ಬೆಂಗಳೂರು: ಪುಸ್ತಕ ಪ್ರೀತಿ ಬೆಳೆಸುವ ದೃಷ್ಥಿಯಿಂದ, ಓದುಗರ ಮುಂದೆ, ಓದಲೇಬೇಕಾದ ಕೃತಿಗಳನ್ನು ಒದಗಿಸಿದರೆ, ಸೊಗಸಾದ ಮೃಷ್ಟನ್ನ ಭೋಜನ ಒದಗಿಸಿದಂತೆ. ಈ ಜಾಡಿನಲ್ಲಿ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಟ ಟ್ರಸ್ಟ್ (ರಿ.) ಕಳೆದ ೩೦ ವರ್ಷಗಳಿಂದ, ಶ್ರೇಷ್ಟ ಕೃತಿಗಳ ಆಯ್ಕೆಗಾಗಿ, ಸಾಹಿತ್ಯ ಸ್ವರ್ಧೆ ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ ೩೦ ವರ್ಷದಲ್ಲಿ, ೩೦೦ಕ್ಕೂ ಹೆಚ್ಚು ಕೃತಿಗಳನ್ನು ಆಯ್ಕೆ ಮಾಡಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಜೊತೆಗೆ, ೧೦ ಲಕ್ಷಕ್ಕೂ ಹೆಚ್ಚು ರೂ.ಗಳ ಬಹುಮಾನವನ್ನು ನೀಡಿ ಗೌರವಿಸಿ, ಪ್ರೋತ್ಸಾಹಿಸಿದೆ. ಪ್ರಸ್ತುತ ಈ ನಿಟ್ಟಿನಲ್ಲಿ ಸಂಸ್ಥೆ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವದ ಅಂಗವಾಗಿ, ಡಿ.೩೦ ರಂದು ಶನಿವಾರ ಸಂಜೆ ೫ ರಿಂದ ೯.೩೦ ರವರೆಗೆ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ನಯನ ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.
೫೦ ವರ್ಷ ಮೇಲ್ಪಟ್ಟ, ೧೦ ಕ್ಕೂ ಹೆಚ್ಚು ಕೃತಿಗಳ ಮೂಲಕ, ಸಮಗ್ರ ಸಾಹಿತ್ಯ ಸೇವೆ ಮತ್ತು ಜೀವಮಾನ ಸಾಧನೆಗಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಕೆಳಕಂಡ ಹಿರಿಯ ಸಾಹಿತಿಗಳು ಭಾಜನರಾಗಿದ್ದಾರೆ. ಸದಾನಂದ ನಾರಾವಿ ಮೂಡುಬಿದಿರೆ ದ.ಕ. ಜಿಲ್ಲೆ, ಡಾ. ಎಸ್.ವಿ ಪ್ರಭಾವತಿ ಬೆಂಗಳೂರು, ಪ್ರೊ. ಸತ್ಯನಾರಾಯಣ ಶಿವಮೊಗ್ಗ ಜಿಲ್ಲೆ, ತಲ್ಲೂರು ಶಿವರಾಮ ಶೆಟ್ಟಿ ಉಡುಪಿ ಜಿಲ್ಲೆ, ಸಿದ್ಧರಾಮ ಉಪ್ಪಿನ ಆಲಮೇಲ ವಿಜಯಪುರ ಜಿಲ್ಲೆ, ಎ.ಜಿ. ರತ್ನಕಾಳೇಗೌಡ ಬೆಂಗಳೂರು, ಡಾ. ಬೆಳವಾಡಿ ಮಂಜುನಾಥ ಚಿಕ್ಕಮಗಳೂರು ಜಿಲ್ಲೆ, ಯು.ಎನ್. ಸಂಗನಾಳಮಠ ಹೊನ್ನಾಳಿ ದಾವಣಗೆರೆ ಜಿಲ್ಲೆ, ಸಿದ್ಧರಾಮ ಹೊನ್ಕಲ್ ಶಹಾಪುರ ಯಾದಗಿರಿ ಜಿಲ್ಲೆ, ಡಾ. ಫಕೀರಪ್ಪ ವಜ್ರಬಂಡಿ ಕೊಪ್ಪಳ ಜಿಲ್ಲೆ, ಬೆ.ಗೋ. ರಮೇಶ ಬೆಂಗಳೂರು, ಶರಣಗೌಡ ಸ. ಪಾಟೀಲ್ ಬೆಳಗಾವಿ ಜಿಲ್ಲೆ, ಸರಸ್ವತಿ ಭೋಸಲೆ ಧಾರವಾಡ ಜಿಲ್ಲೆ, ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ ಜಿಲ್ಲೆ, ಡಾ. ಹಾ.ಮ. ನಾಗಾರ್ಜುನ ಹಾದಿಕೆರೆ ಚಿಕ್ಕಮಗಳೂರು ಜಿಲ್ಲೆ, ಡಾ. ವಿ.ವಿ. ಹಿರೇಮಠ ಗದಗ ಜಿಲ್ಲೆ, ತಿರುಮಲ ಮಾವಿನಕುಳಿ ಕರ್ಕಿಕೊಪ್ಪ ಶಿವಮೊಗ್ಗ ಜಿಲ್ಲೆ, ವಿಜಯಾ ಮೋಹನ್ ಮಧುಗಿರಿ ತುಮಕೂರು ಜಿಲ್ಲೆ, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಶಂಕರಘಟ್ಟ ಶಿವಮೊಗ್ಗ ಜಿಲ್ಲೆ, ಜಿ.ಎಸ್. ಗೋನಾಳ್ ಮಾದಿನೂರು ಕೊಪ್ಪಳ ಜಿಲ್ಲೆ, ಡಾ. ಗುರುಪಾದಯ್ಯ ವಿ. ಸಾಲಿಮಠ ಸವಣೂರು ಹಾವೇರಿ ಜಿಲ್ಲೆ, ಎಸ್.ಜಿ. ಮಾಲತಿಶೆಟ್ಟಿ ಬೆಂಗಳೂರು, ಶ್ರೀ ಉಮೇಶ ಮುನವಳ್ಳಿ ಧಾರವಾಡ ಜಿಲ್ಲೆ, ಶ್ರೀ ರಾಜಶೇಖರ ಜಮದಂಡಿ ಮೈಸೂರು, ಎಂ.ಎನ್. ಸುಂದರರಾಜ್ ಶಿವಮೊಗ್ಗ, ಕೊಂಡಜ್ಜಿ ವೆಂಕಟೇಶ್ ಬೆಂಗಳೂರು, ರವೀಂದ್ರನಾಥ ಸಿರಿವರ ಬೆಂಗಳೂರು, ಜ್ಯೋತಿ ಲೋಣಿ ಗದಗ ಜಿಲ್ಲೆ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಬೆಳಿಗ್ಗೆ ೧೦ ಗಂಟೆಯಿಂದ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವದ ಅಂಗವಾಗಿ ನೃತ್ಯ, ಗಾಯನ ಹಾಗೂ ಜನಪದೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.