Tuesday, January 13, 2026
Google search engine

Homeರಾಜ್ಯಸುದ್ದಿಜಾಲದರ್ಶನ್ ಗೆ ಈಗ ಮತ್ತಷ್ಟು ಸಂಕಟ

ದರ್ಶನ್ ಗೆ ಈಗ ಮತ್ತಷ್ಟು ಸಂಕಟ

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆಯ ವಿಚಾರವಾಗಿ ಆರೋಪಿ ಸ್ಥಾನದಲ್ಲಿರುವ ದರ್ಶನ್‌ ಸೆರೆಮನೆವಾಸದಲ್ಲಿದ್ದರು. ಸದ್ಯ ದರ್ಶನ್‌ಗೆ ಈಗ ಮತ್ತಷ್ಟು ಕಠಿಣಾತಿ ಕಠಿಣ ಶಿಕ್ಷೆ ಶುರುವಾಗಿದ್ದು, ಬ್ಯಾರಕ್ ಅಲ್ಲಿ ಕೂರಿಸಿ ಊಟ ಕೊಡುತ್ತಿದ್ದ ಜೈಲಿನ ಅಧಿಕಾರಿಗಳು ಈಗ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಜೈಲು ಸೂಪರಿಂಟೆಂಡೆಂಟ್ ಆಗಿ ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ನೇಮಕಾತಿ ಆಗಿರೋ ಅಂಶುಕುಮಾರ್ ಈಗ ಮತ್ತಷ್ಟು ಹೊಸ ರೂಲ್ಸ್ ಗಳನ್ನು ಹಾಕಿದ್ದಾರೆ.

ಇಷ್ಟು ದಿನ ಬ್ಯಾರಕ್ ಅಲ್ಲಿ ಊಟ ಪಡೆದು ಊಟ ಮಾಡುತ್ತಾ ಇದ್ದ ದರ್ಶನ್ ಈಗ ಎಲ್ಲಾ ಆರೋಪಿಗಳಂತೆ ಸರತಿ ಸಾಲಿನಲ್ಲಿಯೇ ನಿಂತು ಊಟ ಪಡೆಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜೈಲಿನಲ್ಲಿ ನಡೆಯುತ್ತಿರುವ ಕಳ್ಳಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲೇಬೇಕೆಂದು ತೀರ್ಮಾನ ಕೈಗೊಂಡಿದ್ದು, ಈಗ ಎಲ್ಲರಿಗೂ ಒಂದೇ ರೂಲ್ಸ್ ಜಾರಿ ಮಾಡಿದ್ದಾರೆ.

ದರ್ಶನ್ ಬ್ಯಾರಕ್ ಇಂದ ಹೊರಗೆ ಬಂದು ಊಟ ಪಡೆಯಬೇಕು ಬಳಿಕ ಊಟ ಮುಗಿಸಿಯೇ ಬ್ಯಾರಕ್‌ಗೆ ತೆರಳಬೇಕಿದೆ. ಇನ್ನು ಭದ್ರತಾ ದೃಷ್ಟಿಯಿಂದ ಇಷ್ಟು ದಿನ ಸಿಕ್ಕಿದ್ದ ವಾಕಿಂಗ್ ಅವಕಾಶವನ್ನೂ ಕಡಿತಗೊಳಿಸಿದ್ದಾರೆ. ಬಟ್ಟೆ ತೊಳೆದು ಒಣ ಹಾಕೋಕೆ ಮಾತ್ರ ಸ್ವಲ್ಪ ಕಾಲಾವಕಾಶ ನೀಡಲಾಗಿದ್ದು, ಮತ್ಯಾವುದಕ್ಕೂ ಅವಕಾಶ ಇಲ್ಲದೇ ದರ್ಶನ್ ಪರದಾಡುವಂತೆ ಆಗಿದೆ. ಈಗ ಈ ಎಲ್ಲಾ ಶಿಕ್ಷೆಯಿಂದ ಮತ್ತೆ ದರ್ಶನ್ ಕೋರ್ಟ್ ಅಲ್ಲಿ ನ್ಯಾಯಾಧೀಶರ ಮುಂದೆ ಏನು ಹೇಳ್ತಾರೆ? ಏನು ನೋವು ತೋಡಿಕೊಳ್ತಾರೆ ಅನ್ನೋ ಕುತೂಹಲ ಎಲ್ಲೆಡೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

RELATED ARTICLES
- Advertisment -
Google search engine

Most Popular