Monday, April 20, 2026
Google search engine

Homeರಾಜಕೀಯಜನರ ಆಶೋತ್ತರಗಳಿಗೆ ಸ್ಪಂದಿಸದೆ ಇಡೀ ರಾಜ್ಯದ ಜನರನ್ನು ಸಂಕಷ್ಟದಲ್ಲಿರುವಂತೆ ಮಾಡಿದ ಕಾಂಗ್ರೆಸ್ : ನಾರಾಯಣ ಸ್ವಾಮಿ

ಜನರ ಆಶೋತ್ತರಗಳಿಗೆ ಸ್ಪಂದಿಸದೆ ಇಡೀ ರಾಜ್ಯದ ಜನರನ್ನು ಸಂಕಷ್ಟದಲ್ಲಿರುವಂತೆ ಮಾಡಿದ ಕಾಂಗ್ರೆಸ್ : ನಾರಾಯಣ ಸ್ವಾಮಿ

ಗುಂಡ್ಲುಪೇಟೆ : ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಭ್ರಷ್ಟಾಚಾರ ಹೆಚ್ಚಿದೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹಾಳು ಮಾಡಿದೆ ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ‌ವಿಧಾನಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಬೆಂಗಳೂರಿಗೂ ಇದರ ಬಿಸಿತಟ್ಟಿದೆ.
ಜನ ಸಂಕಷ್ಟದಿಂದ ಬಳಲುತಿದ್ದರೂ ಕಾಂಗ್ರೆಸ್ ಸರ್ಕಾರ ‌ಒಂದು ಕಡೆ ಹೇಗಾದರೂ ‌ಇನ್ನೂ ಎರಡು ವರ್ಷ ಅಧಿಕಾರ ಪೂರೈಸಿದರೆ ಸಾಕು ಎಂದು. ಮತ್ತೊಂದು ‌ಕಡೆ ಮುಖ್ಯಮಂತ್ರಿ ಸ್ಥಾನದಿಂದ ‌ಇಳಿಯಿರಿ.ನನಗೆ ಮುಖ್ಯಮಂತ್ರಿ ಪಟ್ಟ ಕೊಡಿ ಎಂದು ಕಿತ್ತಾಡುತಿದ್ದಾರೆ.ಇವರ ಅಧಿಕಾರದ ದಾಹಕ್ಕೆ ರಾಜ್ಯವನ್ನು ಬಲಿ‌ ಕೊಡುವ ಕೆಲಸ ಮಾಡುತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಬದುಕಿದ್ದಿಯಾ,ಸತ್ತಿದ್ದಿಯಾ ಎನ್ನುವುದನ್ನು ಜನ ಯೋಚನೆ ಮಾಡಬೇಕು. ಇವರಿಗೆ ಇನ್ನೂ ಉಳಿಗಾಲ ಇಲ್ಲ.ಪರಿಶಿಷ್ಟ ಜಾತಿ ಮತ್ತು ವರ್ಗಗಳು ಕಾಂಗ್ರೆಸ್ ‌ವೋಟ್ ಬ್ಯಾಂಕ್ ಆಗಿದ್ದವು.ಆದರೆ ನೀವು ಮಾಡಿರುವ ಅನ್ಯಾಯಕ್ಕೆ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ‌ಇವಾರರೂ ವೋಟು ಹಾಕುವುದಿಲ್ಲ.ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ‌ಎಸ್.ಇ.ಪಿ. ಮತ್ತು ಟಿ.ಎಸ್.ಪಿ ಹಣವನ್ನು ಬೇರೆ ಇಲಾಖೆಯವರಿಗೆ ಕೊಟ್ಟು ದಲಿತರಿಗೆ ದ್ರೋಹ ಎಸಗಿದ್ದಾರೆ.53ಸಾವಿರ ಕೋಟಿ ಹಣವನ್ನು ‌ಗ್ಯಾರಂಟಿ ಯೋಜನೆಗೆ ‌ಬಳಕೆ‌ ಮಾಡಿಕೊಂಡಿದ್ದಿರಿ.ಭಾಗ್ಯ ಜ್ಯೋತಿ, ಕುಟೀರ ‌ಜ್ಯೋತಿಗೆ 75 ಯೂನಿಟ್ ‌ಉಚಿತ ವಿದ್ಯುತ್ ಎಂದು ಬಸವರಾಜ‌ ಬೊಮ್ಮಾಯಿ ಘೋಷಣೆ ಮಾಡಿದ್ದರು.

