ಮೈಸೂರು: ಮೈಸೂರುಕೊಡಗು ಲೋಕಸ ಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್‌ರವರನ್ನು ಹೆಚ್ಚಿನ ಮತಗಳ ಅಂತರದಿಂದಗೆಲ್ಲಿಸಬೇಕೆಂದು ಮುಡಾಅಧ್ಯಕ್ಷ ಕೆ.ಮರೀಗೌಡಕರೆ ನೀಡಿದರು.
ರಾಮಕೃಷ್ಣ ನಗರದ ೫೮ನೇ ವಾರ್ಡ್‌ನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮತಯಾಚಿಸಿ ಮಾತನಾಡಿದ ಅವರು ಮೋದಿ ನೇತೃತ್ವದ ಬಿ.ಜೆ.ಪಿ ಸರ್ಕಾರಎಲ್ಲರಖಾತೆಗೆ ೧೫ ಲಕ್ಷ ಹಾಕುತ್ತೇವೆ ಎಂದರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆಂದು ಸುಳ್ಳು ಭರವಸೆ ನೀಡಿದಜಿ.ಜೆ.ಪಿ ಸರ್ಕಾರವನ್ನು ನಂಬಬೇಡಿ, ನುಡಿದಂತೆ ನಡೆದು ೫ ಗ್ಯಾರೆಂಟಿಗಳನ್ನು ಅಧಿಕಾರಕ್ಕೆ ಬಂದ ೯ತಿಂಗಳಲ್ಲಿಯೇ ಜಾರಿಗೊಳಿಸಿದ ಸಿದ್ಧರಾಮಯ್ಯನವರ ನೇತೃತ್ವದಕಾಂಗ್ರೆಸ್ ಪಕ್ಷವನ್ನುಎಲ್ಲರೂ ಬೆಂಬಲಿಸಬೇಕು ಎಂದಅವರು, ಎಂ.ಲಕ್ಷ್ಮಣ್‌ರವರು ಸಾಮಾನ್ಯ ಸರಳ ವ್ಯಕ್ತಿ, ಎಲ್ಲರ ಕಷ್ಟ ಸುಖಗಳಿಗೆ ಸ್ಪಂಧಿಸುವ ವ್ಯಕ್ತಿ,ಬಿ.ಜೆ.ಪಿಯಅಭ್ಯರ್ಥಿ ಸಾಮಾನ್ಯಜನರಿಗೆ ಸಿಗುವುದಿಲ್ಲಆದ್ದರಿಂದ ಎಂ.ಲಕ್ಷ್ಮಣ್‌ರವರನ್ನು ಹೆಚ್ಚು ಮತಗಳ ಅಂತರದಿಂದಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ೫ ಗ್ಯಾರೆಂಟಿಗಳು ಪ್ರತಿ ಮನೆಯನ್ನೂತಲುಪಿವೆ, ಶಕ್ತಿ ಯೋಜನೆಯಡಿಯಲ್ಲಿ ೧೭೦ಕೋಟಿ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತೀ ಬಡಕುಟುಂಬದ ಮಹಿಳೆಗೆ ಮಹಾಲಕ್ಷ್ಮಿ ಯೋಜನೆಯಡಿವರ್ಷಕ್ಕೆ ೧ಲಕ್ಷ ರೂ ನೀಡುತ್ತೇವೆ, ೨೦೧೩ರಿಂದ ೨೦೧೮ರ ವರೆಗೆ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಮೈಸೂರಿಗೆ ೮ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದರು, ಮಹಾರಾಣಿಕಾಲೇಜು, ಹಾಸ್ಟೆಲ್, ಕಾಂಕ್ರೀಟ್‌ರಸ್ತೆ, ೨೪ ಗಂಟೆಕುಡಿಯುವ ನೀರನ್ನು ನೀಡಿದ್ದಾರೆ, ಬಿ.ಜೆ.ಪಿ ಯವರ ಬಣ್ಣದ ಮಾತಿಗೆ ಮರುಳಾಗದೆ ಭಾವನಾತ್ಮಕ ವಿಚಾರ, ಧರ್ಮದ ವಿಚಾರಗಳಿಗೆ ಕಿವಿಕೊಡದೆಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರ ಮೂಲಕ ನನಗೆ ಆಶೀರ್ವಾದ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾಕಾಂಗ್ರೆಸ್ ಅಧ್ಯಕ್ಷಡಾ. ಬಿ ಜೆ ವಿಜಯಕುಮಾರ್, ಜಿ ಪಂ ಮಾಜಿ ಅಧ್ಯಕ್ಷ ಬಿ.ಎಂ ರಾಮು, ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷ ಬಿ.ಗುರು ಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಉದ್ಯಮಿಕೃಷ್ಣಕುಮಾರ್ ಸಾಗರ್, ಡಿ ಸಿ ಸಿ ಸದಸ್ಯ ಬಿ.ರವಿ, ಬಿ.ಎಸ್.ಎನ್.ಎಲ್ ಮಾದೇಗೌಡ, ಕೊಪ್ಪಲ್‌ರಾಜಣ್ಣ, ದಡದಹಳ್ಳಿ ಮಹದೇವ, ಕ್ಯಾತನಹಳ್ಳಿ ಪ್ರಕಾಶ್, ಮಹದೇವ್, ಮಲ್ಲೇಶ್, ಫರ್ಜಾನಾ, ಅನಂದೂರುರಾಮೇಗೌಡ, ಯಧುಕುಮಾರ್, ಪ್ರಕಾಶ್, ಧನಗಳ್ಳಿ ಬಸವರಾಜು, ರಾಜೇಶ್,ಚಂದ್ರುಹಾಜರಿದ್ದರು.