Thursday, May 22, 2025
Google search engine

Homeಅಪರಾಧಯಶ್ ಬೆಂಗಾವಲು ವಾಹನಕ್ಕೆ ಡಿಕ್ಕಿ: ಗಾಯಗೊಂಡಿದ್ದ ಯುವಕ  ಸಾವು

ಯಶ್ ಬೆಂಗಾವಲು ವಾಹನಕ್ಕೆ ಡಿಕ್ಕಿ: ಗಾಯಗೊಂಡಿದ್ದ ಯುವಕ  ಸಾವು

ಗದಗ: ನಟ ಯಶ್ ಅವರನ್ನು ನೋಡುವ ಭರದಲ್ಲಿ ಸ್ಕೂಟಿಯನ್ನು ವೇಗವಾಗಿ ಚಲಿಸುತ್ತಿದ್ದ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಸೋಮವಾರ ರಾತ್ರಿ ಗಾಯಗೊಂಡಿದ್ದ ಯುವಕ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ.

ತಾಲೂಕಿನ ಬಿಂಕದಕಟ್ಟಿ ನಿವಾಸಿ ನಿಖಿಲಗೌಡ ಭೀಮನಗೌಡ್ರ ಗೌಡರ(22) ಮೃತ ಯುವಕ.

ಸೋಮವಾರ ಮುಳಗುಂದ ರಸ್ತೆಯಲ್ಲಿ ಉಂಟಾದ ಅಪಘಾತದಲ್ಲಿ ಗಾಯಗೊಂಡಿದ್ದ ನಿಖಿಲಗೌಡ ಅವರನ್ನು ಜಿಮ್ಸ್ ನಲ್ಲಿ ದಾಖಲಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಮೃತ ನಿಖಿಲಗೌಡ ಲಕ್ಷ್ಮೇಶ್ವರ ತಾಲೂಕಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ‌ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು. ನಿನ್ನೆ ಯಶ್ ನೋಡಲು ಸೂರಣಗಿ ‌ಗ್ರಾಮಕ್ಕೂ ತೆರಳಿದ್ದ ಎನ್ನಲಾಗಿದೆ. ಆದರೆ ಅಲ್ಲೂ ಯಶ್ ನೋಡಲು ಆಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular