Tuesday, November 4, 2025
Google search engine

Homeಅಪರಾಧಕನ್ನಡ ರಾಜ್ಯೋತ್ಸವ ವೇಳೆ ಕರಾಳ ದಿನಾಚರಣೆ: 150 ಮಂದಿ ವಿರುದ್ದ FIR

ಕನ್ನಡ ರಾಜ್ಯೋತ್ಸವ ವೇಳೆ ಕರಾಳ ದಿನಾಚರಣೆ: 150 ಮಂದಿ ವಿರುದ್ದ FIR

ಬೆಂಗಳೂರು:  ನವೆಂಬರ್ 1 ರಂದು ಅನುಮತಿ ನಿರಾಕರಣೆ ಉಲ್ಲಂಘಿಸಿ ಕರಾಳ ದಿನಾಚರಣೆ ಆಚರಿಸಿದ  150ಕ್ಕೂ ಹೆಚ್ಚು  ಎಂಇಎಸ್ ಪುಂಡರ ವಿರುದ್ದ ಬೆಳಗಾವಿಯಲ್ಲಿ ಎಫ್ ಐಆರ್ ದಾಖಲಾಗಿದೆ.

ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ  ಮನೋಹರ್ ಕಿಣೇಕರ್, ರಮಕಾಂತ ಕೊಂಡುಸ್ಕರ್  ಶಂಬು ಶಳಕೆ ಮಾಳೋಜಿರಾಔವ್ ಅಷ್ಟೇಕರ್ ಸೇರಿ 15ಕ್ಕೂ ಹೆಚ್ಚು ಎಂಇಎಸ್ ಪುಂಡರ ವಿರುದ್ದ  ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದೆ.

ಎಂಇಎಸ್ ಕಾರ್ಯಕರ್ತರ ವಿರುದ್ದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.  ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನದಂದು ಎಂಇಎಸ್ ಅನುಮತಿ ಇಲ್ಲದಿದ್ದರೂ ಕರಾಳ ದಿನಾಚರಣೆ ಆಚರಿಸಿತ್ತು.

RELATED ARTICLES
- Advertisment -
Google search engine

Most Popular