Tuesday, March 10, 2026
Google search engine

Homeಕಾಡು-ಮೇಡುಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಜ್ವಾಲಾ ಐದು ಮರಿಗಳಿಗೆ ಜನ್ಮ: ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ...

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಜ್ವಾಲಾ ಐದು ಮರಿಗಳಿಗೆ ಜನ್ಮ: ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ ಏರಿಕೆ

ಭೋಪಾಲ್: ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಕ್ಷಣ ದಾಖಲಾಗಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾಗಿದ್ದ ‘ಜ್ವಾಲಾ’ ಎಂಬ ಚೀತಾ ಸೋಮವಾರ ಐದು ಮರಿಗಳಿಗೆ ಜನ್ಮ ನೀಡಿದೆ. ಈ ಸಂತಸದ ಬೆಳವಣಿಗೆಯಿಂದ ದೇಶದಲ್ಲಿನ ಒಟ್ಟು ಚೀತಾಗಳ ಸಂಖ್ಯೆ ಇದೀಗ 53ಕ್ಕೆ ಏರಿಕೆಯಾಗಿ ಅರ್ಧಶತಕದ ಗಡಿ ದಾಟಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ‘ಗಾಮಿನಿ’ ಎಂಬ ಮತ್ತೊಂದು ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈಗ ಜ್ವಾಲಾ ಐದು ಮರಿಗಳನ್ನು ಹೆತ್ತಿರುವುದು ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಯಶಸ್ಸನ್ನು ಮತ್ತಷ್ಟು ದೃಢಪಡಿಸಿದೆ.

ಇದುವರೆಗೆ ಭಾರತದಲ್ಲಿ ಒಟ್ಟು 33 ಚೀತಾ ಮರಿಗಳು ಜನಿಸಿದ್ದು, ಇದು ಯೋಜನೆಯಡಿ 10ನೇ ಯಶಸ್ವಿ ಹೆರಿಗೆಯಾಗಿದೆ. ಸುಮಾರು 70 ವರ್ಷಗಳ ಹಿಂದೆ ದೇಶದಲ್ಲಿ ಅಳಿವಿನಂಚಿನಲ್ಲಿದ್ದ ಚೀತಾಗಳನ್ನು ಮರುಸ್ಥಾಪಿಸುವ ಪ್ರಯತ್ನಕ್ಕೆ ಇದು ದೊಡ್ಡ ಉತ್ತೇಜನವಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಈ ಬೆಳವಣಿಗೆಯನ್ನು “ವನ್ಯಜೀವಿ ಸಂರಕ್ಷಣೆಯ ಹೆಮ್ಮೆಯ ಕ್ಷಣ” ಎಂದು ಹೇಳಿದ್ದಾರೆ. 1952ರಲ್ಲಿ ಭಾರತದಲ್ಲಿ ಚೀತಾಗಳು ಅಳಿದು ಹೋಗಿವೆ ಎಂದು ಘೋಷಿಸಲಾಗಿತ್ತು. ಬಳಿಕ 2022ರ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ಎಂಟು ಚೀತಾಗಳನ್ನು ಕುನೋ ಉದ್ಯಾನವನಕ್ಕೆ ಬಿಡುವ ಮೂಲಕ ‘ಪ್ರಾಜೆಕ್ಟ್ ಚೀತಾ’ಗೆ ಚಾಲನೆ ನೀಡಿದ್ದರು. ಈಗ ಅದರ ಫಲಿತಾಂಶಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.

RELATED ARTICLES
- Advertisment -
Google search engine

Most Popular