ಮೂಡುಬಿದಿರೆ ತಾಲೂಕಿನ ತೆಂಕ ಮಿಜಾರು ಗ್ರಾಮದ ನೀರ್ಕೆರೆ ಪ್ರೌಢಶಾಲೆಯಲ್ಲಿ ಗ್ರಾಹಕ ಮಾಹಿತಿ ಕಾರ್ಯಕ್ರಮ ದಶಂಬರ 30 ರಂದು ನಡೆಯಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ಹಿರಿಯ ಪತ್ರಕರ್ತ ರಾಯಿ ರಾಜ ಕುಮಾರರು ಮುಖ್ಯ ಮಾಹಿತಿದಾರರಾಗಿದ್ದರು. ಅವರು ತಮ್ಮ ಭಾಷಣದಲ್ಲಿ, ಗ್ರಾಹಕ ಹಿತರಕ್ಷಣಾ ಕಾಯಿದೆಯ ಅಂಶಗಳು, ಮಾನವನ ಜೀವಿಸುವ ಹಕ್ಕು, ಸಮಾನತೆಯ ಹಕ್ಕು, ಆಯ್ಕೆಯ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಇತ್ಯಾದಿಗಳ ಸಮಗ್ರ ಮಾಹಿತಿಯನ್ನು ಉದಾಹರಣೆಗಳ ಮೂಲಕ ನೀಡಿದರು. ಮಾಹಿತಿ ಹಕ್ಕಿನ ಮೂಲಕ ದಾಖಲೆಗಳನ್ನು ಪಡೆಯುವ ವಿಧಾನವನ್ನು ವಿವರಿಸಿದರು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಹಿರಿಯ ಶಿಕ್ಷಕಿ ಸವಿತಾ ವಿಠಲ ಕೋಟ್ಯಾನ್ ಸ್ವಾಗತಿಸಿದರು. ಅನುಪಮ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಬಾಲಚಂದ್ರ ಆಚಾರ್ಯ ಕಾರ್ಯಕ್ರಮ ಸಂಘಟಿಸಿದ್ದರು.
.



