Friday, May 8, 2026
Google search engine

Homeಬ್ರೇಕಿಂಗ್ ನ್ಯೂಸ್‘ದಳಪತಿ’ಗೆ ದಾರಿ ಕ್ಲಿಯರ್! ಸಿಪಿಐ-ವಿಸಿಕೆ ಬೆಂಬಲದೊಂದಿಗೆ ಮುಖ್ಯಮಂತ್ರಿ ಪಟ್ಟಕ್ಕೇರಲಿರುವ ವಿಜಯ್

‘ದಳಪತಿ’ಗೆ ದಾರಿ ಕ್ಲಿಯರ್! ಸಿಪಿಐ-ವಿಸಿಕೆ ಬೆಂಬಲದೊಂದಿಗೆ ಮುಖ್ಯಮಂತ್ರಿ ಪಟ್ಟಕ್ಕೇರಲಿರುವ ವಿಜಯ್

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಅಗತ್ಯವಿದ್ದ ಮ್ಯಾಜಿಕ್ ನಂಬರ್ ಅನ್ನು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕೊನೆಗೂ ತಲುಪಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಷರತ್ತುಬದ್ಧ ಬೆಂಬಲ ಪಡೆದಿದ್ದ ಟಿವಿಕೆಗೆ ಇದೀಗ ಸಿಪಿಐ ಹಾಗೂ ವಿಸಿಕೆ ಪಕ್ಷಗಳೂ ಬೆಂಬಲ ಘೋಷಿಸಿವೆ. ಈ ಮೂಲಕ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಗಟ್ಟಿಯಾಗಿದೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲಕ್ಕಾಗಿ ಡಿಎಂಕೆ ಮೈತ್ರಿ ಪಕ್ಷಗಳಾದ ಸಿಪಿಐ, ಸಿಪಿಎಂ ಮತ್ತು ವಿಸಿಕೆ ಬೆಂಬಲವನ್ನು ಕೋರಲಾಗಿತ್ತು. ಸಿಪಿಐ ತನ್ನ ಇಬ್ಬರು ಶಾಸಕರ ಬೆಂಬಲವನ್ನು ಬೇಷರತ್ತಾಗಿ ನೀಡಿದ್ದು, ವಿಸಿಕೆ ಸಹ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಬೆಂಬಲ ಪತ್ರ ಸಲ್ಲಿಸಿದೆ.

ಟಿವಿಕೆ ಒಟ್ಟು 107, ಸಿಪಿಐ 2, ಸಿಪಿಎಂ 2, ವಿಸಿಕೆ 2, ಕಾಂಗ್ರೆಸ್ 5 ಐದು ಸೇರಿ ಟಿವಿಕೆ ಮೈತ್ರಿಯ ಬಲ 118ಕ್ಕೆ ಏರಿದೆ.

RELATED ARTICLES
- Advertisment -
Google search engine

Most Popular