ಎಡತೊರೆ ಮಹೇಶ್
ಎಚ್ ಡಿ ಕೋಟೆ : ತಾಲೂಕಿನ ಪ್ರಸಿದ್ಧ ನಾಗರಹೊಳೆ ಅರಣ್ಯ ವ್ಯಾಪ್ತಿಯ ಡಿ.ಬಿ ಕುಪ್ಪೆ ವಲಯದ ಬಳ್ಳೆಹಾಡಿ ಹಾಗೂ ಗೋಳೂರು ಹಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಹಾಡಿಯ ಬುಡಕಟ್ಟು ನಿವಾಸಿಗಳಿಗಾಗಿ ಮೈಸೂರಿನ ಶೈಲಜಾ ರಾಮಕೃಷ್ಣ ಚಾರಿಟಬಲ್ ಟ್ರಸ್ಟ್, ( ಆರ್ ಜಿ ಎಚ್ ಎಸ್ ಫೌಂಡೇಶನ್ ) ವತಿಯಿಂದ ಸ್ವಚ್ಛತೆ ಹಾಗೂ ಬಾಲ್ಯ ವಿವಾಹ ಬಗ್ಗೆ ಹರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಹರೀಶ್ ಕುಮಾರ್ ಹಾಗೂ ಸಂಸ್ಥೆ ನಿರ್ದೇಶಕರುವರಿಂದ ಗಿಡ ನೆಡುವ ಮೂಲಕ ಸ್ವಚ್ಛತೆ ಹಾಗೂ ಬಾಲ್ಯ ವಿವಾಹ ನಿಷೇಧ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಬಳಿಕ ಸಂಸ್ಥೆಯ ನಿರ್ದೇಶಕರು ಹಾಗೂ ಮೈಸೂರಿನ ಲೆಕ್ಕ ಪರಿಶೋಧಕರಾದ ನವೀನ್ ಕುಮಾರ್ ರವರ ತಂಡ ಹಾಗೂ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಗೋವಿಂದರಾಜು ರವರುಗಳಿಂದ ಬಳ್ಳೆಹಾಡಿ ಮತ್ತು ಗೋಳೂರು ಹಾಡಿಯ ಬುಡಕಟ್ಟು ನಿವಾಸಿಗಳಿಗೆ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ತಂಡದ ಸದಸ್ಯರಿಂದ ಸುತ್ತ ಮುತ್ತಲಿನ ಪರಿಸರವನ್ನು ಹೇಗೆ ಸ್ವಚ್ಛತೆಯಿಂದ ಇಡಲು ಎಷ್ಟು ಮುಖ್ಯವೋ ಅದೇ ರೀತಿ ನಮ್ಮ ದೇಹವನ್ನು ಶುದ್ಧವಾಗಿಡಲು ಪ್ರರತಿದಿನ ಸ್ನಾನ ಮಾಡುವ ಮೂಲಕ ಕೈ ಕಾಲುಗಳನ್ನು ಸಾಬೂನಿಂದ ತೊಳೆಯುವುದರ ಮೂಲಕ ಮನುಷ್ಯನ ಆರೋಗ್ಯಕ್ಕೆ ಧಕ್ಕೆ ತರುವ ರೋಗರುಜನೆಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರತಿದಿನ ಹಲ್ಲು ಉಜ್ಜುವುದು ಹಾಗೂ ಕೈ ಮತ್ತು ಕಾಲು ಬೆರಳುಗಳ ಉಗುರುಗಳನ್ನು ಸ್ವಚ್ಛತೆಯಿಂದ ಇಡಲು ಹಲ್ಲು ಉಜ್ಜುವ ಬ್ರಷ್ ಪೇಸ್ಟ್ ಮತ್ತು ನೈಲ್ ಕಟರನ್ನು ಸಹ ವಿತರಿಸುವ ಮೂಲಕ ಆ ವಸ್ತುಗಳಿಂದ ಆರೋಗ್ಯಕ್ಕೆ ಆಗುವಂತಹ ಉಪಯೋಗಳ ಮಾಹಿತಿಗಳನ್ನು ತಿಳಿಸಿಕೊಟ್ಟರು.
ನಂತರ ಹಾಡಿಯ ಬುಡಕಟ್ಟು ಮಹಿಳಾ ನಿವಾಸಿಗಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ತಂಡದ ಸದಸ್ಯರಿಂದ ಬಾಲ್ಯ ವಿವಾಹದಿಂದ ಹೆಣ್ಣುಮಕ್ಕಳ ಆರೋಗ್ಯದಲ್ಲಿ ಆಗುವಂತಹ ದುಷ್ಪರಿಣಾಮಗಳು ಹಾಗೂ ಕಾನೂನಿನ ಅಡಿಯಲ್ಲಿ ಬಾಲ್ಯ ವಿವಾಹ ನಡೆದರೆ ಅದರಿಂದ ಆಗುವಂತಹ ಶಿಕ್ಷೆಗಳ ಬಗ್ಗೆ ಹಾಡಿಯ ಪ್ರತಿಯೊಂದು ಮನೆ ಮನೆಗೆ ತೆರಳುವ ಮೂಲಕ ಅರಿವು ಮೂಡಿಸುವ ಜೊತೆಗೆ ಆದಿವಾಸಿ ಬುಡಕಟ್ಟಿನ ಪ್ರತಿಯೊಬ್ಬ ಹೆಣ್ಣು ಮತ್ತು ಗಂಡು ಮಕ್ಕಳನ್ನು ಪೋಷಕರು ಕಡ್ಡಾಯವಾಗಿ ಶಾಲೆಗೆ ಕಲಿಸಿ ಶಿಕ್ಷಣ ಕೊಡಿಸುವ ಮೂಲಕ ಅವರುಗಳು ಸಹ ಸಮಾಜದ ಮುಖ್ಯ ವಾಹಿನಿಗೆ ಬಂದು ಬದುಕಲು ಶಿಕ್ಷಣ ಅತ್ಯಮೂಲ್ಯ ಅವಶ್ಯಕತೆಯಾಗಿದೆ ಹಾಗಾಗಿ ನಮ್ಮ ಸಂಸ್ಥೆ ಅರಣ್ಯ ಪ್ರದೇಶದ ವ್ಯಾಪ್ತಿ ಹಾಡಿಗಳಲ್ಲಿ ಮಕ್ಕಳ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಸ್ಥೆಯು ಮುಂದಾಗಿದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಹರೀಶ್ ಕುಮಾರ್, ನಿರ್ದೇಶಕರಾದ ನವೀನ್, ಯೋಗ ಶೇಖರ್, ಹಾಡಿಗಳ ಶಾಲೆಯ ಶಿಕ್ಷಕರುಗಳಾದ ರಾಮಕೃಷ್ಣ, ಕಾರ್ತಿಕ್, ರೇವಣ್ಣ, ಹನುಮಂತು, ನಾಗರಾಜು, ಸಂಸ್ಥೆಯ ಸಿಬ್ಬಂದಿ ಬಸವಣ್ಣ, ಮಂಜುಳಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಬುಡಕಟ್ಟು ನಿವಾಸಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಇತರರು ಹಾಜರಿದ್ದರು.