ನಿವೇನು ಹೊಸದಾಗಿ ಉಚಿತ ವಿದ್ಯುತ್ ನೀಡಿಲ್ಲ.ಶಕ್ತಿ ಯೋಜನೆಯಲ್ಲಿ ಸಂಚರಿಸುವ ದಲಿತ ‌ಮಹಿಳೆಯರಿಗೂ ಪರಿಶಿಷ್ಟರ ಯೋಜನೆಯಲ್ಲಿನ ಹಣವನ್ನು ಸರ್ಕಾರ ಬಳಕೆ ಮಾಡಿಕೊಳ್ಳುತಿದ್ದರಿಲ್ಲ ಬಸ್ಸಿನಲ್ಲಿ ‌ಎಸ್.ಸಿ.ಎಸ್.ಟಿ ಮಹಿಳೆಯರು ಪ್ರಯಾಣ ಮಾಡುತಿದ್ದಾರೆ ಎಂಬುದು ನಿಮಗೆ ಹೇಗೆ ಗೊತ್ತು ನೀವೆನಾದರೂ ಜಾತಿ ‌ಪ್ರಮಾಣ ಪತ್ರ ಕೇಳಿ ಟಿಕೆಟ್ ನೀಡುತ್ತಿದ್ದಿರಾ .ಜನಸಂಖ್ಯೆಗೆ ಅನುಗುಣವಾಗಿ ಹಣ ತೆಗೆಯುತ್ತಿರಾ.ಪರಿಶಿಷ್ಟರು ಬಸ್ಸಿನಲ್ಲಿ ಸಂಚರಿಸುವುದಿಲ್ಲ ಆದರೂ ‌ಅವರ ಹೆಸರಿನಲ್ಲಿ ಹಣ ತೆಗೆದು ದಲಿತರಿಗೆ ಮೋಸ ಮಾಡುತ್ತಿದ್ದಾರೆ ಎಂದರು

ತಾಲ್ಲೂಕಿನಲ್ಲಿ ಯಥೇಚ್ಛವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.ಶಾಸಕರೆ ಅಕ್ರಮ ಗಣಿಗಾರಿಕೆಯಲ್ಲಿ ‌ಪಾಲುದಾರರು.ಯಾರಾದರೂ ಪ್ರಶ್ನೆ ಮಾಡಿದರೆ ನಾನು ‌ಉದ್ಯಮಿ ಎಂದು ಹೇಳುವ ಇವರು ಶಾಸಕ ಸ್ಥಾನಕ್ಕೆ ‌ರಾಜೀನಾಮೆ ನೀಡಲಿ.ಅಕ್ರಮ ಗಣಿಗಾರಿಕೆ ಮಾಡಲು ಶಾಸಕ ಸ್ಥಾನ ಬೇಕೆ.ಇದು ‌ಕಾನೂನು ಬಾಹಿರ.ಉದ್ಯಮ ಮಾಡುವುದಾದರೆ ಶಾಸಕರಾಗಲು‌ ನೀವು‌ ಯೋಗ್ಯರಲ್ಲ‌ ಎಂದು ‌ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ. ಟಾರ್ಗೆಟ್ ನೀಡಿ ಪಟ್ಟಣದಲ್ಲಿ 5-10
ಎಂ.ಎಸ್.ಐ.ಎಲ್ ಗಳು ‌ಪ್ರಾರಂಭ ಮಾಡಲು ಸರ್ಕಾರ ‌ಅನುಮತಿ ನೀಡಿದ್ದು ಇಷ್ಟು ಮದ್ಯ ಮಾರಾಟ ಮಾಡಬೇಕು ಎಂದು ಟಾರ್ಗೆಟ್ ನೀಡುತಿದ್ದಾರೆ ಎಂದರೆ ನೀವು ಕುಡಿಯಲೇ ಬೇಕು‌ ಎಂದು ‌ಅರ್ಥ.ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ‌ ಕುಡಿಯುವುದನ್ನು ಕಡ್ಡಾಯ ಮಾಡುತ್ತಾರೆ ಎಂದು ‌ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಟಿಪ್ಪರ್ ಹಾವಳಿ ಮೀತಿಮಿರಿದೆ.ವೇಗವಾಗಿ ಸಂಚರಿಸುವುದರಿಂದ ಅಪಘಾತ ಪ್ರಕರಣಗಳು ಜಾಸ್ತಿಯಾಗುತ್ತಿವೆ ಇದನ್ನು ಸಾರಿಗೆ ‌ಇಲಾಖೆಯ ಅಧಿಕಾರಿಗಳ ಜೊತೆ ಪ್ರಶ್ನೆ ಮಾಡದಂತೆ ರಾಜಕಾರಣಿಗಳ ‌ಒತ್ತಡ ಹಿನ್ನೆಲೆ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದು ಇಲ್ಲಿನ ‌ಅಕ್ರಮಗಳಿಗೆ ಶಾಸಕ ಗಣೇಶ್ ಪ್ರಸಾದ್ ನೇರ ಹೊಣೆ ಎಂದರು.

