ಚಾಮರಾಜನಗರ: ವಿಶ್ವದ ಶ್ರೇಷ್ಠ ಸಾಹಿತಿಗಳು, ಕನ್ನಡದ ಅಪ್ರತಿಮ ಬರಹಗಾರ ,ತತ್ವಜ್ಞಾನಿ, ಮಹಾ ಜ್ಞಾನೀ, ಇತಿಹಾಸದ ಸಂಶೋಧಕರು, ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿದ್ದ ಎಸ್ ಎಲ್ ಬೈರಪ್ಪನವರ ನಿಧನ ಇಡೀ ವಿಶ್ವದ ಸಾಹಿತ್ಯ ವಲಯಕ್ಕೆ ನಷ್ಟ ಉಂಟಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಉಪಾಧ್ಯಕ್ಷರು ,ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆದ ಸುರೇಶ್ ಎನ್ ಋಗ್ವೇದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್ ಎಲ್ ಭೈರಪ್ಪನವರು ಬಡತನದ ನೋವಿನಲ್ಲಿ ಬೆಳೆದು ಸಾಹಿತ್ಯ ಪ್ರಪಂಚದ ಅಪ್ರತಿಮ ಪ್ರಖಂಡ ಬುದ್ಧಿಶಕ್ತಿ, ವಿವೇಕ, ಅಧ್ಯಯನ, ಚಿಂತನೆ, ಸಮರ್ಪಣೆ, ತ್ಯಾಗ, ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾದ ಸಾಹಿತ್ಯವನ್ನು ರಚಿಸಿ ಭಾರತೀಯ ಧರ್ಮ, ಸಂಸ್ಕೃತಿ, ಪರಂಪರೆ ,ತತ್ವಜ್ಞಾನ, ಸಮಗ್ರ ಜೀವನ ಮೌಲ್ಯಗಳನ್ನು ತಮ್ಮ ಸಾಹಿತ್ಯದ ಮೂಲಕ ಜಗತ್ತಿಗೆ ಅರ್ಪಿಸಿದವರು . ಕನ್ನಡಿಗರಾಗಿ ಕನ್ನಡ ಸಾಹಿತ್ಯವನ್ನು ವಿಶ್ವಕ್ಕೆ ಖ್ಯಾತಗೊಳಿಸಿದ ಭೈರಪ್ಪನವರು 94 ವರ್ಷಕ್ಕೂ ಮಿಗಿಲಾಗಿ ತಮ್ಮ ಜೀವನವನ್ನು ನಡೆಸಿ ಸಂತೃಪ್ತವಾಗಿ ಪೂರ್ಣ ಸುಖಮಯವಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿ ಮರೆಯಾಗಿರುವುದು ಎಲ್ಲರಿಗೂ ನೋವನ್ನು ಉಂಟು ಮಾಡಿದೆ ಎಂದು ಋಗ್ವೇದಿ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.