Saturday, February 21, 2026
Google search engine

Homeರಾಜ್ಯಚಂದ್ರು ಲಮಾಣಿ ಬಂಧನ: ಪ್ರತಿಕ್ರಿಯೆ ನೀಡಿದ ಹೆಚ್‌.ಡಿ. ಕುಮಾರಸ್ವಾಮಿ

ಚಂದ್ರು ಲಮಾಣಿ ಬಂಧನ: ಪ್ರತಿಕ್ರಿಯೆ ನೀಡಿದ ಹೆಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು : ಯಾರ ನಾಯಕತ್ವ ಬಂದ್ರೆ ಕಮಿಷನ್ ಹೋಗುತ್ತೆ ಅಂತ ಜನ ತೀರ್ಮಾನಿಸಲಿ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ ಶಾಸಕ ಚಂದ್ರು ಲಮಾಣಿ ಬಂಧನದ ವಿಚಾರವಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ವೇಳೆ ನಾನು ಸಿಎಂ ಆಗಿದ್ದಾಗ ಕಮೀಷನ್ ನಡೆಯುತ್ತಿತ್ತು ಅಂತ ಯಾರು ಹೇಳಿಲ್ಲ. ನಾನು 2 ಬಾರಿ ಸಿಎಂ ಆಗಿದ್ದಾಗಲೂ ಪ್ರತಿ ತಿಂಗಳ 30 ರಂದು ಗುತ್ತಿಗೆದಾರ ಮನೆ ಬಾಗಿಲಿಗೆ ಹಣ ಬಿಡುಗಡೆ ಮಾಡೋ ಚೆಕ್ ಹೋಗ್ತಾ ಇತ್ತು. ಅಷ್ಟು ಕಟ್ಟುನಿಟ್ಟಿನಲ್ಲಿ ನಡೆಯುತ್ತಿತ್ತು ಎಂದಿದ್ದಾರೆ. 

ಚಂದ್ರು ಲಮಾಣಿ ಲೋಕಾಯುಕ್ತ ಟ್ರ್ಯಾಪ್ ವಿಚಾರವನ್ನು ಆ ಶಾಸಕರನ್ನೇ ಕೇಳಬೇಕು. ಸತೀಶ್ ಜಾರಕಿಹೋಳಿ ಎಲ್ಲಾ ಕಾಲದಲ್ಲಿ ಕಮೀಷನ್ ನಡೆಯುತ್ತಿತ್ತು ಅಂತ ಹೇಳಿದ್ದಾರೆ. ನಾನು ಸಿಎಂ ಆಗಿದ್ದಾಗ ಕಮೀಷನ್ ನಡೆಯುತ್ತಿತ್ತು ಅಂತ ಯಾರು ಹೇಳಿಲ್ಲ ಎಂದಿದ್ದಾರೆ.

ಇಂತಹ ವಾತಾವರಣ ಸರಿಯಾಗಬೇಕಾದ್ರೆ ಯಾರ ನಾಯಕತ್ವವನ್ನು ಆಯ್ಕೆ ಮಾಡಿದ್ರೆ ಇಂತಹ ಪರಿಸ್ಥಿತಿ ಸಂಪೂರ್ಣವಾಗಿ ಹೋಗಲಾಡಿಸಬಹುದು ಅಂತ ಜನರು ತೀರ್ಮಾನ ಮಾಡಲಿ ಎಂದಿದ್ದಾರೆ. 

RELATED ARTICLES
- Advertisment -
Google search engine

Most Popular