Saturday, February 21, 2026
Google search engine

Homeರಾಜ್ಯಸುದ್ದಿಜಾಲಒತ್ತುವರಿ ತೆರವು ಮಾಡಿಸಿ, ನ್ಯಾಯ ಕೊಡಿಸಿ : ರೈತ ಮುನಿರಾಜು ಮನವಿ

ಒತ್ತುವರಿ ತೆರವು ಮಾಡಿಸಿ, ನ್ಯಾಯ ಕೊಡಿಸಿ : ರೈತ ಮುನಿರಾಜು ಮನವಿ

ಕೋಲಾರ : ತಾಲೂಕಿನ ಕೆಂದಟ್ಟಿ ಗ್ರಾಮದ ಸರ್ವೇ ನಂ.೭೨/೧ ಜಮೀನಿನಲ್ಲಿ ೨೫ ಅಡಿ ಜಾಗ ಒತ್ತುವರಿಯಾಗಿದ್ದು, ಕೂಡಲೇ ಅಧಿಕಾರಿಗಳು ತೆರವು ಮಾಡಿಸಿ ನನಗೆ ನ್ಯಾಯ ಕೊಡಿಸಬೇಕು ಎಂದು ರೈತ ಮುನಿರಾಜು ಮನವಿ ಮಾಡಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಂದಟ್ಟಿ ಗ್ರಾಮದ ನಿವಾಸಿ ಆದ ನಾನು ದಲಿತ ಸಮುದಾಯದ ಬಡ ರೈತನಾಗಿದ್ದು, ಇದೇ ಗ್ರಾಮದ ಮೇಲ್ಜಾತಿ ಸಮುದಾಯದ ಮಂಜುನಾಥ್ ಎಂಬುವರು ನಮಗೆ ಸೇರಿರುವ ಭೂಮಿಯಲ್ಲಿ ೨೫ ಅಡಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ನಮಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿದ್ದಾರೆ. ಸೂಕ್ತ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ, ದಿಶಾಂಕ್ ಆಪ್ ಮೂಲಕ ಸರ್ವೇ ಮಾಡಿ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನೂ ನಮಗೆ ಜಾಗವಿದ್ದರೂ, ಮನೆ ನಿರ್ಮಿಸಿಕೊಳ್ಳಲಾಗದೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದೇವೆ. ಅಧಿಕಾರಿಗಳಿಗೆ ದೂರು ಸಲ್ಲಿಸಿದರೆ ಸಿವಿಲ್ ವ್ಯಾಜ್ಯವಾಗಿದ್ದು ಕೋರ್ಟ್ ಮುಖಾಂತರ ಪರಿಹರಿಸಿಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಕೋರ್ಟ್ ಮೆಟ್ಟಲು ಹತ್ತಲು ನಮ್ಮ ಬಳಿ ಹಣವಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರ್ವೇ ನಡೆಸಿ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಂದಟ್ಟಿ ಸೋಮಣ್ಣ, ಮುನಿರಾಜು, ಅಶೋಕ್.ಎಂ ಇದ್ದರು.

RELATED ARTICLES
- Advertisment -
Google search engine

Most Popular