸನದಿಂದ ಮುಕ್ತಗೊಳಿಸಲು ನನ್ನ ಕೈಲಾದಷ್ಟು ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು.

RELATED ARTICLES
- Advertisment -
Google search engine

Most Popular