Friday, December 26, 2025
Google search engine

Homeವಿದೇಶಚೀನಾ, ಭಾರತದೊಂದಿಗಿನ ಅಮೆರಿಕ ಸಂಬಂಧವನ್ನು ಹಾಳು ಮಾಡುತ್ತಿದೆ

ಚೀನಾ, ಭಾರತದೊಂದಿಗಿನ ಅಮೆರಿಕ ಸಂಬಂಧವನ್ನು ಹಾಳು ಮಾಡುತ್ತಿದೆ

ಬೀಜಿಂಗ್:‌ ಭಾರತ ಹಾಗೂ ಚೀನಾದ ನಡುವಿನ ಹಲವು ವರ್ಷಗಳ ಮುನಿಸು ಶಮನವಾಗುವ ಹೊತ್ತಿನಲ್ಲೇ, ಅಮೆರಿಕಾದ ಪೆಂಟಗಾನ್‌ ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದೆ. ಇದರಲ್ಲಿ ಚೀನಾ ಹೇಗೆ ತನ್ನ ಡ್ರ್ಯಾಗನ್‌ ಬುದ್ದಿ ತೋರಿಸುತ್ತಾ ಪಾಕಿಸ್ತಾನಕ್ಕೆ ಸಹಕಾರ ನೀಡುತ್ತಲೇ, ಭಾರತದೊಂದಿಗೆ ದ್ವೀಪಕ್ಷೀಯ ಸಂಬಂಧ ಬೆಳೆಸುತ್ತಾ ಭಾರತ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ ಎಂದು ಉಲ್ಲೇಖಿಸಿದೆ.

ಇನ್ನೂ ಈ ವರದಿ ಬಿಡುಗಡೆಯಾಗುತ್ತಿದ್ದಂತೆ ಕೆಂಡಾಮಂಡಲವಾಗಿರುವ ಚೀನಾ ವರದಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ತೀವ್ರವಾಗಿ ಖಂಡಿಸಿದ್ದು, ಅಲ್ಲದೆ ಈ ವರದಿ ಸುಳ್ಳು ಸುದ್ದಿ ಹಬ್ಬಿಸುವ ಜೊತೆಗೆ ಉಭಯ ದೇಶಗಳ ನಡುವೆ ವೈಮಸ್ಸು ಮೂಡುವಂತೆ ಮಾಡುತ್ತಿದೆ ಎಂದು ಆರೋಪಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಈ ವರದಿ ಕುರಿತು ನಮಗೆ ತೀವ್ರ ಅಸಮಾಧಾನವಿದ್ದು, ನಾವು ಇದನ್ನು ಬಲವಾಗಿ ನಿರಾಕರಿಸುತ್ತೇವೆ. ಅಮೆರಿಕಾ ತನ್ನ ಮಿಲಿಟರಿ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ನೆಪ ಹುಡುಕುತ್ತಿದ್ದು, ಪೆಂಟಗಾನ್‌ ನೀಡಿರುವ ಈ ವರದಿಯು ಸುಳ್ಳು ನಿರೂಪಣೆಗಳನ್ನು ಮಾಡುತ್ತಿದೆ. ಅಸತ್ಯವನ್ನು ಹರಡುವ ಕೆಲಸ ಮಾಡುತ್ತಿದೆ. ಈ ಮೂಲಕ ಚೀನಾದ ರಕ್ಷಣಾ ನೀತಿಯನ್ನು ತಪ್ಪಾಗಿ ಚಿತ್ರಿಸಿ, ಇತರ ದೇಶಗಳೊಂದಿಗೆ ವೈಮನಸ್ಸ್ಯವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಅಮೆರಿಕಾ ಹೀಗೆ ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಸಂಘರ್ಷ ಮತ್ತು ವೈರುಧ್ಯವನ್ನು ಪ್ರಚೋದಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದರಲ್ಲದೆ, ಭಾರತ-ಚೀನಾದ ನಡುವಿನ ಸಂಬಂಧದ ಕುರಿತು ಪೆಂಟಗಾನ್‌ ನೀಡಿರುವ ವರದಿಗೆ ಪ್ರತಿಕ್ರಿಯೆಯಾಗಿ ಬೀಜಿಂಗ್ ನವದೆಹಲಿಯೊಂದಿಗಿನ ತನ್ನ ಸಂಬಂಧವನ್ನು ಕಾರ್ಯತಂತ್ರದ ಎತ್ತರದಿಂದ ಮತ್ತು ದೀರ್ಘಕಾಲೀನ ದೃಷ್ಟಿಕೋನದಿಂದ ನೋಡುತ್ತದೆ ಮತ್ತು ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ನಾವು ಸಂವಹನವನ್ನು ಬಲಪಡಿಸಲು, ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು, ಸಹಕಾರವನ್ನು ಉತ್ತೇಜಿಸಲು ಮತ್ತು ಭಾರತದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲು ಸಿದ್ಧರಿದ್ದೇವೆ ಮತ್ತು ಉತ್ತಮ ಮತ್ತು ಸ್ಥಿರವಾದ ದ್ವಿಪಕ್ಷೀಯ ಸಂಬಂಧವನ್ನು ಮುಂದುವರಿಸುತ್ತೇವೆ ಎಂದು ಲಿನ್ ಆಶ್ವಾಸನೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular