ಮೈಸೂರು: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ,ಎಲ್ಲಾ ಧರ್ಮದವರಿಗೆ ಸೇರಿದ್ದು ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಮೈಸೂರು-ಕೊಡಗು ಸಂಸದ ಯದುವೀರ್ ಟಾಂಗ್ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ಪವಿತ್ರ ಹಿಂದೂ ಧಾರ್ಮಿಕ ತಾಣವಾಗಿದೆ ಎಂದು ತಿಳಿಸಿದ್ದಾರೆ. ಈ ಹೇಳಿಕೆಯಿಂದ ಯಾವುದೇ ಬದಲಾವಣೆ ಆಗಲಿಲ್ಲ ಎಂದರು.
ಚಾಮುಂಡೇಶ್ವರಿ ಬೆಟ್ಟದ ಮೇಲೆ ಪ್ರಾಧಿಕಾರ ಸ್ಥಾಪನೆಯೂ ಸರಿಯಲ್ಲ ಎಂದ ಸಂಸದ, ಸರ್ಕಾರ ಧಾರ್ಮಿಕ ಸ್ಥಳಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಭವಿಷ್ಯದಲ್ಲಿ ಜಟಿಲತೆ ಉಂಟಾಗಬಹುದು ಎಂದು ಎಚ್ಚರಿಸಿದರು. ಬೆಟ್ಟದ ಪ್ರಾಮುಖ್ಯತೆಯನ್ನು ಕಾಪಾಡಬೇಕೆಂಬುದು ಯದುವೀರ್ ನ ಅಭಿಪ್ರಾಯ.