ಮಂಡ್ಯ: ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಕಾಂಗ್ರೆಸ್ ಶತಾಯಗತ ಪ್ರಯತ್ನ ಮಾಡುತ್ತಿದ್ದು, ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಇಂದು ಜಿಲ್ಲೆಯಲ್ಲಿ ಸಿ.ಎಂ ಮತ್ತು ಡಿಸಿಎಂ ಪ್ರಚಾರ ನಡೆಸುತ್ತಿದ್ದಾರೆ.
ಕೆ.ಆರ್.ಪೇಟೆ ಪಟ್ಟಣ ಪುರಸಭೆ ಹಿಂಭಾಗದ ಮೈದಾನದಲ್ಲಿ ಇಂದು ಸಿಎಂ ಪ್ರಚಾರದ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಬಹಿರಂಗ ಪ್ರಚಾರದ ಸಮಾವೇಶಕ್ಕಾಗಿ ಸ್ಥಳದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಭಾಷಣಕ್ಕಾಗಿ ವಿಶಾಲ ವೇದಿಕೆ ನಿರ್ಮಾಣವಾಗಿದ್ದು, ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ತಾಲೂಕಿನ ಕಾಂಗ್ರೆಸ್ ನಾಯಕರು ಕಾರ್ಯಕ್ರಮದ ಪೂರ್ವ ಸಿದ್ದತೆ ಪರಿಶೀಲನೆ ನಡೆಸುತ್ತಿದ್ದಾರೆ.