Friday, September 12, 2025
Google search engine

Homeರಾಜ್ಯಸುದ್ದಿಜಾಲಆರ್ಥಿಕ ಲಾಭದತ್ತ ಸಾಗುತ್ತಿರುವ ಸಹಕಾರ ಸಂಘ : ಠೇವಣಿದಾರರ ವಿಶ್ವಾಸಾರ್ಹತೆ ಹೆಚ್ಚಿಸಲು ಆಗ್ರಹ: ಶಾಸಕ ಡಿ....

ಆರ್ಥಿಕ ಲಾಭದತ್ತ ಸಾಗುತ್ತಿರುವ ಸಹಕಾರ ಸಂಘ : ಠೇವಣಿದಾರರ ವಿಶ್ವಾಸಾರ್ಹತೆ ಹೆಚ್ಚಿಸಲು ಆಗ್ರಹ: ಶಾಸಕ ಡಿ. ರವಿಶಂಕರ್

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕಳೆದ ಹತ್ತು ವರ್ಷಗಳ ಹಿಂದೆ ಆರಂಭಗೊAಡ ಸಂಘ ಆರ್ಥಿಕವಾಗಿ ಲಾಭದತ್ತ ಸಾಗುತ್ತಿದ್ದು, ಇದರ ಪ್ರಮಾಣವನ್ನು ಹೆಚ್ಚಿಸಲು ಉಳ್ಳವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಠೇವಣಿ ಪಡೆಯಲು ಆಡಳಿತ ಮಂಡಳಿ ಪ್ರಯತ್ನಿಸಬೇಕು ಎಂದು ಶಾಸಕರೂ ಆದ ಗೌರವಾಧ್ಯಕ್ಷ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಕ್ರಾಂತೀರ ಸಂಗೊಳ್ಳಿರಾಯಣ್ಣ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇವಲ ೧೦ ಲಕ್ಷ ಬಂಡವಾಳದೊAದಿಗೆ ಆರಂಭಗೊAಡ ಸಂಘ ಪ್ರಸಕ್ತ ಮೂರು ಕೋಟಿ ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಸAಘದ ವತಿಯಿಂದ ಸಣ್ಣ ಪುಟ್ಟ ವರ್ತಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕೆಂದು ಸಲಹೆ ನೀಡಿದ ಶಾಸಕರು ಇ.ಸ್ಟಾö್ಯಂಪಿAಗ್ ಪತ್ರ ಮಾರಾಟ ಮಾಡುತ್ತಿರುವ ಬಗ್ಗೆ ಪ್ರಚಾರಪಡಿಸಿ ಹೆಚ್ಚು ಪತ್ರಗಳನ್ನು ಮಾರಾಟ ಮಾಡಿ ಸಂಘಕ್ಕೆ ಲಾಭ ತರಬೇಕು ಎಂದು ತಿಳಿಸಿದರು.

ಆಡಳಿತ ಮಂಡಳಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡು ಸಂಘಕ್ಕೆ ಹೆಚ್ಚು ಷೇರು ಬಂಡವಾಳ ಸಂಗ್ರಹಣೆ ಮಾಡಬೇಕು. ಆಗ ಹೆಚ್ಚು ಜನರಿಗೆ ಸಾಲ ಸೌಲಭ್ಯ ನೀಡಲು ಅನುಕೂಲವಾಗಲಿದೆ ಎಂದರಲ್ಲದೆ ಪ್ರತೀ ವಾರ್ಷಿಕ ಮಹಾಸಭೆಯನ್ನು ಠೇವಣಿದಾರರನ್ನು ಸಂಘದ ವತಿಯಿಂದ ಸನ್ಮಾನಿಸಬೇಕೆಂದು ಸೂಚಿಸಿದರು. ಸಂಘಕ್ಕೆ ಬಂದಿರುವ ಲಾಭಾಂಶವನ್ನು ಸದಸ್ಯರಿಗೆ ಡಿವಿಡೆಂಡ್ ಮತ್ತು ಉಡುಗೊರೆ ನೀಡುವ ಮೂಲಕ ಅವರನ್ನು ಆಕರ್ಷಿಸುವ ಕೆಲಸ ಮಾಡುವುದರ ಜತೆಗೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕೆಂದರು.

ಸಂಘದ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಕೆ.ಎಸ್.ಕೃಷ್ಣಪ್ರಸಾದ್ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಮಾಲೇಗೌಡ, ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿಶಿವಣ್ಣ, ಸಂಘದ ಅಧ್ಯಕ್ಷ ಎಂ.ಎಸ್.ಹರೀಶ್ ಮೆಡಿಕಲ್ , ಉಪಾಧ್ಯಕ್ಷ ಕಾಳಿಕುಮಾರ್, ನಿರ್ದೇಶಕರಾದ ಕೆ.ಹೆಚ್.ಕೃಷ್ಣೇಗೌಡ, ನಟರಾಜ, ಡಿ.ಸಿ.ರವಿ, ಮಹೇಶ್‌ಗೌಡ, ಪ್ರೇಮಕುಮಾರ, ಕೆ.ಬಿ.ಭಾಸ್ಕರ್, ಜಿ.ಎಂ.ಲೋಹಿತ್, ಮಂಜುನಾಥ್, ಕೆ.ಎನ್.ಪ್ರಸನ್ನಕುಮಾರ್, ಮುಬೀನಾಬಾನು, ಎಂ.ಮAಜುಳ, ಪಿ.ಎಸ್.ದೇವರಾಜು, ಮುಖ್ಯಕಾರ್ಯನಿರ್ವಾಹಕಾಧಿಕಾರಿ ಕೆ.ಎಸ್.ಕೃಷ್ಣಪ್ರಸಾದ್, ಸಿಬ್ಬಂದಿಗಳಾದ ಕೆ.ಎಂ.ರುಮಾನತಸ್ನೀಮ್, ಆರ್.ರವಿ, ಶಶಿಧರ, ಬಿ.ರವಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular