Friday, December 5, 2025
Google search engine

Homeರಾಜಕೀಯಒಂದೇ ಕಾರ್ಯಕ್ರಮಕ್ಕೆ ಬೇರೆ ಬೇರೆಯಾಗಿ ಬಂದ ಸಿಎಂ, ಡಿಸಿಎಂ

ಒಂದೇ ಕಾರ್ಯಕ್ರಮಕ್ಕೆ ಬೇರೆ ಬೇರೆಯಾಗಿ ಬಂದ ಸಿಎಂ, ಡಿಸಿಎಂ

ಬೆಂಗಳೂರು : ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗಾಗಿ ನಿರ್ಮಿಸಲಾಗಿರುವ ನೂತನ ಕಟ್ಟಡ ಉದ್ಘಾಟನೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಬೇರೆ ಬೇರೆಯಾಗಿ ಆಗಮಿಸಿದ್ದು, ಈ ವೇಳೆ ಪರಸ್ಪರ ಒಬ್ಬರನೊಬ್ಬರು ವಿಚಾರಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡ್ಯ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯಲ್ಲಿ ಭಾಗವಹಿಸಲು ತೆರಳಬೇಕಿತ್ತು. ಈ ಕಾರಣಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.

ಈ ವೇಳೆ ಸಿದ್ದರಾಮಯ್ಯ ಅವರು, ಡಿಸಿಎಂ ಬರುವುದಿಲ್ಲವೇ ಎಂದು ವಿಚಾರಿಸಿದ್ದು, ಉಪಮುಖ್ಯಮಂತ್ರಿಗಳು ತಡವಾಗಿ ಬರುತ್ತಾರೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಉಪಮುಖ್ಯಮಂತ್ರಿಯವರು ಬರುವವರೆಗೂ ಸ್ವಲ್ಪ ಹೊತ್ತು ನಿರೀಕ್ಷೆ ಮಾಡಲು ಎಂ.ಬಿ.ಪಾಟೀಲ್ ಸಲಹೆ ನೀಡಿದ್ದರು ಹಾಗಾಗಿ ಅದಕ್ಕೆ ಸಮತಿಸಿದ್ದ ಮುಖ್ಯಮಂತ್ರಿಯವರು ಕಚೇರಿಯಲ್ಲಿ ಕುಳಿತುಕೊಳ್ಳಲು ಮುಂದದಾಗ, ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು, ಡಿ.ಕೆ.ಶಿವಕುಮಾರ್ ಬರುತ್ತಾರೆ ನೀವು ಉದ್ಘಾಟನೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಹವಾಮಾನ ವೈಪರಿತ್ಯದಿಂದಾಗಿ ಮಂಡ್ಯ ಜಿಲ್ಲೆಗೆ ಹೆಲಿಕ್ಯಾಪ್ಟರ್ ಬದಲಾಗಿ ರಸ್ತೆ ಮಾರ್ಗವಾಗಿ ಪ್ರಯಾಣಿಸಬೇಕಾಗುತ್ತದೆ. ಡಿಸಿಎಂ ಅವರನ್ನು ಕಾಯ್ದುಕುಳಿತುಕೊಂಡರೆ ಸಮಯವಾಗುತ್ತದೆ ಎಂದು ಮುಖ್ಯಮಂತ್ರಿ ಅವರ ಸಿಬ್ಬಂದಿಗಳು ಸಲಹೆ ನೀಡಿದ್ದಾರೆ.ಆಗಾಗಿ ಸಮಯದ ಕೊರತೆಯ ಕಾರಣಕ್ಕೆ ಮುಖ್ಯಮಂತ್ರಿಯವರು ಡಿ.ಕೆ.ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ನಂತರ ತೆರಳಿದ್ದಾರೆ.

ಮುಖ್ಯಮಂತ್ರಿಯವರು ನಿರ್ಗಮಿಸಿದ ಬೆನ್ನಲ್ಲೇ ಆಗಮಿಸಿದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯವರು ಬಂದು ಹೋದರೆ ಎಂದು ಪ್ರಶ್ನಿಸಿದ್ದು, ಸಮಯ ಆಗಿತ್ತು ಹಾಗಾಗಿ ಅವರು ಹೊರಟರು ಎಂದು ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ. ಉಭಯ ಕುಶಲೋಪರಿ ಬಳಿಕ ಡಿ.ಕೆ.ಶಿವಕುಮಾರ್, ಈಗ ಕೆಐಎಡಿಬಿಗೆ ನಿರ್ಮಿಸಲಾಗಿರುವ ನೂತನ ಕಚೇರಿ ಪಕ್ಕದಲ್ಲೇ ಇದ್ದ ಮನೆಯಲ್ಲಿ ಈ ಹಿಂದೆ ತಾವು ವಾಸವಿದಿದ್ದಾಗಿ ಹೇಳಿದ್ದಾರೆ. ತಾವು ಅದೇ ಮನೆಯಲ್ಲಿದ್ದಾಗಲೇ ಮದುವೆಯಾಗಿದ್ದಾಗಿಯೂ ತಿಳಿಸಿದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಪ್ರತ್ಯೇಕವಾಗಿ ಕಾರ್ಯಕ್ರಮಕ್ಕೆ ಬಂದಿದ್ದರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ವಿಚಾರಿಸುವ ಮೂಲಕ ಆತೀಯತೆಯನ್ನು ಮುಂದುವರೆಸಿದ್ದಾರೆ. ಈ ಮೊದಲು ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದಾಗ ಇಂತಹ ಅನ್ಯೋನ್ಯತೆ ಕಂಡು ಬರುತ್ತಿರಲಿಲ್ಲ. ಉಪಾಹಾರಕೂಟದ ಬಳಿಕ ಇಬ್ಬರ ನಡುವೆ ಸಂಬಂಧ ಸುಧಾರಿಸಿದಂತೆ ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ.

RELATED ARTICLES
- Advertisment -
Google search engine

Most Popular