Friday, May 23, 2025
Google search engine

Homeಅಪರಾಧದೆಹಲಿ: 6 ಮಂದಿ ಸ್ನೇಹಿತರಿಂದ ಅಪ್ರಾಪ್ತ ಬಾಲಕನ ಹತ್ಯೆ

ದೆಹಲಿ: 6 ಮಂದಿ ಸ್ನೇಹಿತರಿಂದ ಅಪ್ರಾಪ್ತ ಬಾಲಕನ ಹತ್ಯೆ

ದೆಹಲಿ: ಆರು ಮಂದಿ ಸ್ನೇಹಿತರು ಸೇರಿ ಅಪ್ರಾಪ್ತ ಬಾಲಕನ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಮೃತನನ್ನು ವಿವೇಕ್(17) ಎಂದು ಗುರುತಿಸಲಾಗಿದೆ.

ಸ್ನೇಹಿತರಲ್ಲಿ ಒಬ್ಬಾತ ಮದ್ಯಪಾನ ಮಾಡಲೆಂದು ಆತನನ್ನು ಆಹ್ವಾನಿಸಿದ್ದ ಬಳಿಕ ಸತ್ಪುಲಾ ಪಾರ್ಕ್​ ಗೆ ಕರೆದೊಯ್ದು ಆರು ಮಂದಿ ಸ್ನೇಹಿತರು ಸೇರಿ ಚಾಕುವಿನಿಂದ ತಿವಿದು, ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ.

ಐವರು ಆರೋಪಿಗಳು ಉದ್ಯಾನದಲ್ಲಿ ಕಾದು ಕುಳಿತಿದ್ದು, ವಿವೇಕ್ ಒಳಗೆ ಬಂದ ತಕ್ಷಣ  ಚಾಕು ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ.

ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಸತ್ಪುಲಾ ಪಾರ್ಕ್‌ ನಲ್ಲಿ ಪತ್ತೆಯಾದ ಮೃತದೇಹದ ಕುರಿತು ಪಿಸಿಆರ್ ಕರೆ ಬಂದಿತ್ತು. ಖಿರ್ಕಿ ಗ್ರಾಮದ ಬಳಿ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಹೊಟ್ಟೆ, ಎದೆ, ಕುತ್ತಿಗೆ ಮತ್ತು ಮುಖದ ಮೇಲೆ ಗಾಯದ ಗುರುತುಗಳನ್ನು ಹೊತ್ತಿರುವುದು ಕಂಡುಬಂದಿದೆ.

ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular