Saturday, May 24, 2025
Google search engine

Homeರಾಜ್ಯಸುದ್ದಿಜಾಲಬ್ಯಾಂಕ್ ವಹಿವಾಟು, ಡಿಜಿಟಲ್ ಪಾವತಿ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಸೂಚನೆ

ಬ್ಯಾಂಕ್ ವಹಿವಾಟು, ಡಿಜಿಟಲ್ ಪಾವತಿ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಸೂಚನೆ

ಬೆಳಗಾವಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅನುಮಾನಾಸ್ಪದ ಬ್ಯಾಂಕ್ ವಹಿವಾಟು ಹಾಗೂ ಡಿಜಿಟಲ್ ಪಾವತಿಗಳ ಮೇಲೆ ನಿಗಾ ಇಡಬೇಕು. ಭಾರಿ ಮೊತ್ತದ ಅವ್ಯವಹಾರ ಹಾಗೂ ಅನುಮಾನಾಸ್ಪದ ವಹಿವಾಟು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಶನಿವಾರ ನಗರದ ಹಳೇ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾದರಿ ನೀತಿ ಸಂಹಿತೆ ಅನ್ವಯವಾಗುವ ಬ್ಯಾಂಕ್ ವ್ಯವಹಾರಗಳ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು. ಲೋಕಸಭೆ ಚುನಾವಣೆಯಲ್ಲಿ ಆಮಿಷಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಅಕ್ರಮ ಯತ್ನಗಳನ್ನು ತಡೆಯಲು ಚುನಾವಣಾ ಆಯೋಗವು ಅನುಮಾನಾಸ್ಪದ ಬ್ಯಾಂಕ್ ವಹಿವಾಟು ಮತ್ತು ಡಿಜಿಟಲ್ ಪಾವತಿಗಳನ್ನು ಕಟ್ಟುನಿಟ್ಟಾಗಿ ಗಮನಿಸುತ್ತಿದೆ.

ಜಿಲ್ಲೆಯಲ್ಲಿ ಸದ್ಯ ೫ ಬ್ಯಾಂಕ್ ಗಳಲ್ಲಿ ಮಾತ್ರ ಅನುಮಾನಾಸ್ಪದ ವಹಿವಾಟು ನಡೆದಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದು, ಇತರೆ ಬ್ಯಾಂಕ್ ಗಳಿಂದ ಮಾಹಿತಿ ಬರಬೇಕು. ಇಂತಹ ವಹಿವಾಟುಗಳ ಬಗ್ಗೆ ತಕ್ಷಣ ಮಾಹಿತಿ ಸಲ್ಲಿಸುವಂತೆ ಬ್ಯಾಂಕ್ ಅಧಿಕಾರಿಗಳು ಸೂಚಿಸಿದರು. ಚೆಕ್ ಪೋಸ್ಟ್ ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೫೦ ಸಾವಿರ ನಗದು ಹಣವನ್ನು ಕೂಡಲೇ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಅನಧಿಕೃತ ಹಣದ ಸಗಣಿ ತಡೆಯಲು ತೀವ್ರ ನಿಗಾ ವಹಿಸಲಾಗಿದೆ. ೧೦೦ ಕ್ಕೂ ಹೆಚ್ಚು ಮಹಿಳಾ ಬ್ಯಾಂಕ್ ಖಾತೆದಾರರು ೫೦೦, ೧೦೦೦ ರೂಪಾಯಿಗಳ ನಗದು ವರ್ಗಾವಣೆಯಲ್ಲಿ ಅಂತಹ ಖಾತೆಗಳನ್ನು ಸ್ಥಗಿತಗೊಳಿಸಬೇಕು.

ಚುನಾವಣಾ ಅಭ್ಯರ್ಥಿಗಳು ೯೫ ಲಕ್ಷ ಚುನಾವಣಾ ಪ್ರಚಾರದ ಮಿತಿಯನ್ನು ಹೊಂದಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ ೧೦ ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ಗೆ ಠೇವಣಿ ಇಡಲು ಅವಕಾಶವಿರುವುದಿಲ್ಲ. ಅಂತಹ ಖಾತೆದಾರರಿದ್ದರೆ, ಆದಾಯ ತೆರಿಗೆ ನೋಡಲ್ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಸೂಚಿಸಬೇಕು. ಆದಾಯ ತೆರಿಗೆ ನೋಡಲ್ ಅಧಿಕಾರಿಗಳನ್ನು ತಕ್ಷಣವೇ ಸಂಪರ್ಕಿಸಿ ಮತ್ತು ಬೃಹತ್ ಮೊತ್ತದ ವಹಿವಾಟಿನ ಮಾಹಿತಿಯನ್ನು ನೀಡಬೇಕು. ಡಿಜಿಟಲ್ ಪಾವತಿ ಮೂಲಕ ಇತರೆ ಸಂಖ್ಯೆಗಳಿಗೆ ಹಣ ವರ್ಗಾವಣೆ ಮಾಡುವ ಬಗ್ಗೆಯೂ ಯುಪಿಐಗೆ ಮಾಹಿತಿ ನೀಡಬೇಕು ಎಂದು ಮಾಹಿತಿ ನೀಡಿದೆ.

RELATED ARTICLES
- Advertisment -
Google search engine

Most Popular