Thursday, October 16, 2025
Google search engine

Homeಸಿನಿಮಾಜೈಲಿನಲ್ಲಿ ದರ್ಶನ್‌ಗೆ ತೀವ್ರ ಬೆನ್ನು ನೋವು: ಚಿಕಿತ್ಸೆಗಾಗಿ ಮನವಿ

ಜೈಲಿನಲ್ಲಿ ದರ್ಶನ್‌ಗೆ ತೀವ್ರ ಬೆನ್ನು ನೋವು: ಚಿಕಿತ್ಸೆಗಾಗಿ ಮನವಿ

ಬೆಂಗಳೂರು: ಚಲನಚಿತ್ರ ನಟ ದರ್ಶನ್ ಅವರು ಮತ್ತೆ ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ ಅವರು ಬೆನ್ನು ನೋವು ತೀವ್ರವಾಗಿದ್ದೆಂದು ಅಳಲು ತೋಡಿಕೊಂಡಿದ್ದು, ಆಪರೇಷನ್‌ಗಾಗಿ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ, ಸಿನಿಮಾ ಶೂಟಿಂಗ್‌ ಒತ್ತಡದಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲೇ ಇಲ್ಲ. ಇದೀಗ ಅವರು ಮತ್ತೆ ಜೈಲು ಸೇರಿದ್ದು, ಮತ್ತೊಮ್ಮೆ ಬೆನ್ನು ನೋವು ತೀವ್ರವಾಗಿದೆ.

ಇದರಿಂದ ದರ್ಶನ್ ಜೈಲಾಧಿಕಾರಿಗಳಿಗೆ ಪತ್ರ ಬರೆದು ತಕ್ಷಣ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಅವರು ಕುಂಟುತ್ತಾ ನಡೆಯುತ್ತಿದ್ದಾರೆ. ಸಿವಿ ರಾಮನ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಅಧಿಕಾರಿಗಳು ಪತ್ರ ಬರೆದಿದ್ದು, ವೈದ್ಯರು ಫಿಸಿಯೋ ಥೆರಪಿ ಅಗತ್ಯವಿದೆ ಎಂದು ಶಿಫಾರಸು ಮಾಡಿದ್ದಾರೆ. ಪ್ರಸ್ತುತ ವಾರಕ್ಕೆ ಎರಡು ಬಾರಿ ಮಾತ್ರ ಥೆರಪಿ ನೀಡಲಾಗುತ್ತಿದೆ.

ಬೆನ್ನು ನೋವಿನ ಜೊತೆಗೆ, ಮೊಣಕೈ ನೋವು ಕೂಡ ಹೆಚ್ಚಾಗಿದೆ. ದರ್ಶನ್ ಕಾರು ಅಪಘಾತಕ್ಕೊಳಗಾಗಿ ಮೊಣಕೈಗೆ ಶಸ್ತ್ರಚಿಕಿತ್ಸೆ ಆಗಿದ್ದು, ರಾಡ್ ಇಡಲಾಗಿದೆ. ಈಗ ಆ ಭಾಗದಲ್ಲಿ ಎರಡು ಬೆರಳುಗಳು ಮರಗಟ್ಟಿವೆ ಎಂದು ವರದಿಯಾಗಿದೆ. ಅವರು ನೆಲದ ಮೇಲೆ ಮಲಗುತ್ತಿದ್ದರಿಂದ ಶೀತಾಂಶದಿಂದ ಬೆನ್ನು ನೋವು ಹೆಚ್ಚು ಆಗುತ್ತಿದೆ. ಹಾಸಿಗೆ–ದಿಂಬು ಒದಗಿಸುವಂತೆ ಅವರು ಮನವಿ ಮಾಡಿದ್ದಾರೆ.

ಇದೊಂದಿಗೇ, ದರ್ಶನ್ ‘ಡೆವಿಲ್’ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದು, ಡಿಸೆಂಬರ್ 12 ರಂದು ಚಿತ್ರ ರಿಲೀಸ್ ಆಗಲಿದೆ. ಫ್ಯಾನ್ಸ್ ಚಿತ್ರವನ್ನು ಆತುರದಿಂದ ನಿರೀಕ್ಷಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular