Friday, December 12, 2025
Google search engine

Homeರಾಜ್ಯಡಿ.ಕೆ ಸುರೇಶ್​ ಹೆಸರಲ್ಲಿ ಕೋಟಿ ಕೋಟಿ ವಂಚನೆ : ನಟ ಧರ್ಮಗೆ ಕಾನೂನು ಕಂಟಕ

ಡಿ.ಕೆ ಸುರೇಶ್​ ಹೆಸರಲ್ಲಿ ಕೋಟಿ ಕೋಟಿ ವಂಚನೆ : ನಟ ಧರ್ಮಗೆ ಕಾನೂನು ಕಂಟಕ

ಬೆಂಗಳೂರು : ಮಾಜಿ ಸಂಸದ ಡಿ.ಕೆ ಸುರೇಶ್​​ ಹೆಸರಲ್ಲಿ ಕೋಟಿ ಕೋಟಿ ಮೌಲ್ಯದ ವಂಚನೆ ಕೇಸ್​​ ಸಂಬಂಧ ನಟ ಧರ್ಮಗೆ ಮತ್ತೆ ಕಾನೂನು ಕಂಟಕ ಎದುರಾಗಿದ್ದು, ಡಿ.ಕೆ.ಸುರೇಶ್ ಹೆಸರಿನಲ್ಲಿ ನಡೆದ ಕೋಟಿ ಕೋಟಿ ಮೌಲ್ಯದ ಚಿನ್ನ ವಂಚನೆ ಕೇಸ್‌ನಲ್ಲಿ ಸಿಐಡಿ ತನಿಖಾ ತಂಡ ನಟ ಧರ್ಮ ಧ್ವನಿ ಪರೀಕ್ಷೆಗೆ ಅನುಮತಿ ಪಡೆದಿದೆ ಎನ್ನಲಾಗುತ್ತಿದೆ. ಇದು ಅವರಿಗೆ ದೊಡ್ಡ ಸಂಕಷ್ಟ ತರಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ(ಡಿ.೧೧) ಬೆಂಗಳೂರು ನ್ಯಾಯಾಲಯವು ಸಿಐಡಿಯ ಅರ್ಜಿಯನ್ನು ಒಪ್ಪಿಕೊಂಡು ಧ್ವನಿ ಪರೀಕ್ಷೆ ನಡೆಸಲು ಆದೇಶ ಹೊರಡಿಸಿದ್ದು, ಕೇಸ್‌ನಲ್ಲಿ ಹೊಸ ತಿರುವು ನೀಡಿದೆ ಎನ್ನಲಾಗಿದೆ. ಈ ವಂಚನೆ ಕೇಸ್ 2024ರಲ್ಲಿ ಬೆಳಕಿಗೆ ಬಂದಿತ್ತು. ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿಗಳ ಮೌಲ್ಯದ ಚಿನ್ನದ ವ್ಯಾಪಾರದಲ್ಲಿ ವಂಚನೆ ನಡೆದಿರುವುದು ತಿಳಿದು ಬಂದಿತ್ತು. ಇದರಲ್ಲಿ ನಟ ಧರ್ಮ ಹೆಸರು ಸೇರಿದಂತೆ ಹಲವು ಸೆಲೆಬ್ರಿಟಿಗಳ ಹೆಸರುಗಳು ಉಲ್ಲೇಖಿತವಾಗಿದ್ದು, ವೈರಲ್ ಆಡಿಯೋದಲ್ಲಿ ಧರ್ಮನ ಧ್ವನಿಯಂತೆ ಕೇಳಿಬಂದ ಒಂದು ಸಂಭಾಷಣೆಯು ಕೇಸ್‌ನಲ್ಲಿ ದೊಡ್ಡ ಸಾಕ್ಷ್ಯವಾಗಿದೆ ಎಂದಿದ್ದಾರೆ.

