ವರದಿ: ಸ್ಟೀಫನ್ ಜೇಮ್ಸ್
ಮೈಸೂರು: ದಸರಾದ ವಿಶೇಷವಾಗಿ ಪ್ರತಿ ವರ್ಷ ಆಹಾರ ಮೇಳವಾನನು ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿ ದಸರಾ 2025 ರಲ್ಲೂ ಆಹಾರ ಮೇಳ ಹಾಕಲಾಗಿದೆ. ಬಹಳಷ್ಟು ಜಿಲ್ಲೆಗಳಿಂದ ಡಿಫ್ ಡಿಫ್‌ರೆಂಟ್ ಆಗಿರುವ ಆಹಾರ ಮಳಿಗೆಗಳನ್ನು ಹಾಕಲಾಗಿದೆ. ಇನ್ನು ವಿಸೇಷವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಳಿಯ ಚಂದನ್‌ಗೌಡ ಈ ಬಾರಿ ಆಹಾರ ಮೇಳದಲಲಿ ಮಳಿಗೆಯನ್ನು ಹಾಕಿದ್ದಾರೆ.
ದರ್ಶನ್ ಅವರಿಗೆ ಸೋದರಳಿಯ ಚಂದನ್‌ಕುಮಾರ್ ಅಂದರೆ ಅಚ್ಚುಮೆಚ್ಚು. ಇವರು ಸದಾ ಜೋತೆಯಲ್ಲೇ ಇರುತ್ತಾರೆ. ಚಂದು ಅವರು ನೆಮ್ಮದಿಯಾಗಿ ಊಟ ಮಾಡಿ ಎಂಬ ಹೆಸರಿನಡಿ ಮಳಿಗೆಯನನು ಹಾಕಿದ್ದಾರೆ. ಇದು ಪಕ್ಕಾ ನಾನ್ ವೆಜ್ ಹೋಟೆಲ್. ದರ್ಶನ್ ಮೈಸೂರಿನವರು. ಅವರಿಗೆ ಆ ಊರಿನ ಮೇಲೆ ಸಾಕಷ್ಟು ಪ್ರೀತಿ ಇದೆ. ದಸರಾ ಸಮಯದಲ್ಲಿ ಮಿಸ್ ಮಾಡದೇ ದರ್ಶನ್ ಅವರು ಮೈಸೂರಿಗೆ ಹೋಗುತ್ತಿದ್ದರು. ಆದರೆ, ಈಗ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ವಿಚಾರ ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ಹಿಗಿರುವಾಗಲೇ ಚಂದು ಫುಡ್ಸ್ಟಾಲ್ ಆರಂಭಿಸಿದ್ದಾರೆ.
ಸೋಶಿಯಲ್ಲ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದಾದರೆ. ಈ ವಿಡಿಯೋದಲ್ಲಿ ಸ್ವತಃ ಚಂದು ಅವರೇ ಫುಡ್ ಸ್ಟಾಲ್‌ನಲ್ಲಿ ನಿಂತು ಗ್ರಾಹಕರು ಕರೆಯುತ್ತಿರುವುದು ಇದೆ. ಚಂದು ಅವರನ್ನು ಗುರುತಿಸಿ ಅನೇಕ ದರ್ಶನ್ ಫ್ಯಾನ್ಸ್ ಅವರನ್ನು ಮಾತನಾಡಿಸಿ ಮುಂದೆ ತೆರಳಿದ್ದಾರೆ. ಇನ್ನೂ ಕೆಲವರು ನೆಮ್ಮದಿಯಾಗಿ ಊಟ ಮಾಡಿ ಹೋಗಿದ್ದಾರೆ.
ದರ್ಶನ್ ಅವರು ಪತ್ನಿಗೆ ಬೈದ ಆಡಿಯೋ ವೈರಲ್ ಆಗಿತ್ತು. ಇದರಲ್ಲಿ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂದು ಡೈಲಾಗ್ ಹೇಳಿದ್ದರು. ಇದೇ ಸಾಲುಗಳು ‘ಡೆವಿಲ್’ ಸಿನಿಮಾ ಹಾಡಿನ ಟೈಟಲ್ ಆಗಿತ್ತು. ಹೀಗಾಗಿ, ಫುಡ್ ಸ್ಟಾಲ್ಗೆ ಚಂದು ಅವರು ‘ನೆಮ್ಮದಿಯಾಗಿ ಊಟ ಮಾಡಿ’ ಎಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.