ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ:ಬಿಜೆಪಿ ಮತ್ತುಜೆಡಿಎಸ್ ಪಕ್ಷದವರುರಾಜ್ಯ ಸರ್ಕಾರದಅಭಿವೃದ್ದಿ ಕಾರ್ಯಗಳನ್ನು ಸಹಿಸದೆ ಜನಾಕ್ರೋಶ ಯಾತ್ರೆ ಮಾಡುತ್ತಿದ್ದುರಾಜ್ಯದಜನರುಇದನ್ನುಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಪುರಸಭೆ ಬಯಲುರಂಗ ಮಂದಿರಆವರಣದಲ್ಲಿ ಜಿಲ್ಲಾಡಳಿತ ಮತ್ತುಜಿಲ್ಲಾ ಪಂಚಾಯತ್ ವತಿಯಿಂದ ಶುಕ್ರವಾರ ನಡೆದಕೆ.ಆರ್.ನಗರ ವಿಧಾನ ಸಭಾಕ್ಷೇತ್ರದ ವ್ಯಾಪ್ತಿಯ ವಿವಿಧಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತುಉದ್ಘಾಟನಾಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆಅಭಿವೃದ್ದಿ ಕೆಲಸಗಳು ಕುಂಠಿತಗೊAಡಿವೆಎAದು ಈ ಎರಡು ಪಕ್ಷಗಳವರು ಬೊಗಳೆ ಬಿಡುತ್ತಿದ್ದಾರೆಆದರೆ ನಾವು ಕಳೆದ ಎರಡು ವರ್ಷದಅವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ೯೦ ಸಾವಿರಕೋಟಿಖರ್ಚು ಮಾಡುವುದರಜತೆಗೆಇತರೆ ಯೋಜನೆಗಳಿಗೆ ೬೦ ಸಾವಿರಕೋಟಿ, ವ್ಯಯಿಸಿದ್ದು ಹಣಇಲ್ಲದಿದ್ದರೆ ಈ ಕೆಲಸಗಳು ಸಾಧ್ಯವಾಗುತ್ತಿತ್ತೆಎಂದರು.

ನಮ್ಮ ಸರ್ಕಾರಅಗತ್ಯ ವಸ್ತುಗಳ ಬೆಲೆ ಏರಿಸಿದೆ ಎಂದುಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರುಕೇಂದ್ರದಲ್ಲಿಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ, ರಸಗೊಬ್ಬರ, ಔಷಧಿ ಮತ್ತು ಚಿನ್ನಬೆಳ್ಳಿ ಸೇರಿದಂತೆಇತರ ವಸ್ತುಗಳ ಬೆಲೆ ಏರಿಕೆ ಮಾಡಿದ್ದರೂ ಏಕೆ ಪ್ರಶ್ನೆ ಮಾಡುತ್ತಿಲ್ಲಎಂದು ಕೇಳಿದರು. ಜನಪರ ಮತ್ತು ಬಡವರ ಪರವಾದ ಕೆಲಸ ಮಾಡುತ್ತಿರುವಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆಎರಡು ಪಕ್ಷಗಳಿಗೆ ಇಲ್ಲಎಂದುಜರಿದ ಮುಖ್ಯಮಂತ್ರಿಗಳು ಕಳೆದ ವಿಧಾನ ಸಭಾಚುನಾವಣೆಯಲ್ಲಿ ೧೩೬ ಸ್ಥಾನಗಳನ್ನು ಮತದಾರರ ಆಶೀರ್ವಾದಿಂದ ಗೆದ್ದಿದ್ದುಚುನಾವಣಾ ಪೂರ್ವದಲ್ಲಿ ನಾವು ಜನತೆಗೆ ನೀಡಿದ ೫೯೩ ಭರವಸೆಗಳ ಪೈಕಿ ಈಗಾಗಲೇ ೨೪೨ ಪೂರೈಸಿದ್ದು ಉಳಿದವುಗಳನ್ನು ಮುಂದಿನ ಮೂರು ವರ್ಷದೊಳಗೆ ಈಡೇರಿಸುವ ವಿಶ್ವಾಸವಿದೆಎಂದು ನುಡಿದರು.

ಈ ಹಿಂದೆಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದವರುಲೂಟಿ ಮಾಡುವದುರುದ್ದೇಶದಿಂದ ೨.೭೦ ಲಕ್ಷ ಕೋಟಿಗಳಿಗೆ ಖಜಾನೆಯಲ್ಲಿಹಣಇಲ್ಲದಿದ್ದರೂ ಆಡಳಿತಾತ್ಮಕ ಮಂಜೂರಾತಿ ನೀಡಿ,ಅದರೊಂದಿಗೆ ೧.೬೬ ಲಕ್ಷಕೋಟಿರೂಗಳನ್ನು ಶಾಸಕರುಗಳಿಗೆ ಅಭಿವೃದ್ದಿಗೆಅನುದಾನ ನೀಡುತ್ತೇವೆಂದು ಮಂಜೂರಾತಿಕೊಟ್ಟಿದ್ದರು, ಆ ಹೊರೆಗಳನ್ನು ಹೊತ್ತುಕೊಂಡ ನಮ್ಮ ಸರ್ಕಾರಅಭಿವೃದ್ದಿ ಪಥದತ್ತ ಸಾಗುತ್ತಿದ್ದುರಾಜ್ಯ ಸರ್ಕಾರದ ಬಳಿ ಹಣಇಲ್ಲದೆಅಭಿವೃದ್ದಿ ಕೆಲಸಗಳು ನಿಂತು ಹೋಗಿವೆ ಎಂದು ಬೊಬ್ಬೆ ಹೊಡೆಯುವವರುಕೆ.ಆರ್.ನಗರ ವಿಧಾನ ಸಭಾಕ್ಷೇತ್ರಕ್ಕೆ ಬಂದು ನೋಡಬೇಕೆಂದು ಸವಾಲು ಹಾಕಿದರು.
ಜಿಎಸ್‌ಟಿ ಸಂಗ್ರಹದಲ್ಲಿರಾಜ್ಯ ಸರ್ಕಾರದೇಶದಲ್ಲಿಯೇಎರಡನೇ ಸ್ಥಾನದಲ್ಲಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ ಮೊದಲನೇ ಸ್ಥಾನಕ್ಕೇರಲು ಪ್ರಯತ್ನ ಮಾಡಲಾಗುತ್ತಿದೆಎಂದು ಮಾಹಿತಿ ನೀಡಿದ ಸಿದ್ದರಾಮಯ್ಯನವರು ಹಣವಿಲ್ಲ ಎಂಬುವವರು ಈ ವಿಚಾರವನ್ನು ಮನಗಾಣಬೇಕೆಂದಲ್ಲದೆ ಸುಧೀರ್ಘ ಅವಧಿಯಿಂದ ರಾಜಕೀಯದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರಾದಆರ್.ಅಶೋಕ್, ಛಲವಾದಿನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜೇಂದ್ರ ಸುಳ್ಳು ಹೇಳುವುದನ್ನು ಬಿಡಬೇಕುಎಂದು ಸಲಹೆ ನೀಡಿದರು.
ಸರ್ಕಾರದ ವಿರುದ್ದ ಸುಳ್ಳು ಹೇಳಿಕೆ ನೀಡುವ ಬಿಜೆಪಿಯವರನ್ನುಜನತೆ ಪ್ರಶ್ನಿಸಿಸಬೇಕಿದೆ ಎಂದ ಮುಖ್ಯಮಂತ್ರಿಗಳು ನಮ್ಮ ಮೇಲೆ ಜನರಿಗೆಆಕ್ರೋಶವಿದ್ದಿದ್ದರೆ ಉಪ-ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತಿತ್ತೆಎಂದು ನೆರೆದಿದ್ದಜನರನ್ನು ಕೇಳಿದರಲ್ಲದೆ ತಮ್ಮ ಅಧಿಕಾರದ ಅವಧಿಯಲ್ಲಿಬಡವರಿಗೆಒಂದು ಮನೆಯನ್ನು ನೀಡದವರು ಈಗ ಬುರುಡೆ ಬಿಡುತ್ತಿದ್ದಾರೆಂದರು.
ಕಾಂಗ್ರೆಸ್ ಸೋಲಿಸಲು ಬಿಜೆಪಿ ಮತ್ತುಜೆಡಿಎಸ್ ಪಕ್ಷದವರುಒಂದಾಗಿದ್ದಾರೆಆದರೆ ನಾನು ಜನರ ಆಶೀರ್ವಾದದಿಂದ ಮುಂಬರುವ ವಿದಾನ ಸಭಾಚುನಾವಣೆಯಲ್ಲಿಅವರನ್ನು ಮತ್ತೆ ಸೋಲಿಸಿ ಎರಡನೇ ಬಾರಿಗೆ ಬಹುಮತದೊಂದಿಗೆಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನಾಡಿದರು.
ಕೆ.ಆರ್.ನಗರ:ಕ್ಷೇತ್ರದ ಶಾಸಕರಾಗಿರುವಡಿ.ರವಿಶಂಕರ್ ಮಾತನಾಡುವುದನ್ನುಕಡಿಮೆ ಮಾಡಿ ಕೆಲಸ ಮಾಡುವುದನ್ನುಕಾಯಕವನ್ನಾಗಿ ಮಾಡುಕೊಂಡಿದ್ದುಇವರನ್ನುಕ್ಷೇತ್ರದ ಮತದಾರರುಮತ್ತೆಗೆಲ್ಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಪಟ್ಟಣದ ಪುರಸಭೆ ಬಯಲುರಂಗ ಮಂದಿರಆವರಣದಲ್ಲಿ ಜಿಲ್ಲಾಡಳಿತ ಮತ್ತುಜಿಲ್ಲಾ ಪಂಚಾಯತ್ ವತಿಯಿಂದ ಶುಕ್ರವಾರ ನಡೆದಕೆ.ಆರ್.ನಗರ ವಿಧಾನ ಸಭಾಕ್ಷೇತ್ರದ ವ್ಯಾಪ್ತಿಯ ವಿವಿಧಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತುಉದ್ಘಾಟನಾಕಾರ್ಯಕ್ರಮದಲ್ಲಿ ಮಾತನಾಡಿದಅವರು ಶಾಸಕರಾದ ನಂತರಯಾವಕೋಮು ಗಲಭೆಯನ್ನು ಮಾಡಿಸದಈತ ಸರ್ವಜನಾಂಗದವರು ಶಾಂತಿಯಿAದ ಬಾಳಬೇಕೆಂಬ ನಮ್ಮ ಸರ್ಕಾರದ ನೀತಿಯನ್ನು ಪಾಲಿಸುತ್ತಿದ್ದಾನೆಎಂದರು.
ಈ ಹಿಂದೆಅಧಿಕಾರದಲ್ಲಿದ್ದವರುಕೆ.ಆರ್.ನಗರಕ್ಷೇತ್ರವನ್ನುಅಭಿವೃದ್ದಿ ಮಾಡದೆ ಹಾಳು ಮಾಡಿದ್ದರುಆದರೆಡಿ.ರವಿಶಂಕರ್ಉತ್ತಮವಾಗಿ ಕೆಲಸ ಮಾಡುತ್ತಿದ್ದು ನನ್ನೊಡನೆ ಹೆಚ್ಚು ಮಾತನಾಡದೆ ಬರಿ ಕೆಲಸವನ್ನೇ ಮಾಡಿಸಿಕೊಳ್ಳುತ್ತಾನೆ ಎಂದು ಹಾಸ್ಯಚಟಾಕಿ ಹಾರಿಸಿದರು.
ತಾಲೂಕಿನ ಕಪ್ಪಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ೨೫ ಕೋಟಿ ಹಣ ಮಂಜೂರು ಮಾಡಿಇಂದುಕಾಮಗಾರಿಗೆ ಚಾಲನೆ ನೀಡಿರುವುದರಜತೆಗೆಕ್ಷೇತ್ರದ ವ್ಯಾಪ್ತಿಯ ನಾಲೆಗಳ ಆಧುನೀಕರಣಕ್ಕೆ ೧೯೭ ಕೋಟಿ, ಕೆಸ್ತೂರುಏತ ನೀರಾವರಿಯೋಜನೆಗೆ ೬೦ ಕೋಟಿ ಹಣ ಸೇರಿದಂತೆ ೫೧೩ ಕೋಟಿ ರೂಗಳ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತುಉದ್ಘಾಟನೆಯನ್ನು ನೆರವೇರಿಸಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಶಾಸಕರು ನೀಡುವಎಲ್ಲಾ ಬೇಡಿಕೆ ಪತ್ರಗಳಿಗೆ ಪೂರಕವಾಗಿ ಸ್ಪಂದಿಸುತ್ತೇನೆಎAದು ಭರವಸೆ ನೀಡಿದರು.

ಸುಳ್ಳು ಆರೋಪ ಮಾಡುವವರು ಬಂದು ನೋಡಲಿ: ಸಾ.ರಾ. ಮಹೇಶ್‌ಗೆ ಡಿ. ರವಿಶಂಕರ್ ಪರೋಕ್ಷ ಟಾಂಗ್ ನಾನು ಶಾಸಕನಾದ ನಂತರಕ್ಷೇತ್ರದ ವ್ಯಾಪ್ತಿಯ ರಸ್ತೆಗಳಿಗೆ ಒಂದು ಹಿಡಿ ಮಣ್ಣನ್ನು ಹಾಕಿಲ್ಲಎಂದು ಸುಳ್ಳು ಆರೋಪ ಮಾಡುವವರುಈಗ ಬಂದುಅಭಿವೃದ್ದಿ ಕೆಲಸಗಳನ್ನು ನೋಡಿಉತ್ತರಿಸಲಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ಅವರಿಗೆ ಶಾಸಕ ಡಿ.ರವಿಶಂಕರ್ ಪರೋಕ್ಷವಾಗಿಟಾಂಗ್ ನೀಡಿದರು.
ಪಟ್ಟಣದ ಪುರಸಭೆ ಬಯಲುರಂಗ ಮಂದಿರಆವರಣದಲ್ಲಿ ಜಿಲ್ಲಾಡಳಿತ ಮತ್ತುಜಿಲ್ಲಾ ಪಂಚಾಯತ್ ವತಿಯಿಂದ ಶುಕ್ರವಾರ ನಡೆದಕೆ.ಆರ್.ನಗರ ವಿಧಾನ ಸಭಾಕ್ಷೇತ್ರದ ವ್ಯಾಪ್ತಿಯ ವಿವಿಧಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತುಉದ್ಘಾಟನಾಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದÀರು.
ನಮ್ಮನ್ನುಟೀಕಿಸುವವರು ಈ ಹಿಂದೆಚುAಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆಕಾರ್ಖಾನೆಯನ್ನು ಅಂಬಿಕಾ ಶುರ‍್ಸ್ ನವರಿಗೆಗುತ್ತಿಗೆಗೆ ನೀಡಿ ನೊಂದಣಿ ಮಾಡಿಸಲಿಲ್ಲ ಆನಂತರ ಮತ್ತೆ ನಿರಾಣಿ ಶುರ‍್ಸ್ನವರಿಗೆಗುತ್ತಿಗೆಗೆ ನೀಡಿರುವುದಾಗಿ ಹೇಳಿದ್ದರು. ಆದರೆಅದನ್ನು ಮಾಡಿರಲಿಲ್ಲ ಆದರೆ ನಾನು ಈಗ ೪೦ ವರ್ಷಗಳ ಅವಧಿಗೆಕಾರ್ಖಾನೆಯನ್ನು ನಿರಾಣಿ ಶುರ‍್ಸ್ನವರಿಗೆ ನೋಂದಣಿ ಮಾಡಿಸಿದ್ದು ರೈತರು ಭಯ ಪಡುವಅಗತ್ಯವಿಲ್ಲ ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಗುಂಪು ಮನೆ ನಿರ್ಮಾಣ ಮಾಡಿಸುವುದಾಗಿ ಭೂಮಿ ಪೂಜೆ ನೆರವೇರಿಸಿ ಅಗತ್ಯ ದಾಖಲೆಗಳನ್ನು ಹೊಂದಿಸದೆ ಕೆಲಸವನ್ನೇ ಸ್ಥಗಿತಗೊಳ್ಳಿಸಿದ್ದರು ಆನಂತರ ಆ ಕೆಲಸವನ್ನು ನಾನು ಗಂಭೀರವಾಗಿ ಪರಿಗಣಿಸಿ ದಾಖಲೆಗಳನ್ನು ಸರಿಪಡಿಸಿ ಕಾಮಗಾರಿಗೆ ಮರು ಚಾಲನೆ ಕೊಡಿಸಿದ್ದು ಜಿ+೩ ಗುಂಪು ಮನೆಗಳು ವರ್ಷದೊಳಗೆ ನಿರ್ಮಾಣವಾಗಲಿವೆ ಎಂದು ಮಾಹಿತಿ ನೀಡಿದರು.
ಪಟ್ಟಣದ ಹೊರ ವಲಯದಲ್ಲಿನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡಿದ್ದಅAಬೇಡ್ಕರ್ ಸಮುದಾಯ ಭವನಕ್ಕೆ ಮರು ಚಾಲನೆ ಕೊಡಿಸುವುದರೊಂದಿಗೆ ಬಸವಭವನಕ್ಕೆಜಾಗವನ್ನು ಮಂಜೂರು ಮಾಡಿಸಲಾಗಿದ್ದುಕಾಮಗಾರಿಆರಂಭಿಸಲುಅಗತ್ಯಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದುಇದಕ್ಕೆಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ನುಡಿದರು.
ಮುಂದಿನ ವರ್ಷದಅಂಬೇಡ್ಕರಜಯAತಿಆಚರಣೆ ವೇಳೆ ಬಾಬಾಸಾಹೇಬರ ಪುತ್ಥಳಿ ಬದಲಿಸಿ ನೂತನ ಪುತ್ಥಳಿಯನ್ನು ಮಾಡಿಸಿ ಅದರಜತೆಗೆ ಸಮುದಾಯ ಭವನವನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ ಮತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳನ್ನು ಕರೆಯಿಸಿ ಉದ್ಘಾಟನೆ ಮಾಡಿಸುವ ಭರವಸೆ ನೀಡಿದರು.
ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ನೀಡಿದ ಗ್ರಾಮಗಳ ಅಭಿವೃದ್ದಿಯನ್ನು ಈ ಹಿಂದೆಅಧಿಕಾರ ನಡೆಸಿದ್ದವರು ಕಡೆಗಾಣಿಸಿದ್ದು ಅವುಗಳ ಅಭಿವೃದ್ದಿಗೆಅಗತ್ಯ ಹಣ ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಕೋರಿಕೊಂಡ ಶಾಸಕರುಇದರಜತೆಗೆ ಪಟ್ಟಣದ ಸಮಗ್ರಅಭಿವೃದ್ದಿಗೆ ಎಸ್‌ಎಫ್‌ಸಿ ಅನುದಾನದಡಿಅಗತ್ಯವಿರುವಷ್ಟು ಹಣಕೊಡಬೇಕೆಂದು ಮನವಿ ಮಾಡಿದರು. ಇವುಗಳ ಜತೆಗೆ ಸಾಲಿಗ್ರಾಮಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ, ಮಿರ್ಲೆ, ಹೊಸೂರು ಮತ್ತು ಭೇರ್ಯ ಗ್ರಾಮಗಳ ಪ್ರಾಥಮಿಕಆರೋಗ್ಯ ಕೇಂದ್ರಗಳನ್ನು ಸಮುದಾಯಆರೋಗ್ಯ ಕೇಂದ್ರಗಳನ್ನಾಗಿ ಮಾಡಬೇಕೆಂದರಲ್ಲದೆ ಪ್ರಮುಖ ರಸ್ತೆಗಳ ಅಭಿವೃದ್ದಿಗೆಅನುದಾನ ನೀಡಬೇಕೆಂದು ಭಿನ್ನವತ್ತಳೆ ಸಲ್ಲಿಸಿದರು.

ಸಚಿವರಾದಕೆ.ವೆಂಕಟೇಶ್,ಎನ್.ಚೆಲುವರಾಯಸ್ವಾಮಿ, ಭೈರತಿಸುರೇಶ್, ಬೋಸರಾಜು, ದಿನೇಶ್‌ಗುಂಡೂರಾವ್, ಶಾಸಕರಾದ ಅನಿಲ್‌ಚಿಕ್ಕಮಾಧು, ಹರೀಶ್ಗೌಡ, ಹೆಚ್.ಎಂ.ಗಣೇಶ್‌ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದಡಾ.ಯತೀಂದ್ರಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯದೊಡ್ಡಸ್ವಾಮೇಗೌಡ, ಕರ್ನಾಟಕ ಸಹಕಾರಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ಅಧ್ಯಕ್ಷಎಂ.ರಮೇಶ್, ಪುರಸಭೆಅಧ್ಯಕ್ಷ ಶಿವುನಾಯಕ್,ಉಪಾಧ್ಯಕ್ಷೆ ವಸಂತಮ್ಮ, ನಗರಯೋಜನಾ ಪ್ರಾಧಿಕಾರದಅಧ್ಯಕ್ಷಕೆ.ಎಸ್.ಮಹೇಶ್, ತಾಲೂಕು ಪಂಚಾಯಿತಿ ಮಾಜಿಅಧ್ಯಕ್ಷರಾದ ಹಾಡ್ಯಮಹದೇವಸ್ವಾಮಿ, ಹೆಚ್.ಟಿ.ಮಂಜುನಾಥ್, ತಾಲೂಕು ಶರಣ ಸಾಹಿತ್ಯ ಪರಿಷತಅಧ್ಯಕ್ಷ ಸಿ.ಪಿ.ರಮೇಶ್, ಜಿಲ್ಲಾಕಾಂಗ್ರೆಸ್ಅಧ್ಯಕ್ಷಡಾ.ಬಿ.ಜೆ.ವಿಜಯಕುಮಾರ್, ಕಾರ್ಯದರ್ಶಿ ಜಿ.ಎಸ್.ವೆಂಕಟೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಚನಹಳ್ಳಿರಾಘು, ಮೈಸೂರುಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ರೆಡ್ಡಿ, ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರರಾದಜಿ.ಸುರೇಂದ್ರಮೂರ್ತಿ, ಎಸ್.ನರಗುಂದ್ ಎ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ವಿವಿಧಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರುಗಳು ಹಾಜರಿದ್ದರು