ಮಂಡ್ಯ: ಪಿಡಬ್ಲ್ಯೂಡಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹರ್ಷ ವಿರುದ್ಧ ಕಮಿಷನ್ ಆರೋಪ ಹಿನ್ನಲೆ ಆರ್ ಟಿಐ ಕಾರ್ಯಕರ್ತ ಗೋವಿಂದ ರಾಜು ವಿರುದ್ಧ ಗುತ್ತಿಗೆದಾರರಿಂದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯದ ಪಿಡಬ್ಲ್ಯೂಡಿ ಕಚೇರಿ ಬಳಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಯತೀರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಆರ್ ಟಿಐ ಕಾರ್ಯಕರ್ತ ಗೋವಿಂದ ರಾಜು ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಪಪ್ರತಿಭಟನಾಕಾರರು, ಅಧಿಕಾರಿ ಹರ್ಷರವರ ಮೇಲೆ ಬಂದಿರೋ ಆರೋಪ ಶುದ್ಧ ಸುಳ್ಳು. ಹೊಸ ಸರ್ಕಾರ ಬಂದು ಇನ್ನು ಮೂರು ತಿಂಗಳು ಕಳೆದಿಲ್ಲ. ಇಲ್ಲಿವರೆಗೂ ಯಾವುದೇ ಬಿಲ್ ಗಳು ಕೂಡ ಆಗಿಲ್ಲ ಹಾಗಾಗಿ ಕಮಿಷನ್ ಕೊಡುವ ಪ್ರಮೇಯವೇ ಬರುವುದಿಲ್ಲ. ಗೋವಿಂದರಾಜು ಕಳಿಸಿರುವ ಆಡಿಯೋ ನಮ್ಮ ಯಾವ ಗುತ್ತಿಗೆದಾರರು ಕೂಡ ಮಾತನಾಡಿರುವುದಲ್ಲ. ಫೇಕ್ ಆಡಿಯೋ ವನ್ನು ಹರಿಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ನಮ್ಮ ಯಾವ ಗುತ್ತಿಗೆದಾರರು ಭಾಗವಹಿಸಿಲ್ಲ. ಗೋವಿಂದರಾಜು ಗುತ್ತಿಗೆದಾರನು ಸಹ ಅಲ್ಲ, ಅವನು ಆರ್ ಟಿಐ ಹೆಸರೇಳಿ ಮೊದಲಿನಿಂದಲೂ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿಕೊಂಡು ಬಂದಿದ್ದಾನೆ. ಅವನು ಮಾಡುತ್ತಿರುವ ಆರೋಪ ಶುದ್ದ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.