Thursday, May 22, 2025
Google search engine

Homeರಾಜ್ಯಖಾಸಗಿ ಬಸ್’ನಲ್ಲಿ ವಕೀಲೆಯನ್ನು ನಿಂದಿಸಿದ ಕಂಡಕ್ಟರ್: ದೂರು ದಾಖಲು

ಖಾಸಗಿ ಬಸ್’ನಲ್ಲಿ ವಕೀಲೆಯನ್ನು ನಿಂದಿಸಿದ ಕಂಡಕ್ಟರ್: ದೂರು ದಾಖಲು

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಲ್ಲಿ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ವಕೀಲೆಗೆ ಕಂಡೆಕ್ಟರ್ ನೋರ್ವ ಸಾರ್ವಜನಿಕವಾಗಿ ನಿಂದಿಸಿದ ಘಟನೆ ನಡೆದಿದೆ. ಈ ಬಗ್ಗೆ ಬಸ್ ಚಾಲಕ ಮತ್ತು ಕಂಡೆಕ್ಟರ್ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿಯಾಗಿರುವ ಕೆ.ಮುಫೀದಾ ರಹ್ಮಾನ್ ಅವರು ವೃತ್ತಿಯಲ್ಲಿ ವಕೀಲೆಯಾಗಿದ್ದು, ಮಂಗಳೂರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಫೀದಾ ಅವರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್‌ ನಿಂದ ಸ್ಟೇಟ್‌ ಬ್ಯಾಂಕ್ ಕಡೆಗೆ ತೆರಳುವ ಖಾಸಗಿ ಬಸ್ಸಿಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಾನು ಬಸ್ಸಿಗೆ ಹತ್ತುವಾಗ ಚಾಲಕನು ದುಡುಕಿನಿಂದ ಮುಂದಕ್ಕೆ ಚಲಾಯಿಸಿದ. ಇದೇ ವೇಳೆ ಕೆಳಗೆ ಬೀಳುವ ಸಂಭವ ಇದ್ದುದರಿಂದ ಬೊಬ್ಬೆ ಹಾಕಿದೆ. ಆದರೂ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ. ಈ ವೇಳೆ ಬಸ್ ಕಂಡೆಕ್ಟರ್ ನನ್ನ ಕೈ ಹಿಡಿದೆಳೆದು ನಿಮಗೆ ಬೇಗ ಬಸ್ಸಿಗೆ ಹತ್ತಲು ಆಗುವುದಿಲ್ಲವಾ? ಬಿದ್ದು ಸಾಯುತ್ತೀಯಾ? ಎಂದು ಬೈದಿದ್ದಾನೆ. ಇದಕ್ಕೆ ನಾನು ಪ್ರತಿರೋಧ ತೋರಿದಾಗ ‘ಮುಸ್ಲಿಂ ಹೆಂಗಸರಿಗೆ ತುಂಬಾ ಅಹಂಕಾರ. ಬೇಕಾದರೆ ನಮ್ಮ ಬಸ್ಸಲ್ಲಿ ಬರಬೇಕು. ಇಲ್ಲದಿದ್ದರೆ ಇಳಿಯಬೇಕು’ ಎಂದು ತಾನು ಬಸ್ಸಿನಿಂದ ಇಳಿಯುವವರೆಗೆ ನನಗೆ ಅವಾಚ್ಯ ಶಬ್ದದಿಂದ ಬೈದು ಸಾರ್ವಜನಿಕರ ಮುಂದೆ ಮಾನಹಾನಿಗೊಳಿಸಿದ್ದಾನೆ.

ತಾನು ಆತನ ಫೋಟೋವನ್ನು ಮೊಬೈಲ್‌ ನಲ್ಲಿ ತೆಗೆಯುವಾಗ ನಿನಗೆ ಏನು ಮಾಡಲು ಸಾಧ್ಯವಿದೆ. ಅದನ್ನು ಮಾಡು ಎಂದಿದ್ದಾನೆ. ಹಾಗಾಗಿ ಬಸ್ಸನ್ನು ಹತ್ತುವಾಗ ಕೆಳಗೆ ಬೀಳುವಂತಾದರೂ ನಿಲ್ಲಿಸದ ಚಾಲಕನ ಹಾಗೂ ಬಸ್ಸಿನಲ್ಲಿ ಉಡಾಫೆಯಿಂದ ವರ್ತಿಸಿ ಮಾನಸಿಕ ಕಿರುಕುಳ ನೀಡಿದ ಕಂಡೆಕ್ಟರ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಮಂಗಳೂರಿನ ಕದ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular