Monday, November 3, 2025
Google search engine

HomeUncategorizedರಾಷ್ಟ್ರೀಯನ.1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ ಬದಲಾವಣೆ

ನ.1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ ಬದಲಾವಣೆ

ನವದೆಹಲಿ: ನವೆಂಬರ್‌ 1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ ಬದಲಾವಣೆ ಆಗಲಿದ್ದು, ಬ್ಯಾಂಕ್‌ ಅಕೌಂಟ್‌, ಲಾಕರ್‌ಗಳಿಗೆ ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಬಹುದು ಎಂದು ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ.
ಇದುವರೆಗೆ ಒಂದು ಬ್ಯಾಂಕ್‌ ಖಾತೆ ಅಥವಾ ಲಾಕರ್‌ಗಳಿಗೆ ಇದ್ದ ಒಬ್ಬರು ನಾಮಿನಿ ಬದಲಿಗೆ ನಾಲ್ವರು ನಾಮಿನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.ಈ ಮೂಲಕ ಕ್ಲೈಮ್‌ ಸೆಟಲ್‌ಮೆಂಟ್‌ಗಳು ಸುಲಭವಾಗಲಿದೆ. ಠೇವಣಿ ಸಂದರ್ಭದಲ್ಲೇ ಖಾತೆದಾರರು 4 ನಾಮಿನಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಠೇವಣಿದಾರರು ಮೃತರಾದ ನಂತರ ಇದರಲ್ಲಿ ಕ್ರಮಸಂಖ್ಯೆಗೆ ಅನುಗುಣವಾಗಿ ಖಾತೆದಾರರ ಹಣಕಾಸಿಗೆ ಉತ್ತರಾಧಿಕಾರಿಗಳಾಗಲಿದ್ದಾರೆ.ಇದರಿಂದಾಗಿ ಯಾವುದೆ ತೊಂದರೆ ಇಲ್ಲದೇ ನಿಗದಿತ ಹಣಕಾಸಿನ ಭಾಗವು ಆ ನಾಮಿನಿಗಳಿಗೆ ನೇರವಾಗಿ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿಕೊಡಲಿದೆ. ಬ್ಯಾಂಕಿಂಗ್‌ ಕಾನೂನುಗಳು (ತಿದ್ದುಪಡಿ) ಕಾಯಿದೆ-2025 ನವೆಂಬರ್‌ 1ರಿಂದ ಜಾರಿಗೆ ಬರಲಿದೆ ಅಂತ ಕೇಂದ್ರ ಹಣಕಾಸು ಇಲಾಖೆ ಹೇಳಿದೆ.

RELATED ARTICLES
- Advertisment -
Google search engine

Most Popular