ವರದಿ: ಎಡೆತೊರೆ ಮಹೇಶ್
ಎಚ್.ಡಿ.ಕೋಟೆ: ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಿದರು. ಚಾಮುಂಡಿಬೆಟ್ಟದ ಪ್ರಧಾನ ಕೋಟೆ ಅರ್ಚಕ ಶಶಿಶೇಖರ್ ದೀಕ್ಷಿತ್, ತಾಲೂಕಿನ ರವಿರಾಮೇಶ್ವರ ದೇವಾಲಯದ ಅರ್ಚಕ ಭಾಸ್ಕರ್ ಅವರ ನೇತೃತ್ವದಲ್ಲಿ ಬೆಳಗ್ಗೆಯಿಂದ ಪೂಜಾ ಕೈಂಕರ್ಯಗಳು ನೆರವೇರಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕೆಲಸವನ್ನು ಸರ್ಕಾರದ ವತಿಯಿಂದ ಮಾಡಿದ್ದೇವೆ ಬಾಗಿನ ಅರ್ಪಿಸುವುದಂದರೆ ಕಾವೇರಿ ಮಾತೆಗೆ ಕಬಿನಿ ಮಾತೆಗೆ ಪೂಜೆ ಸಲ್ಲಿಸುವುದು ಈ ವರ್ಷ ಕಬಿನಿ ಜಲಾಶಯ ಬಹಳ ಮುಂಚಿತವಾಗಿ ಭರ್ತಿಯಾಗಿದೆ ಪ್ರತಿ ವರ್ಷ ಕೂಡ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತೇವೆ ಈ ಜಲಾಶಯದಿಂದ ಒಂದು ಲಕ್ಷ 13, ಸಾವಿರ ಎಕರೆಗೆ ನೀರಾವರಿಗೆ ಆಗುತ್ತದೆ ಈಗ ನಾವು ಒಂದು ಲಕ್ಷ 8 ಸಾವಿರ ಎಕರೆಗೆ ನೀರಾವರಿ ಆಗುತ್ತಿದೆ ಎಂದು ತಿಳಿಸಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 32.25ಕೋ,ರೂಗಳ ಪುನರ್ ಚೇತನ ಪ್ರಾಜೆಕ್ಟ್ ಅನ್ನು ತಯಾರು ಮಾಡಿದ್ದೇವೆ. ಕಬಿನಿಗೆ ಈಗ 51 ವರ್ಷ ಆಗಿದೆ ಆದರಿದ ಮತ್ತೆ ಪುನರ್ ಚೇತನ ಮಾಡಲು ತೀರ್ಮಾನ ಮಾಡಿದ್ದು, ಇನ್ನು ಅನೇಕ ಪ್ರಾಜೆಕ್ಟ್ ಅನ್ನು ರೆಡಿ ಮಾಡಿದ್ದೇವೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು ಕೂಡ ತಾರಕ ನುಗು ನಾಲೆಗಳ ಆಧುನೀಕರಣ ಮಾಡಲು ಮನವಿ ಕೊಟ್ಟಿದ್ದಾರೆ. ಕಬಿನಿ ಜಲಾಶಯದ ಭದ್ರತೆಗಾಗಿ ಪುನರ್ ಚೇತನ ಮಾಡುತ್ತಿದ್ದೇವೆ. ಕೆ.ಆರ್.ಎಸ್ ಮಾದರಿಯಲ್ಲಿ ಕಬಿನಿಯಲ್ಲೂ ಬೃಂದಾವನ ಗಾರ್ಡನ್ ಮಾಡಲಾಗುವುದು ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ಕಬಿನಿ ಜಲಾಶಯಕ್ಕೆ ಈಗಾಗಲೇ ಕ್ಯಾಬಿನೆಟ್ ನಲ್ಲಿ 32. 5 ಕೋಟಿ ಅಪ್ರೋವಲ್ ಅಗಿದೆ. 88 ಕೋ, ವೆಚ್ಚದಲ್ಲಿ ಡ್ರಿಪ್ ಯೋಜನೆ ಅಡಿಯಲ್ಲಿ ಇಡೀ ಡ್ಯಾಮ್ ಗೆ ಮತ್ತು ಗೇಟ್ ಗಳಿಗೆ ಪುನರ್ ಚೇತನ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಕಬಿನಿ ಒಂದು ಜೀವ ನದಿ ನಮಗೆ ಕಷ್ಟದ ಸಂದರ್ಭದಲ್ಲಿ ಈ ನದಿ ನಮ್ಮನ್ನು ಕಾಪಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್, ಸಿ, ಮಹದೇವಪ್ಪ, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಹರೀಶ್ ಗೌಡ, ಎ, ಆರ್, ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಎಸ್, ಪಿ, ವಿಷ್ಣುವರ್ಧನ್, ಮಲ್ಲಿಕ್, ಗಂಗಾಧರ್, ತಾಸಿಲ್ದಾರ್ ಶ್ರೀನಿವಾಸ್, ನೀರಾವರಿ ಇಲಾಖೆಯ ಅಧಿಕಾರಿ ಮಹೇಶ್, ಗಣೇಶ್, ಉಷಾ, ದೀಪ,ಇನ್ನು ಅನೇಕ ಅಧಿಕಾರಿಗಳು ಮುಖಂಡರು ಇದ್ದರು.