ತಾಲೂಕು ಸೇರಿದಂತೆ ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ‌ಕೋಲಾರದಲ್ಲಿ ಅಕ್ರಮ ಗಣಿಗಾರಿಕೆ ‌ನಡೆಯುತ್ತಿದ್ದು ಇದನ್ನು ಸ್ಥಗಿತಗೊಳಿಸಲು‌ ಮುಖ್ಯಮಂತ್ರಿ ‌ಸಿದ್ದರಾಮಯ್ಯ‌ ಕ್ರಮ ತೆಗೆದುಕೊಳ್ಳಬೇಕು.ಬೆಲೆ ಏರಿಕೆಯಲ್ಲಿ ಕಾಂಗ್ರೆಸ್ ‌ಸರ್ಕಾರ ಮುಂದೆ‌ ಇದ್ದು.ಬೆಲೆ ಏರಿಕೆಯಲ್ಲಿ ಬಹುಮಾನ ನೀಡುವುದಾದರೆ ಸಿದ್ದರಾಮಯ್ಯ ನವರಿಗೆ ನೀಡಬೇಕು ಎಂದರು.

ಇದು ಅಕ್ರಮ ಸರ್ಕಾರವಾಗಿದೆ ಲೂಟಿ ಹೊಡೆಯುವುದರಲ್ಲೆ‌ ಮಗ್ನವಾಗಿದ್ದು ಗೃಹ ಲಕ್ಷ್ಮಿ ಹಣ ಯಾವಾಗ ಬರುತ್ತದೆ ಎಂದು ಗೊತ್ತಾಗುವುದಿಲ್ಲ.ಐದು ಸಾವಿರ ಕೋಟಿ ಹಣ ಗೃಹ ಲಕ್ಷ್ಮಿ ‌ಹಣ‌ ದುರುಪಯೋಗವಾಗಿದೆ.ಕೇರಳ ಚುನಾವಣೆಗೆ‌ 20 ಸಾವಿರ ‌ಕೋಟಿ ಹಣ ಸಂದಾಯವಾಗಿದೆ‌ ಎನ್ನುವ ‌ಮಾತು‌ ಸಾರ್ವಜನಿಕ ವಲಯದಲ್ಲಿ ‌ಕೇಳಿ ಬರುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎ.ಟಿ.ಎಂ.ಸರ್ಕಾರವಾಗಿದೆ ಎಂದು‌ ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ‌ತಂದಿದ್ದು ಆದರೆ ನಮ್ಮ ಸರ್ಕಾರ ಹೋಗಿ ಮೂರು ವರ್ಷ‌‌ ಕಳೆದರು ನೀವು ಯಾಕೇ ಯೋಜನೆ ಪೂರ್ಣಗೊಳಿಸಲಿಲ್ಲ.ಸಿದ್ದರಾಮಯ್ಯ ನವರದು ಒಂದು ಶೋಷಣೆ ಮತ್ತೊಂದು ಘೋಷಣೆ ಸಾವಿರಾರು ಅನುದಾನ ಘೋಷಣೆ ಮಾಡುತ್ತಾರೆ ಆದರೆ ನೂರು ರೂಪಾಯಿ ನೀಡುವುದಿಲ್ಲ. ಸಿದ್ದರಾಮಯ್ಯ ‌ಅಧಿಕಾರದಿಂದ‌ ಇಳಿಯುವವರೆಗೆ ಕಾಂಗ್ರೆಸ್ ಪಕ್ಷವನ್ನು ‌ನಿರ್ನಾಮ ಮಾಡಿ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.

ಸುದ್ದಿ ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ‌ಮಂಡಲ‌ ಅಧ್ಯಕ್ಷ ಸಿ.ಮಹದೇವಪ್ರಸಾದ್, ಎಸ್.ಸಿ‌ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್ ಮೌರ್ಯ, ಮೂಡ್ನಕೂಡು ಪ್ರಕಾಶ್, ಅಗತಗೌಡನಹಳ್ಳಿ ಬಸವರಾಜು,ಜಿ.ಡಿ.ಎಲ್ ಸುರೇಶ್,ಮಹೇಂದ್ರ, ,ಪುರಸಭಾ ಮಾಜಿ ಸದಸ್ಯ ನಾಗೇಶ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಾಗುಸ್ವಾಮಿ,ರೇವಣ್ಣ ಕಬ್ಬಹಳ್ಳಿ ಶಿವು ವೀರನಪುರ
,ಕಿರಣ್ ಮಾನ್ಯ ನಂಜುಂಡ ಸ್ವಾಮಿ ಸೇರಿದಂತೆ ಇನ್ನು ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular