Tuesday, June 30, 2026
Google search engine

Homeಸ್ಥಳೀಯಆರ್‌ಟಿಐಗೆ ಪಾಲಿಕೆ ಉತ್ತರ : ಮೈಸೂರು ಟ್ರಾಫಿಕ್ ಸಿಗ್ನಲ್‌ಗೆ ಪಾಲಿಕೆಯಲ್ಲಿ ದಾಖಲೆ ಇಲ್ಲ

ಆರ್‌ಟಿಐಗೆ ಪಾಲಿಕೆ ಉತ್ತರ : ಮೈಸೂರು ಟ್ರಾಫಿಕ್ ಸಿಗ್ನಲ್‌ಗೆ ಪಾಲಿಕೆಯಲ್ಲಿ ದಾಖಲೆ ಇಲ್ಲ

ಮೈಸೂರು : ನಗರದ ವಿವಿಧ ರಸ್ತೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಳವಡಿಸಲಾದ ಟ್ರಾಫಿಕ್ ಸಿಗ್ನಲ್‌ಗಳಿಗೆ ಮೈಸೂರು ಮಹಾನಗರ ಪಾಲಿಕೆಯ ಅನುಮತಿ ಇದೆಯೇ ಎಂಬುದನ್ನು ಪ್ರಶ್ನಿಸಿ ಹಿರಿಯ ವಕೀಲ ಅ.ಮ. ಭಾಸ್ಕರ್ ಸಲ್ಲಿಸಿದ್ದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಪಾಲಿಕೆ ಮಹತ್ವದ ಉತ್ತರ ನೀಡಿದೆ.

ಅರ್ಜಿಯಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಸಂಬಂಧಿಸಿದ ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಮಂಜೂರು, ಅಂದಾಜು ವೆಚ್ಚ, ಪೊಲೀಸ್ ಇಲಾಖೆಯ ಪ್ರಸ್ತಾವನೆಗಳು, ಸಿವಿಲ್ ಕಾಮಗಾರಿಗಳ ವಿವರ, ಕಡತ ಟಿಪ್ಪಣಿಗಳು, ಆಂತರಿಕ ಪತ್ರ ವ್ಯವಹಾರ, ಅನುಮತಿ ನೀಡಿದ ಅಧಿಕಾರಿಗಳ ಹೆಸರು ಹಾಗೂ ಹುದ್ದೆ, ಅನಧಿಕೃತ ಅಳವಡಿಕೆಗಳ ವಿರುದ್ಧ ಕೈಗೊಂಡ ಕ್ರಮ ಮತ್ತು ಪಾಲಿಕೆ–ಪೊಲೀಸ್ ಸಮನ್ವಯ ಸಭೆಗಳ ವಿವರಗಳನ್ನು ಕೋರಲಾಗಿತ್ತು.

ಇದಕ್ಕೆ ಉತ್ತರಿಸಿದ ಮಹಾನಗರ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಕಳೆದ ಮೂರು ವರ್ಷಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ದಾಖಲೆಗಳು ಪಾಲಿಕೆಯಲ್ಲಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ಉತ್ತರದಿಂದ ನಗರದಲ್ಲಿನ ಟ್ರಾಫಿಕ್ ಸಿಗ್ನಲ್‌ಗಳ ಅನುಮತಿ ಪ್ರಕ್ರಿಯೆ, ದಾಖಲೆ ನಿರ್ವಹಣೆ ಹಾಗೂ ಸಂಬಂಧಿತ ಇಲಾಖೆಗಳ ಪಾತ್ರದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಈ ಕುರಿತು ಪೊಲೀಸ್ ಇಲಾಖೆ ಹಾಗೂ ಇತರ ಸಂಬಂಧಿತ ಪ್ರಾಧಿಕಾರಗಳಿಂದಲೂ ಮಾಹಿತಿ ಪಡೆಯಲು ಮುಂದಾಗಿರುವುದಾಗಿ ಅ.ಮ. ಭಾಸ್ಕರ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular