ಮಂಡ್ಯ: ಕಾಂಗ್ರೆಸ್ ದೊಂಬರಾಟ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಡೆಯಲ್ಲ. 50-60 ಕಾಂಗ್ರೆಸ್ ಆಡಳಿತ ನೋಡಿದ್ದಾರೆ, ಈಗ ಮೋದಿ ಆಡಳಿತ ನೋಡಿ ಜನರು ಸಂತೋಷದಿಂದ ಇದ್ದಾರೆ. ಮೋದಿ ಅವರ ಕೈ ಬಲ ಪಡಿಸಬೇಕು ಅಂತ ಕರ್ನಾಟಕದಲ್ಲಿ ಹೊಸ ಸಂಚಲನ ಮೂಡಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ತಿಳಿಸಿದರು.
ಮಾಜಿ ಸಚಿವ ಬಂಡೆಪ್ಪ ಖಾಶಂಪುರ ಮಂಡ್ಯದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಲೋಕಸಭಾ ಚುನಾವಣೆ ಏ.26ಕ್ಕೆ ನಡೆಯುತ್ತದೆ. ಹೆಚ್ ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ.ಕುಮಾರಣ್ಣ ಚುನಾವಣೆಗೆ ನಿಂತಿರುವುದು ನಮ್ಮ ಸೌಭಾಗ್ಯ ಎಂದರು.
ಕಾಂಗ್ರೆಸ್ ನಲ್ಲಿ ಯಾವುದೇ ಮಂತ್ರಿಗಳು ಸ್ಪರ್ಧೆ ಮಾಡಿಲ್ಲ, ರಿಸ್ಕ್ ತೆಗೆದುಕೊಂಡಿಲ್ಲ ಖುರ್ಚಿ ಭದ್ರತೆ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ರಿಸ್ಕ್ ತೆಗೆದುಕೊಂಡು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿದ್ದಾರೆ.
ಹಿಂದೆ ಭಾಗ್ಯಗಳನ್ನು ಕೊಟ್ಟರು 73 ಸೀಟ್ ಗೆ ಬಂದರು. ಈಗ ಮನೆ ಮನೆಗೆ ಚೆಕ್ ರೀತಿ ಗ್ಯಾರಂಟಿ ಬಾಂಡ್ ಕೊಡ್ತಿದ್ದಾರೆ. ಇವರ ಗ್ಯಾರಂಟಿ ನಂಬಿ ಜನ ಓಟ್ ಹಾಕಲ್ಲ. ಕಾಂಗ್ರೆಸ್ ನವರು ಗ್ಯಾರಂಟಿ ಅನ್ನೋದನ್ನ ಜಂಬ ಕೊಚ್ಚಿಕೊಳ್ತಿದ್ದಾರೆ. ಬಡಜನರು ನಂಬಿ ಓಟ್ ಹಾಕಿದ್ರು ಜನರಿಗೆ ಮೋಸ ಮಾಡಿದ್ರು. ರಾಜ್ಯದಲ್ಲಿ ಒಂದು ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಕಿಡಿಕಾರಿದರು.
60 ಸಾವಿರ ಕೋಟಿ ಗ್ಯಾರಂಟಿ ಗೆ ಕೊಡ್ತಾರೆ ಆದ್ರೆ ಅಭಿವೃದ್ಧಿ ? ಮಹಿಳೆಯರಿಗೆ ಒಂದು ಲಕ್ಷ ಅಂತಾರೆ ವಾಸ್ತವವಾಗಿ ಸತ್ಯ ಹೇಳಿ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಗ್ಯಾರಂಟಿಯಲ್ಲಿ ರೈತ ಪರ ವಾದ ಗ್ಯಾಇಲ್ಲ, ಅನ್ನದಾತನಿಗೆ ಕೊಡಬೇಕು ಅಲ್ವಾ? ನಾವು 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ವಿ? ತೆಲಂಗಾಣದಲ್ಲಿ ಸಾಲ ಮನ್ನಾ ಅಂತಿರಿ ಕರ್ನಾಟಕದಲ್ಲಿ ಯಾಕೆ ಇಲ್ಲ? ರೈತರು ಸಂಕಷ್ಟದಲ್ಲಿದ್ದಾರೆ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಕಣದಲ್ಲಿದ್ದಾರೆ, ಹಿಂದುಳಿದ ವರ್ಗ, ಕುರುಬ ಸಮುದಾಯದವರು ಕೈ ಬಲ ಪಡಿಸಿ. ಮುಂದಿನ ದಿನಗಳಲ್ಲಿ ರಾಜ್ಯ ಅಭಿವೃದ್ಧಿಯಾಗಬೇಕು. ಜೆಡಿಎಸ್-ಬಿಜೆಪಿ ಒಳ್ಳೆಯ ಸಂಬಂಧ ಇದೆ. ಮಂಡ್ಯ ಅಂದ್ರೆ ಅದು ಕಾವೇರಿ ಹೆಸರುವಾಸಿ. ಕಾವೇರಿ ಸಮಸ್ಯೆಯಾದರೆ ಎಲ್ಲರು ಹೋರಾಟ ಮಾಡ್ತಾರೆ. ಮೇಕೆದಾಟು ಯೋಜನೆ, ಇನ್ನು ಮಾಡಿಲ್ಲ ಎಂದರು.
ಈ ಬಾರಿ ಮಂಡ್ಯ ಜನರು ಕುಮಾರಸ್ವಾಮಿ ಅವರಿಗೆ ಜನ ಬೆಂಬಲ ಕೊಡ್ತಾರೆ. ಮಂಡ್ಯದ ಜೊತೆಗೆ ರಾಜ್ಯ ನಾಯಕರು ಡೆಲ್ಲಿಗೆ ಹೋಗಬೇಕು. ಬಾರಿ ಮತ ಕೊಟ್ಟು ಕುಮಾರಸ್ವಾಮಿ ಅವರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.