ಮಂಗಳೂರು (ದಕ್ಷಿಣ ಕನ್ನಡ): ಮಳೆ ಕಡಿಮೆಯಾಗಿದ್ದು ಹೀಗಾಗಿ ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಎಂದಿನಂತೆ ಶಾಲಾ ಕಾಲೇಜು ಕಾರ್ಯನಿರ್ವಹಿಸಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಜಿಲ್ಲಾಧಿಕಾರಿ, ನಾಳೆಯಿಂದ ಯೆಲ್ಲೋ ಅಲರ್ಟ್ ಇದೆ. ಇಂದು ರೆಡ್ ಅಲರ್ಟ್ ಇರೋ ಕಾರಣಕ್ಕೆ ಶಾಲಾ-ಕಾಲೇಜಿಗೆ ರಜೆ ನೀಡಲಾಗಿದೆ. ನಾಳೆಯಿಂದ ಯೆಲ್ಲೋ ಅಲರ್ಟ್ ಇರೋ ಕಾರಣ ಹೆಚ್ಚೆನೂ ಮಳೆ ಬರಲ್ಲ. ಹೀಗಾಗಿ ನಾಳೆಯಿಂದ ಎಂದಿನಂತೆ ಶಾಲಾ-ಕಾಲೇಜು ಇದೆ.
ನಾಳೆ ಯಾವುದೇ ರಜೆ ಘೋಷಣೆ ಇಲ್ಲ ಎಂದರು.