Monday, September 1, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ: ಪೋಷಕರು ಹಾಗೂ ವಿದ್ಯಾರ್ಥಿಗಳ ದೂರು ಹಿನ್ನೆಲೆಯಲ್ಲಿ ಅಧಿಕಾರಿಗಳ...

ಕೆ.ಆರ್.ನಗರ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ: ಪೋಷಕರು ಹಾಗೂ ವಿದ್ಯಾರ್ಥಿಗಳ ದೂರು ಹಿನ್ನೆಲೆಯಲ್ಲಿ ಅಧಿಕಾರಿಗಳ ಭೇಟಿ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಇಂದಿರಾಗಾAಧಿ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲರ ವಿರುದ್ದ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ವ್ಯಾಪಕವಾಗಿ ದೂರು ಬಂದ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ಪಿ.ಪವಿತಾ ವಿದ್ಯಾರ್ಥಿಗಳನ್ನು ತಾತ್ಸಾರದಿಂದ ಕಾಣುವುದರ ಜತೆಗೆ ಶಾಲೆಗೆ ತಮ್ಮ ಮಕ್ಕಳನ್ನು ನೋಡಲು ಬರುವ ಪೋಷಕರೊಂದಿಗೂ ಉಡಾಫೆಯಿಂದ ವರ್ತಿಸುತ್ತಿದ್ದು ಇದರೊಟ್ಟಿಗೆ ಸಮರ್ಪಕವಾಗಿ ಕೆಲಸ ನಿರ್ವಹಿಸುವುದಿಲ್ಲ ಎಂದು ಜಿಲ್ಲಾ ಅಧಿಕಾರಿಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಬಹುತೇಕ ವಿದ್ಯಾರ್ಥಿಗಳು ಪ್ರಭಾರ ಪ್ರಾಂಶುಪಾಲರ ವಿರುದ್ದ ದೂರುಗಳ ಸುರಿಮಳೆಗೈದರಲ್ಲದೆ ಅವರ ವರ್ತನೆಯಿಂದ ನಮಗೆ ಶಾಲೆಯಲ್ಲಿ ಕಲಿಯುವುದು ಕಷ್ಟವಾಗಿರುವುದರೊಂದಿಗೆ ಮಾನಸಿಕವಾಗಿ ತೊಂದರೆಯಾಗುತ್ತಿದ್ದು ಕೂಡಲೇ ಅವರ ವಿರುದ್ದ ಕೈಗೊಳ್ಳಬೇಕು ಎಂದು ಒತ್ತಾಯ ಪಡಿಸಿದರು. ಇಲ್ಲಿ ಊಟದ ವ್ಯವಸ್ಥೆಯೂ ಸರಿಯಾಗಿಲ್ಲ ಈ ಬಗ್ಗೆ ವಾರ್ಡನ್ ಮತ್ತು ಪ್ರಾಂಶುಪಾಲರನ್ನು ಪ್ರಶ್ನಿಸಿದರೆ ನಮಗೆ ಧಮಕಿ ಹಾಕುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡ ವಿದ್ಯಾರ್ಥಿಗಳು ಕುಡಿಯಲು ಶುದ್ದೀಕರಿಸಿದ ಹಾಗೂ ಬಿಸಿ ನೀರು ನೀಡದೆ ನಲ್ಲಿಯಿಂದ ನೇರವಾಗಿ ಬರುವ ನೀರನ್ನೇ ಕೊಡುತ್ತಿರುವುದರಿಂದ ಆಗಾಗ ನಮಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎಂದು ನೊಂದು ನುಡಿದರು.

ವಸತಿ ನಿಲಯಕ್ಕೆ ಪ್ರಭಾರ ಪ್ರಾಂಶುಪಾಲರ ಮಗ ಆಗಾಗ ಆಕ್ರಮವಾಗಿ ಪ್ರವೇಶ ಮಾಡುತ್ತಾರೆ ಆದರೆ ನಮ್ಮ ಪೋಷಕರು ನಮ್ಮನ್ನು ಮಾತನಾಡಿಸಲು ಬಂದರೆ ಅವರನ್ನು ಒಳಗೆ ಬಿಡದೆ ಗಂಟೆ ಗಟ್ಟಲೆ ಕಾಯಿಸುತ್ತಾರೆ ಮತ್ತು ಇಲ್ಲಿಂದ ಆಹಾರ ಮತ್ತು ದಿನಸಿ ಪದಾರ್ಥಗಳನ್ನು ಬೇರೆಡೆಗೆ ಕೊಂಡೊಯ್ಯುತ್ತಾರೆ ಇದನ್ನು ಪ್ರಶ್ನಿಸಿದರೆ ವರ್ಗಾವಣೆ ಪತ್ರ ನೀಡಿ ಮನೆಗೆ ಕಳುಹಿಸುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಂತರಿಕ ಅಂಕಗಳನ್ನು ಕಡಿತ ಮಾಡುವ ಭಯದ ಮಾತುಗಳನ್ನಾಡುತ್ತಿದ್ದಾರೆ ಎಂದು ದೂರಿಕೊಂಡರು.

ನಿಲಯದ ಅವ್ಯವಸ್ಥೆಗಳ ಬಗ್ಗೆ ಈ ಹಿಂದೆ ನಾವು ಪೋಷಕರ ಮೂಲಕ ಸಂಬAಧಿತ ಇಲಾಖೆಯ ಅಧಿಕಾರಿಗಳ ದೂರು ಮುಟ್ಟಿಸಿದರೂ ಈವರೆಗೆ ಯಾರು ಕ್ರಮ ಕೈಗೊಂಡಿಲ್ಲ ಈಗ ನೀವು ಬಂದು ಹೋದ ನಂತರ ಪ್ರಭಾರ ಪ್ರಾಂಶುಪಾಲೆ ನಮ್ಮನ್ನು ಹೆದರಿಸಿ ಬೆದರಿಸುತ್ತಾರೆ ಆದ್ದರಿಂದ ಇದಕ್ಕೆ ಯಾರು ಹೊಣೆ ಎಂದು ಮುಗ್ದವಾಗಿ ಪ್ರಶ್ನಿಸಿದ ವಿದ್ಯಾರ್ಥಿಗಳು ಇಲ್ಲಿ ನಡೆಯುವ ದರ್ಪ ದೌರ್ಜನ್ಯ ಮತ್ತು ದಬ್ಬಾಳಿಕೆಗೆ ಕೊನೆ ಹಾಡಬೇಕೆಂದು ಕೋರಿಕೊಂಡರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ನಾನು ಖುದ್ದು ತರಗತಿಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿ ಸಮಸ್ಯೆ ಆಲಿಸಿ ಇಲ್ಲಿನ ಶಿಕ್ಷಕರ ಜತೆಯೂ ಚರ್ಚಿಸಿದ್ದು ಇಲ್ಲಿನ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಕ್ರಮಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ತಿಳಿಸಿದರು.


ಮಾಧ್ಯಮದವರೊಂದಿಗೆ ವಾಗ್ವಾದ: ಸೋಮವಾರ ಬೆಳಗ್ಗೆ ವಸತಿ ಶಾಲೆಗೆ ತಮ್ಮ ಮಕ್ಕಳನ್ನು ಪೋಷಕರು ಕರೆ ತಂದು ಬಿಡುತ್ತಿದ್ದ ಸಮಯದಲ್ಲಿ ಅವರನ್ನು ಶಾಲೆಯ ಹೊರಗೆ ನಿಲ್ಲಿಸಿದ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರೊಂದಿಗೆ ವಾಗ್ವಾದ ನಡೆಸಿದ ಪ್ರಭಾರ ಪ್ರಾಂಶುಪಾಲೆ ಪಿ.ಪವಿತಾ ಉದ್ದಟ್ಟ ತನದಿಂದ ವರ್ತಿಸಿದಾಗ ಪೋಷಕರು ಇದನ್ನು ಖಂಡಿಸಿದರು.

ಕೆ.ಆರ್.ನಗರ: ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಇಂದಿರಾಗಾAಧಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಪವಿತಾ ಅವರು ಸರ್ಕಾರದ ನಿಯಮ ಉಲ್ಲಂಘಿಸಿ ಕೆಲಸ ಮಾಡುತ್ತಿದ್ದು ಅವರನ್ನು ಹೇಳುವವರು ಕೇಳುವವರೆ ಇಲ್ಲದಂತಾಗಿದೆ.

ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಬೇಕಾದರೆ ನಿಯಮಾನುಸಾರ ಸ್ನಾತಕೋತ್ತರ ಪದವಿ ಪಡೆದಿರಬೇಕು ಆದರೆ ಚಿತ್ರಕಲಾ ಶಿಕ್ಷಕಿಯಾಗಿರುವ ಇವರು ಪ್ರಭಾವ ಬೀರಿ ಪ್ರಭಾರ ಪ್ರಾಂಶುಪಾಲರಾಗಿದ್ದರೂ ಸಂಬAಧಿತ ಇಲಾಖೆಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಕಂಡು ಕಾಣದಂತಿರುವುದು ಆಶ್ಚರ್ಯಕ್ಕೀಡು ಮಾಡಿದೆ.


ವಸತಿ ಶಾಲೆಯಲ್ಲಿ ತನಗಿಷ್ಟ ಬಂದAತೆ ನಡೆದುಕೊಳ್ಳುತ್ತಿದ್ದು ವಿದ್ಯಾರ್ಥಿಗಳು ಪೋಷಕರೊಂದಿಗೆ ಸೌಜನ್ಯದಿಂದ ವರ್ತಿಸದ ಪ್ರಭಾರ ಪ್ರಾಂಶುಪಾಲರನ್ನು ಕೂಡಲೇ ಬದಲಾಯಿಸಿ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಹರನ್ನು ಪ್ರಾಂಶುಪಾಲರನ್ನು ನೇಮಕ ಮಾಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular