ಮೈಸೂರು: ವಿಜಯದಶಮಿಯು ಧರ್ಮದ ಜಯ, ಅಸತ್ಯದ ವಿರುದ್ಧ ಸತ್ಯದ ಸಂಕೇತ ಎಂದು ವರ್ಣಿಸುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಮಾಜಿಕ ಜಾಲತಾಣದ ಮೂಲಕ ಶುಭಕೋರಿದ ಸಿಎಂ ಅವರು, “ಮನುಕುಲಕ್ಕೆ ಕಂಟಕವಾಗಿದ್ದ ಶತ್ರುಗಳನ್ನು ಸಂಹರಿಸಿ, ನೆಮ್ಮದಿಯ ಅಭಯ ನೀಡಿದ ತಾಯಿ ಚಾಮುಂಡೇಶ್ವರಿ, ಸದಾಕಾಲ ದ್ವೇಷ, ಹಿಂಸೆ, ದುಃಖಗಳೆಂಬ ಕೆಡಕುಗಳಿಂದ ನಿಮ್ಮೆಲ್ಲರನ್ನು ರಕ್ಷಿಸಲಿ” ಎಂದು ಪ್ರಾರ್ಥಿಸಿದರು.
ಅಧರ್ಮದ ವಿರುದ್ಧದ ಜಯವನ್ನು ಸಂಭ್ರಮಿಸುವ ವಿಜಯದಶಮಿ ಎಲ್ಲರೆದೆಯೊಳಗಿನ ಅವಗುಣಗಳನ್ನು ಮೆಟ್ಟಿ ವಿಕಸನದ ಹಾದಿಯಲ್ಲಿ ನಡೆಸಲಿ ಎಂದು ಆಶಿಸುತ್ತೇನೆ.