ಮಂಡ್ಯ: ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿರುವ ಸಿಎಂಇ(ಕೊಕ್ಲೇರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ) ಕಾರ್ಯಾಗಾರವನ್ನು ವೈದ್ಯಕೀಯ ವಿಜ್ಣಾನಗಳ ಸಂಸ್ಥೆ,ಇಎನ್‌ಟಿ ವಿಭಾಗ ವತಿಯಿಂದ ಮಂಡ್ಯ ಮಿಮ್ಸ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೂಕ ಮತ್ತು ಕಿವುಡ ಮಕ್ಕಳಿಗೆ ಕೊಕ್ಲಿಯರ್ ಕಸಿ ಶಾಸ್ತ್ರ ಚಿಕಿತ್ಸೆ ಮಾಡಿಸುವ ಯೋಜನೆ ಇದಾಗಿದ್ದು , ಕಾರ್ಯಗಾರವನ್ನು ಮಿಮ್ಸ್ ನಿರ್ದೇಶಕ ಡಾ. ಮಹೇಂದ್ರ ಉದ್ಘಾಟಿಸಿದರು. ನಂತರ ಮಾತನಾಡಿ ಮೂಕ ಮತ್ತು ಕಿವುಡ ಮಕ್ಕಳಿಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಜಿಲ್ಲೆಯ ಮೂಕ ಹಾಗೂ ಕಿವುಡ ಮಕ್ಕಳು ಇದರ ಸದುಪಯೋಗಪಡೆದುಕೊಳ್ಳಬೇಕು. ಇದು ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದೆ. ಸಂಸ್ಥೆಯ ಇಎನ್‌ಟಿ ವಿಭಾಗವು ೧೫ ಮಕ್ಕಳಿಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಈ ಶಸ್ತ್ರ ಚಿಕಿತ್ಸೆ ಉಚಿತವಾಗಿದ್ದು ಬಡವರಿಗೆ ಇದು ಸಹಕಾರಿಯಾಗಲಿದೆ. ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ೮ ಹೆಣ್ಣು ಮಕ್ಕಳು ಹಾಗೂ ೭ ಗಂಡು ಮಕ್ಕಳು ಸೇರಿ ಒಟ್ಟು ೧೫ ಮಕ್ಕಳಿಗೆ ಇಎನ್‌ಟಿ ತಜ್ಞ ಡಾ.ಶಂಕರ್ ಮಡಿಕೇರಿ ಮಾರ್ಗದರ್ಶನದಲ್ಲಿ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ಮಿಮ್ಸ್ ಇಎನ್‌ಟಿ ವಿಭಾಗದ ಸರ್ಜನ್‌ಗಳು ಯಶಸ್ವಿಯಾಗಿ ನಡೆಸಿದ್ದಾರೆ. ಡಾ.ಶಂಕರ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಡಾ.ಮಹೇಂದ್ರ. ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸುವುದಾದರೆ ಕನಿಷ್ಠ ೮ ರಿಂದ ೯ ಲಕ್ಷ ರೂ.ವರೆಗೆ ವೆಚ್ಚವಾಗಲಿದೆ. ಬಡವರಿಗೆ ಈ ಶಸ್ತ್ರಚಿಕಿತ್ಸೆ ಎಟುಕದಂತಾಗಿತ್ತು.
ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲೇ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸುತ್ತಿದೆ. ಕಾರ್ಯಕ್ರಮದಲ್ಲಿ ಏಮ್ಸ್ ನಿರ್ದೇಶಕ ಡಾ.ಮಹದೇವ್ ಪ್ರಸಾದ್, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಡಾ. ರಾಮಲಿಂಗಯ್ಯ ಸೇರಿ ಹಲವರು ಇದ್ದರು.
