Tuesday, November 4, 2025
Google search engine

Homeರಾಜ್ಯಸುದ್ದಿಜಾಲಬಳ್ಳಾರಿ ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ರೂ ಬಿಡುಗಡೆ ಮಾಡಿದ‌ ಸಿಎಂ ಸಿದ್ಧರಾಮಯ್ಯ: KUWJ ಧನ್ಯವಾದ.

ಬಳ್ಳಾರಿ ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ರೂ ಬಿಡುಗಡೆ ಮಾಡಿದ‌ ಸಿಎಂ ಸಿದ್ಧರಾಮಯ್ಯ: KUWJ ಧನ್ಯವಾದ.

ವರದಿ :ಸ್ಟೀಫನ್ ಜೇಮ್ಸ್.

ಬೆಂಗಳೂರು: ಬಳ್ಳಾರಿ ಪತ್ರಕರ್ತ ವೀರೇಶ್ ಜಿ.ಕೆ. ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ.

ವಿಜಯ ಕರ್ನಾಟಕ ಪತ್ರಿಕೆ ಬಳ್ಳಾರಿ ಬ್ಯೂರೋದಲ್ಲಿ ಉಪ ಸಂಪಾದಕನಾಗಿದ್ದ ವೀರೇಶ್ ಜಿ.ಕೆ. (ವೀರೇಶ್ ಕಟ್ಟೆಮ್ಯಾಗಳ) ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಕುಟುಂಬ ಆರ್ಥಿಕವಾಗಿ ಸಂಷ್ಟದಲ್ಲಿ ಸಿಲುಕಿರುವ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಪತ್ರ ಬರೆದು ಸರ್ಕಾರದ ಗಮನಕ್ಕೆ ತಂದಿದ್ದರು. ಹಾಗಾಗಿ ಬಾಕಿ ಇದ್ದ ಕಡತ ವಿಲೇವಾರಿಗೆ ಸಿಎಂ ಸೂಚಿಸಿದ್ದರು.

ಕೆಯುಡಬ್ಲ್ಯೂಜೆ ಮನವಿ ಮೇರೆಗೆ ಪರಿಹಾರ ಮಂಜೂರು ಮಾಡಿದ ಸಿಎಂ‌ ಸಿದ್ದರಾಮಯ್ಯ‌ಅವರಿಗೆ, ಈ ನಿಟ್ಟಿನಲ್ಲಿ ಸಹಕಾರ ನೀಡಿದ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಧನ್ಯವಾದ ಸಲ್ಲಿಸಿದೆ.

RELATED ARTICLES
- Advertisment -
Google search engine

Most Popular