ವೈರಲ್ ಆದ ಆಡಿಯೋ ಕ್ಲಿಪ್‌ನಲ್ಲಿ ಧರ್ಮನ ಧ್ವನಿ ಇದೆಯೇ ಎಂಬುದು ಈ ತನಿಖೆಯ ಮುಖ್ಯ ಕೇಂದ್ರಬಿಂದುವಾಗಿದ್ದ, ಈ ಹಿನ್ನಲ್ಲೇ ಸಿಐಡಿ ತಂಡವು ಕೋರ್ಟ್‌ಗೆ ಅರ್ಜಿ ಹಾಕಿ, ಧರ್ಮ ಧ್ವನಿ ಸ್ಯಾಂಪಲ್ ತೆಗೆದುಕೊಳ್ಳಲು ಅನುಮತಿ ಕೋರಿತ್ತು. ನ್ಯಾಯಾಲಯ ಈ ಅರ್ಜಿಯನ್ನು ಒಪ್ಪಿಕೊಂಡಿದ್ದು, ಇನ್ನು ಎರಡು-ಮೂರು ದಿನಗಳಲ್ಲಿ ಧ್ವನಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಈ ವೇಳೆ ತನಿಖಾ ತಂಡವು ಧರ್ಮರಿಗೆ ನೋಟೀಸ್ ಜಾರಿ ಮಾಡಿ, ವಿಚಾರಣೆಗೆ ಕರೆಸಿಕೊಂಡು ಧ್ವನಿ ಸ್ಯಾಂಪಲ್ ಸಂಗ್ರಹಿಸಲಿದೆ. ನಂತರ ಈ ಸ್ಯಾಂಪಲ್‌ಗಳನ್ನು ಫೋರೆನ್ಸಿಕ್ ಸೈನ್ಸ್ ಲ್ಯಾಬ್ ಗೆ ಕಳುಹಿಸಿ, ನಂತರ ವೈರಲ್ ಆಡಿಯೋದೊಂದಿಗೆ ಹೋಲಿಕೆ ಮಾಡಲಾಗುವುದು. ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ಧ್ವನಿ ಸಾಮ್ಯತೆ ಸಾಬೀತಾದರೆ, ಧರ್ಮರಿಗೆ ದೊಡ್ಡ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಇತ್ತ ಧರ್ಮ ಈ ಆರೋಪಗಳನ್ನು ಖಂಡಿಸಿ, ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ಇದೀಗ ಧ್ವನಿ ಪರೀಕ್ಷೆಯಿಂದ ಸತ್ಯ ಬಯಲಾಗಬಹುದೆಂದು ಸಿಐಡಿ ಅಧಿಕಾರಿಗಳು ನಟ ಧರ್ಮರಿಗೆ ನೋಟೀಸ್ ಜಾರಿ ಮಾಡಲು ಸಿದ್ಧರಾಗಿದ್ದಾರೆ. ಒಂದು ವೇಳೆ ಎಫ್‌ಎಸ್‌ಎಲ್ ರಿಪೋರ್ಟ್ ಸಾಮ್ಯತೆ ತೋರಿದರೆ, ಧರ್ಮ ವಂಚನೆ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಬಹುದು. ಇದು ಅವರ ಸಿನಿಮಾ ಕೆರಿಯರ್​​ಗೆ ದೊಡ್ಡ ಧಕ್ಕೆ ಆಗಬಹುದು ಎನ್ನಲಾಗಿದೆ. ಇನ್ನೂ ಸಿಐಡಿ ತನಿಖೆ ಮುಂದುವರೆದಿದ್ದು, ಇತರ ಸೆಲೆಬ್ರಿಟಿಗಳ ಹೆಸರುಗಳು ಸಹ ಚರ್ಚೆಯಲ್ಲಿವೆ. ಚಿನ್ನದ ವ್ಯಾಪಾರದಲ್ಲಿ ನಡೆದ ವಂಚನೆಯು ಹಲವು ಜನರನ್ನು ತೊಡಗಿಸಿಕೊಂಡಿದೆ ಎಂದು ತಿಳಿದುಬಂದಿದ್ದು, ಧರ್ಮನ ವಕೀಲರು ಧ್ವನಿ ಪರೀಕ್ಷೆಗೆ ಸಹಕರಿಸುವುದಾಗಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular