ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎತ್ತಿನಭುಜದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ, ಇಂದಿನಿಂದ ಒಂದು ತಿಂಗಳ ಕಾಲ ಚಾರಣ (Trekking) ಬಂದ್ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಈ ಸುಂದರ ಪ್ರವಾಸಿ ತಾಣಕ್ಕೆ ಜನರು 7 ಕಿ.ಮೀ. ಪಾದಚಾರಣೆಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಆದರೆ ಭಾರೀ ಮಂಜು, ಮಳೆ, ಜಾರುವ ಪ್ರದೇಶ, ಕಾಡುಪ್ರಾಣಿಗಳ ಅಡಚಣೆ ಹಾಗೂ ರಕ್ಷಣಾ ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಾತ್ಕಾಲಿಕ ನಿರ್ಬಂಧ ಹೇರಿದೆ.
ಸ್ಥಳೀಯರ ಆಗ್ರಹದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಎತ್ತಿನಭುಜದ ಮೆಟ್ಟಿಲಿನಲ್ಲಿ ಕಾವಲುಗಾರನನ್ನೂ ನಿಯೋಜಿಸಲಾಗಿದೆ.