Sunday, May 25, 2025
Google search engine

Homeರಾಜ್ಯಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ಬರುತ್ತಿವೆ, ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ: ಮಧು ಬಂಗಾರಪ್ಪ

ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ಬರುತ್ತಿವೆ, ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ: ಮಧು ಬಂಗಾರಪ್ಪ

ಮೈಸೂರು: ಅವನ್ಯಾರೋ ಚಕ್ರವರ್ತಿ ಸೂಲಿಬೆಲೆಯಂತೆ. ತಲೆಹರಟೆ, ಅವನಿಗೆ ಮಾನ ಮರ್ಯಾದೆಯಿಲ್ಲ. ಶುಕ್ರವಾರ ನಮಾಜ್‌ ಗೆ ಅವಕಾಶ ನೀಡಲು ಪರಿಕ್ಷಾ ವೇಳಾಪಟ್ಟಿ ಬದಲಿಸಿದ್ದಾರೆಂದು ಟ್ವೀಟ್ ಮಾಡಿದ್ದಾನೆ. ಇದು ವಿಷ ಬಿತ್ತ ಬೀಜುವ ಕೆಲಸ ಅಲ್ಲವೇ ಎಂದು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಕಾಮನ್ ಸೆನ್ಸ್ ಇಲ್ಲದೆ ಏನೇನೋ ಹೇಳುತ್ತಾರೆ. ಭಾವನಾತ್ಮಕ ಮಾಡಿದಷ್ಟೂ ನಿಮ್ಮನ್ನು ರಾಜ್ಯದ ಜನ ದೂರು ತಳ್ಳುತ್ತಾರೆ. ಅವನ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪಿಯುಸಿ ಪರೀಕ್ಷೆಗಳು ಇರುವ ಕಾರಣಕ್ಕೆ ಸ್ಥಳ ಸರಿದೂಗಿಸಲು ಶುಕ್ರವಾರ ಸಮಯ ಬದಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದವರು. ಅವರಿಗೂ ಇದೆಲ್ಲ ಗೊತ್ತಾಗಬೇಕಿತ್ತು. ಯಾವುದೋ ಮೂಲೆಯಲ್ಲಿ ಕುಳಿತು ಟ್ವಿಟ್ ಮಾಡುವುದು ಸರಿಯಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ಕುಮಾರ ಬಂಗಾರಪ್ಪ ಕಾಂಗ್ರೆಸ್ ಸೇರುವ ವಿಚಾರವಾಗಿ ಪ್ರಶ್ನೆ ಕೇಳುತ್ತಿದಂತೆ ಮಧು ಬಂಗಾರಪ್ಪ ಕೋಪಗೊಂಡರು. ನಾನು ಆ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ. ನನ್ನಿಂದ ಯಾವ ಉತ್ತರ ನೀರಿಕ್ಷೆ ಮಾಡಬೇಡಿ‌. ಅದೇ ನನ್ನ ಉತ್ತರ. ಬೇರೆ ಯಾರಾದರೂ ಬಗ್ಗೆ ಕೇಳಿ ಹೇಳುತ್ತೇನೆ ಎಂದರು.

RELATED ARTICLES
- Advertisment -
Google search engine

Most Popular