Tuesday, April 28, 2026
Google search engine

Homeರಾಜಕೀಯಮೇ 4 ಬಳಿಕ ಸಿಎಂ ಬದಲಾವಣೆ ಖಚಿತ : ಗೋವಿಂದ ಕಾರಜೋಳ

ಮೇ 4 ಬಳಿಕ ಸಿಎಂ ಬದಲಾವಣೆ ಖಚಿತ : ಗೋವಿಂದ ಕಾರಜೋಳ

ಬಾಗಲಕೋಟೆ :  ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ  ಚರ್ಚೆಯಾಗುತ್ತಿದ್ದು ಇದೀಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ,  ಸಿದ್ದರಾಮಯ್ಯ ಇನ್ನು 15 ದಿನ ಮಾತ್ರ ಸರದಾರ. 15 ದಿನದ ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಇರುವುದಿಲ್ಲ. ಮೇ 4 ರಂದು 5 ರಾಜ್ಯಗಳ ಚುನಾವಣಾ ಫಲಿತಾಂಶ ಬರುತ್ತದೆ. ಆಗ ಉಪಚುನಾವಣೆ ಫಲಿತಾಂಶವೂ ಬರುತ್ತದೆ. ಇದೇ ವೇಳೇ ಸಿದ್ದರಾಮಯ್ಯನವರ  ಖುರ್ಚಿ ಫಲಿತಾಂಶವೂ ಪ್ರಕಟವಾಗುತ್ತದೆ ಎಂದು ಲೇವಡಿ ಮಾಡಿದರು.

ಸಿಎಂ ಆಗಲು ಡಿಕೆ ಶಿವಕುಮಾರ್ ತಯಾರಾಗಿ ಕೂತಿದ್ದಾರೆ. ಇತ್ತ  ಸಿದ್ದರಾಮಯ್ಯ ಹಿಂಬಾಲಕರು ಹೈಕಮಾಂಡ್ ಬಳಿ ಲಾಬಿ ನಡೆಸುತ್ತಿದ್ದಾರೆ.  40 ಶಾಸಕರು ಹೈಕಮಾಂಡ್ ಬಳಿ ಲಾಬಿ ನಡೆಸುತ್ತಿದ್ದಾರೆ. ರಾಜ್ಯಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

RELATED ARTICLES
- Advertisment -
Google search engine

Most Popular