Thursday, July 2, 2026
Google search engine

Homeಅಪರಾಧಅಯೋಧ್ಯೆ ರಾಮ ಮಂದಿರದಲ್ಲಿ ಕೋಟಿ ಕೋಟಿ ದೇಣಿಗೆಗೆ ಕನ್ನ : ಆರೋಪಿಗಳಿಂದ ಲಕ್ಷಾಂತರ ರೂ. ವಶ

ಅಯೋಧ್ಯೆ ರಾಮ ಮಂದಿರದಲ್ಲಿ ಕೋಟಿ ಕೋಟಿ ದೇಣಿಗೆಗೆ ಕನ್ನ : ಆರೋಪಿಗಳಿಂದ ಲಕ್ಷಾಂತರ ರೂ. ವಶ

ಅಯೋಧ್ಯೆ (ಉತ್ತರ ಪ್ರದೇಶ) : ರಾಮ ಮಂದಿರದ ದೇಣಿಗೆ ಹಣ ಕಳವು ಪ್ರಕರಣದ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿದ್ದು, ಪೊಲೀಸ್ ದಾಖಲೆಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಅವಿನಾಶ್ ಶುಕ್ಲಾ ಅತೀ ಹೆಚ್ಚು ಪ್ರಮಾಣದಲ್ಲಿ ರಾಮ ಮಂದಿರದ ದೇಣಿಗೆ ಹಣವನ್ನು ಕದ್ದಿರುವುದಾಗಿ ಪೊಲೀಸ್ ದಾಖಲೆಗಳು ತಿಳಿಸಿವೆ.

ಇನ್ನೂ ಪ್ರಕರಣದಲ್ಲಿ ಬಂಧಿತನಾಗಿರುವ ಅವಿನಾಶ್ ಶುಕ್ಲಾ ಅತಿ ಹೆಚ್ಚು ಪ್ರಮಾಣದಲ್ಲಿ ಹಣ ಕಳವು ಮಾಡಿದ್ದು, ಸುಮಾರು 20 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ತನ್ನ ಮನೆಗೆ ಕೊಂಡೊಯ್ದಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇದು ಈ ಪ್ರಕರಣದಲ್ಲಿ ಒಬ್ಬ ಆರೋಪಿಯಿಂದ ಕಳವುಗೊಂಡ ಅತಿದೊಡ್ಡ ಮೊತ್ತವೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಅಧಿಕೃತ ತನಿಖೆ ಆರಂಭಿಸುವ ಮುನ್ನವೇ ದೇವಾಲಯದ ಟ್ರಸ್ಟ್ ಆರೋಪಿಗಳಿಂದ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭಿಸಿತ್ತು ಎಂಬ ಸಂಗತಿಯೂ ತನಿಖಾ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಂಗ ಬಂಧನದಲ್ಲಿರುವ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ರಾಮಕಾಂತ್ ಮಿಶ್ರಾ, ಕರುಣೇಶ್ ಪಾಂಡೆ, ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಹಾಗೂ ಮನೀಶ್ ಕುಮಾರ್ ಯಾದವ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ದೇವಾಲಯದ ಟ್ರಸ್ಟ್ ಅಧಿಕಾರಿಗಳ ಸಮ್ಮುಖದಲ್ಲಿ ಅವಿನಾಶ್ ಶುಕ್ಲಾನಿಂದ 20 ಲಕ್ಷ ರೂ. ನಗದು, 1,121 ಅಮೆರಿಕನ್ ಡಾಲರ್, ಬೆಳ್ಳಿಯ ಲೋಹದ ವಸ್ತುಗಳು, ಎರಡು ಚಿನ್ನದ ಸರಗಳು ಹಾಗೂ ಒಂದು ಉಂಗುರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇನ್ನಿತರ ಆರೋಪಿಗಳಿಂದಲೂ ದೊಡ್ಡ ಪ್ರಮಾಣದ ಹಣ ವಶಕ್ಕೆ ಪಡೆಯಲಾಗಿದೆ.

ಅನುಕಲ್ಪ್ ಮಿಶ್ರಾನಿಂದ 16 ಲಕ್ಷ ರೂ., ಕರುಣೇಶ್ ಪಾಂಡೆಯಿಂದ 18 ಲಕ್ಷ ರೂ., ಲವಕುಶ್ ಮಿಶ್ರಾನಿಂದ 14 ಲಕ್ಷ ರೂ., ರಾಮಕಾಂತ್ ಮಿಶ್ರಾನಿಂದ 7 ಲಕ್ಷ ರೂ., ಮನೀಶ್ ಕುಮಾರ್ ಯಾದವ್‌ನಿಂದ 2 ಲಕ್ಷ ರೂ. ಹಾಗೂ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನುನಿಂದ 1 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಇತರ ಕೆಲವು ಸಿಬ್ಬಂದಿಯ ಮೇಲೂ ಪೊಲೀಸರು ನಿಗಾ ವಹಿಸಿದ್ದು, ಜುಲೈ 10ರ ಬಳಿಕ ಅಂತಿಮ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular