Tuesday, December 16, 2025
Google search engine

Homeಅಪರಾಧತಲ್ವಾರ್ ಹಿಡಿದು ಡ್ಯಾನ್ಸ್ ; ಪೋಸ್ಟ್ ಮಾಡಿದ ಇಬ್ಬರ ವಿರುದ್ಧ ಕೇಸ್

ತಲ್ವಾರ್ ಹಿಡಿದು ಡ್ಯಾನ್ಸ್ ; ಪೋಸ್ಟ್ ಮಾಡಿದ ಇಬ್ಬರ ವಿರುದ್ಧ ಕೇಸ್

ತಲ್ವಾರ್ ಹಿಡಿದು ರೀಲ್ಸ್ ಮಾಡಿದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕೇಸಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರಿನ ಕಾವೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಬಂದರ್‌ನ ನಿವಾಸಿ ಅಮೀರ್ ಸುಹೇಲ್ ( 28 ), ಕಾವೂರು ಉರುಂದಾಡಿಗುಡ್ಡೆಯ ಸುರೇಶ (29 ) ಬಂಧಿತ ಆರೋಪಿಗಳು.
ದಿನಾಂಕ 13-12-2025 ರಂದು ಸಾಮಾಜಿಕ ಜಾಲತಾಣವಾದ ಪೇಸಬುಕ್ ಖಾತೆಯಲ್ಲಿ “Suresh Psy” ಎಂಬ ಹೆಸರಿನ ಪೇಸಬುಕ್ ಖಾತೆ ಹೊಂದಿರುವ ಸುರೇಶ ಎಂಬುವನು ತನ್ನ ಫೇಸ್ ಬುಕ್ ಖಾತೆಯಲ್ಲಿ MOB ಅಸಾಮಿಯಾದ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ VIBES ಮತ್ತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಿ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸಿದ್ರು. ಹೀಗಾಗಿ ಅಮೀರ್ ಸುಹೇಲ್ ಹಾಗೂ ಸುರೇಶ ಎಂಬುವವನ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 188/2025 ಕಲಂ, 352(2) ಭಾರತೀಯ ನ್ಯಾಯ ಸಂಹಿತೆ 2023 ಜೊತೆಗೆ 4, 25(1ಬಿ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ 66 ಐ.ಟಿ ಯಾಕೆ ಯಂತೆ ಪ್ರಕರಣ ದಾಖಲಾಗಿದೆ.
ದಿನಾಂಕ 13-12-2025 ರಂದು ಈ ಪ್ರಕರಣದಲ್ಲಿ ಒಳಗೊಂಡಿರುವ ಇಬ್ಬರು ಆರೋಪಿಗಳನ್ನು ಅವರು ರೀಲ್ಸ್ ಮಾಡಲು ಬಳಸಿದ ತಲ್ವಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್ ಗಳ ಸಹಿತ ದಸ್ತಗಿರಿ ಮಾಡಲಾಗಿದೆ.
ಈ ಮೇಲಿನ ಆರೋಪಿತರನ್ನು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ ಮಾರ್ಗದರ್ಶನದಂತೆ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ಉಪನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ, ರಿಯಾಜ್, ರವರುಗಳೊಂದಿಗೆ ಆರೋಪಿತರನ್ನು ಪತ್ತೆಮಾಡಿ ದಸ್ತಗಿರಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular