Saturday, October 11, 2025
Google search engine

Homeರಾಜ್ಯಸುದ್ದಿಜಾಲವೈಯಕ್ತಿಕ ದ್ವೇಷದಿಂದ ಐಎಎಸ್ ಅಧಿಕಾರಿ ವಿರುದ್ಧ ದೂರು: ಶೃಂಗಾರ್ ಆರೋಪಕ್ಕೆ ತಾಲೂಕು ತಂಬಾಕು...

ವೈಯಕ್ತಿಕ ದ್ವೇಷದಿಂದ ಐಎಎಸ್ ಅಧಿಕಾರಿ ವಿರುದ್ಧ ದೂರು: ಶೃಂಗಾರ್ ಆರೋಪಕ್ಕೆ ತಾಲೂಕು ತಂಬಾಕು ಕ್ಷೇಮಾಭಿವೃದ್ಧಿ ಸಂಘ ಖಂಡನೆ

ಹುಣಸೂರು: ಕೆ.ಎಂ.ವಾಡಿಯ ತಂಬಾಕು ಮಾರುಕಟ್ಟೆಯಲ್ಲಿ ತಂಬಾಕು ಮಂಡಳಿ ಟೆಂಡರ್ ನಲ್ಲಿ ಗುತ್ತಿಗೆ ಲೇಬರ್ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಶೃಂಗಾರ್ ಎಂಬ ಯುವಕ ದಕ್ಷ ಹಾಗೂ ಐಎಎಸ್ ಅಧಿಕಾರಿ ತಂಬಾಕು ಮಂಡಳಿ ನಿರ್ದೇಶಕ ಶ್ರೀನಿವಾಸ್ ಮೇಲೆ ಪೊಲೀಸ್ ಇಲಾಖೆಗೆ ದೂರು ನೀಡಿರುವ ಕ್ರಮವನ್ನು ತಾಲೂಕು ತಂಬಾಕು ಕ್ಷೇಮಾಭಿವೃದ್ಧಿ ಸಂಘ ಖಂಡಿಸುತ್ತದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ‌ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಟೆಂಡರ್ ವಿಚಾರದಲ್ಲಿ ಒಬ್ಬ ವ್ಯಕ್ತಿ ನಿರ್ಧರಿಸಲು ಸಾಧ್ಯವಿಲ್ಲವಾಗಿದ್ದು ಅಲ್ಲಿ ಹತ್ತಾರು ಜನರು ಟೆಂಡರ್ ಪ್ರಕ್ರಿಯಲ್ಲಿ ಭಾಗವಹಿಸಿರುತ್ತಾರೆ. ಒಬ್ಬರಿಗೆ ಮೋಸ ಮಾಡಲಾಗದು. ನಿರ್ಧಾರ ತಂಬಾಕು ಮಂಡಳಿ ಆಯ್ಕೆಯಾಗಿದ್ದು, ಶ್ರೀನಿವಾಸ್ ರೈತರ ಪರ ಕೆಲಸಮಾಡುವ ಐಎಎಸ್ ಅಧಿಕಾರಿ ಅವರ ಮೇಲೆ ದ್ವೇಷದಿಂದ ದೂರು ನೀಡಿ, ಜಾತಿ ಬಣ್ಣ ಕಟ್ಟುತ್ತಿರುವುದು ಸಮಂಜಸವಲ್ಲ ಎಂದರು.

ತಾಲೂಕು ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ ಮಾತನಾಡಿ, ಒಬ್ಬ ಅಧಿಕಾರಿ, ಅದು ಅಲ್ಲದೆ ಕನ್ನಡದ ಅಧಿಕಾರಿಗೆ ಪ್ರೋತ್ಸಾಹಿಸುವ ಬದಲು ಸುಳ್ಳು ದೂರು ನೀಡಿ‌ ಕಿರುಕುಳ ಕೊಡುವುದು ನೋವಿನ ವಿಷಯವಾಗಿದ್ದು ಈ ಕೂಡಲೇ ಕೇಸು ವಾಪಸು ಪಡೆಯಲು ಆಗ್ರಹಿಸಿದರು.

ಬಿ.ಎನ್.ನಾಗರಾಜಪ್ಪ ಮಾತನಾಡಿ, ತಂಬಾಕು ಮಂಡಳಿಯಲ್ಲಿ ಕನ್ನಡ ಬಲ್ಲ ಅಧಿಕಾರಿಗಳನ್ನು ಕಾಣುವುದು ಅಪರೂಪವಾಗಿದೆ. ಇಂತಹ ಸಂದರ್ಭದಲ್ಲಿ ಇಂತಹ ಆರೋಪ ಉತ್ತಮ ಬೆಳವಣಿಗೆಯಲ್ಲವೆಂದರು.

ಸುದ್ದಿ ಗೋಷ್ಠಿಯಲ್ಲಿ ತಾಲೂಕು ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಸಿ.ಚಂದ್ರೇಗೌಡ, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಮಹದೇವ್,ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

RELATED ARTICLES
- Advertisment -
Google search engine

Most Popular