Wednesday, August 6, 2025
Google search engine

Homeರಾಜ್ಯಸುದ್ದಿಜಾಲಮಂಜುನಾಥ ಬಡಾವಣೆಯ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ: ಶಾಸಕ ಜಿ.ಡಿ. ಹರೀಶ್ ಗೌಡ

ಮಂಜುನಾಥ ಬಡಾವಣೆಯ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ: ಶಾಸಕ ಜಿ.ಡಿ. ಹರೀಶ್ ಗೌಡ

ಹುಣಸೂರು: ಮಂಜುನಾಥ ಬಡಾವಣೆಯ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯವಾಗಿದೆ ಎಂದು ಶಾಸಕ ಜಿ.ಡಿಹರೀಶ್ ಗೌಡ ತಿಳಿಸಿದರು.

ನಗರದ ಮಂಜುನಾಥ ಬಡಾವಣೆಯ ರಾಜಕಾಲುವೆಗೆ ಸೇರುವ ಸಿಸಿ ಚರಂಡಿ 41 ಲಕ್ಷದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಲವಾರು ವರುಷದಿಂದ ಪ್ರತಿವರ್ಷ ಮಳೆಗಾಲದಲ್ಲಿ ಮನೆಗೆ ಮಖೆ ನೀರು ನುಗ್ಗಿ ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದರು ಅದಕ್ಕೆ ಪರಿಹಾರ ಸಿಕ್ಕಿದೆ. ಹoತ-ಹoತವಾಗಿ ಯುಜಿಡಿ, ಚರಂಡಿ, ರಸ್ತೆಗಳನ್ನು ನಿರ್ಮಿಸಲಾಗುವುದು ಎಂದರು.

ಈಗ ಮತ್ತೆ 40 ಲಕ್ಷ ಹಣ ಬಿಡುಗಡೆಯಾಗಿದ್ದು, ಆ ಹಣವನ್ನೂ ಕೂಡ ಅಗತ್ಯವಿರುವ ಕಡೆ ಬಳಕೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಒಟ್ಟಾರೆ ನಗರ ಸಭೆಯಲ್ಲಿ 15 ನೇ ಹಣಕಾಸು ಯೋಜನೆಯಲ್ಲಿ ಎರಡು ವರುಷದಲ್ಲಿ ಬರಿ ಮಂಜುನಾಥ ಬಡಾವಣೆಗೆ 5.5. ಕೋಟಿ ಹಣವನ್ನು ವ್ಯಯಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಂಜುನಾಥ ಬಡಾವಣೆಯಲ್ಲಿ ಅಷ್ಟು ಹಣ ಖರ್ಚು ಮಾಡಿದರೂ ಮಂಜುನಾಥ ದೇವಸ್ಥಾನದಿಂದ ಎಪಿಎಂಸಿ ಮಾರುಕಟ್ಟೆಯವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲವೆಂದು ಶಾಸಕರಿಗೆ ದೂರು ನೀಡಿದರು. ಎಲ್ಲವನ್ನು ಆಲಿಸಿದ ಶಾಸಕರು ಇಪ್ಪತ್ತು ವರ್ಷ ಕಾದಿದ್ದೀರ’.. ಇನ್ನು ಆರು ತಿಂಗಳು ಕಾಲಾವಕಾಶ ಕೊಡಿ ಎಲ್ಲವನ್ನು ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, 25-26ನೇ ಶಾಲಿನ ವಿಪತ್ತು ಉಪಶಮನ ಅನುದಾನದಲ್ಲಿ ಶಾಸಕರು ಎಲ್ಲಾ ವಾರ್ಡಿಗಿಂತ ಹೆಚ್ಚು ಕಾಮಗಾರಿಯನ್ನು ಮಂಜುನಾಥ ಬಡಾವಣೆಗೆ ಆದ್ಯತೆ ನೀಡಿದ್ದು ಶಾಸಕರ ಕಾರ್ಯ ವೈಖರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ನಗರಸಭೆ ಸದಸ್ಯರಾದ ಶ್ವೇತ,ದೇವರಾಜು, ಕೃಷ್ಣರಾಜ ಗುಪ್ತ, ಸತೀಶ್ ಕುಮಾರ್, ಶರವಣ, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು, ನಾಗರಾಜು, ನಗರಸಭೆ ಪೌರಾಯುಕ್ತೆ ಮಾನಸ, ಇಂಜಿನಿಯರ್, ಶರ್ಮಿಳಾ, ಲೋಕೇಶ್, ಶಿವಕುಮಾರ್ ಇದ್ದರು.

RELATED ARTICLES
- Advertisment -
Google search engine

Most Popular