Saturday, April 11, 2026
Google search engine

Homeಅಪರಾಧಸಿಬಿಐ ಅಧಿಕಾರಿಗಳೆಂದು, ಉದ್ಯಮಿಗೆ 15 ಕೋಟಿ ರೂ. ವಂಚಿಸಿದ ಸೈಬರ್‌ ಕದೀಮರು

ಸಿಬಿಐ ಅಧಿಕಾರಿಗಳೆಂದು, ಉದ್ಯಮಿಗೆ 15 ಕೋಟಿ ರೂ. ವಂಚಿಸಿದ ಸೈಬರ್‌ ಕದೀಮರು

ಬೆಳಗಾವಿ: ಇತ್ತೀಚಿಗೆ ಡಿಜಿಟಲ್‌ ಫ್ರಾಡ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರು ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ. ಕುಂದಾನಗರಿ ಬೆಳಗಾವಿಯಲ್ಲೂ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಿಬಿಐ (CBI) ಅಧಿಕಾರಿಗಳ ಸೋಗಿನಲ್ಲಿ ಬಂದ ಸೈಬರ್‌ ಕದೀಮರು, ಉದ್ಯಮಿಯೋರ್ವರನ್ನು ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ ಬರೋಬ್ಬರಿ 15 ಕೋಟಿ 45 ಲಕ್ಷ ರೂಪಾಯಿಗಳನ್ನು ವಂಚನೆ ಮಾಡಿದ್ದಾರೆ.

ಈ ವಂಚಕರ ಜಾಲವನ್ನು ಬೆಳಗಾವಿ ನಗರದ ಸೈಬರ್ ಕ್ರೈಮ್ ಪೊಲೀಸರು ಬೇಧಿಸಿದ್ದು, ಪ್ರಕರಣವನ್ನ ಸಿಬಿಐ ತನಿಖೆಗೆ ಹಸ್ತಾಂತರವಾಗುವ ಮುನ್ನವೇ ಬೆಳಗಾವಿ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಘಟನೆಯ ವಿವರ

ನಗರದ ಉದ್ಯಮಿಯೊಬ್ಬರನ್ನು ಸಂಪರ್ಕಿಸಿದ್ದ ಸೈಬರ್‌ ವಂಚಕರು, ತಾವು ಸಿಬಿಐ ಅಧಿಕಾರಿಗಳೆಂದು ನಂಬಿಸಿದ್ದರು. ಬಳಿಕ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಹೆದರಿಸಿ, ಅವರನ್ನು ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದರು. ಈ ಹಣವನ್ನು ದೇಶದ ವಿವಿಧ 6 ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ.

ಘಟನೆ ಕುರಿತು ತನಿಖೆ ನಡೆಸಿದ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರು, ಹೈದರಾಬಾದ್ ಮೂಲದ ಶ್ರೀಪಾದ ನಾಯಕ್ ಮತ್ತು ಶರದ್ ನಾಯಕ್ ಎಂಬ ಆರೋಪಿಗಳನ್ನ ಅರೆಸ್ಟ್‌ ಮಾಡಿದ್ದಾರೆ. ವಂಚಕರು ಉದ್ಯಮಿಯ ಖಾತೆಯಿಂದ ಮೊದಲು 10 ‘ಫಸ್ಟ್ ಲೇಯರ್ ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ನಂತರ ಹೈದರಾಬಾದ್, ಅಹಮದಾಬಾದ್, ಕೋಲ್ಕತ್ತಾ, ಗುವಾಹಟಿ, ಹರಿಯಾಣ ಮತ್ತು ದೆಹಲಿ ಮೂಲದ ಖಾತೆಗಳಿಗೆ ಹಣ ಹಂಚಿಕೆಯಾಗಿತ್ತು.

ನಕಲಿ ಕಂಪನಿ ಹೆಸರಿನಲ್ಲಿದ್ದ ಖಾತೆಗೆ 2 ಕೋಟಿ ರೂ. ವರ್ಗಾವಣೆಯಾಗಿರುವುದು ಪತ್ತೆಯಾಗಿದ್ದು, ಈಗಾಗಲೇ 1 ಕೋಟಿ ರೂಪಾಯಿಯನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಇನ್ನುಳಿದ 14 ಕೋಟಿ 45 ಲಕ್ಷ ರೂಪಾಯಿಯನ್ನು ದೇಶಾದ್ಯಂತ ಇರುವ 390ಕ್ಕೂ ಅಧಿಕ ಬ್ಯಾಂಕ್ ಖಾತೆಗಳ ಮೂಲಕ ಡ್ರಾ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣವು ಅತ್ಯಂತ ಗಂಭೀರವಾಗಿದ್ದು, ಹಣವು ದೇಶದ ಹಲವು ರಾಜ್ಯಗಳಿಗೆ ಹರಿದಿದೆ. ಈ ಕೇಸ್ ಅನ್ನು ಶೀಘ್ರದಲ್ಲೇ ಸಿಬಿಐಗೆ ಹಸ್ತಾಂತರಿಸಲಾಗುವುದು. ಈ ಜಾಲದಲ್ಲಿರುವ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಬೆಳಗಾವಿಯ ಪೊಲೀಸ್ ಆಯುಕ್ತ ಭೂಷಣ್
ಜಿ. ಬೊರಸೆ ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular