Friday, October 10, 2025
Google search engine

Homeರಾಜ್ಯದೆಹಲಿ ಪೊಲೀಸ್ - ಹೆಡ್ ಕಾನ್ಸ್ಟೇಬಲ್ ಮತ್ತು ಟೆಲಿ ಪ್ರಿಂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೆಹಲಿ ಪೊಲೀಸ್ – ಹೆಡ್ ಕಾನ್ಸ್ಟೇಬಲ್ ಮತ್ತು ಟೆಲಿ ಪ್ರಿಂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ದೆಹಲಿ ಪೊಲೀಸ್ನಲ್ಲಿ ಹೆಡ್ ಕಾನ್ಸ್ಟೇಬಲ್ (ಅಸಿಸ್ಟೆಂಟ್ ವೈರ್ಲೆಸ್ ಆಫೀಸರ್) ಮತ್ತು ಟೆಲಿ ಪ್ರಿಂಟರ್ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆಯು 2025 ರ ಡಿಸೆಂಬರ್ ಮತ್ತು 2026 ರ ಜನವರಿಯಲ್ಲಿ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸುವವರು ಅಂಗೀಕೃತ ಮಂಡಳಿಯಿಂದ ಹಿರಿಯ ಸೆಕೆಂಡರಿ / ಪಿಯುಸಿಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಉತ್ತೀರ್ಣವಾಗಿರಬೇಕು. ಅಥವಾ ಮೆಕ್ಯಾನಿಕಲ್ ಕಮ್ ಆಪರೇಟರ್, ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ನಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು. ಕಂಪ್ಯೂಟರ್ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಇಂಗ್ಲೀಷ್ ಬೆರಳಚ್ಚುವಿನಲ್ಲಿ 15 ನಿಮಿಷಗಳಲ್ಲಿ 1000 ಪದಗಳನ್ನು ಟೈಪ್ ಮಾಡಬೇಕು.

ದೆಹಲಿ ಪೊಲೀಸರು ದೈಹಿಕ ಮತ್ತು ಮಾಪನ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಒಟ್ಟು ಹುದ್ದೆಗಳು 552, ಪುರುಷ-370 ಮತ್ತು ಮಹಿಳೆಯರು-182 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಅರ್ಜಿ ಶುಲ್ಕ 100 ರೂ ನಿಗಧಿಪಡಿಸಿದ್ದು, ಮಹಿಳಾ ಅಭ್ಯರ್ಥಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿಯನ್ನು 2025 ನೇ ಅಕ್ಟೋಬರ್ 15 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-25502520, ನ್ನು ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಸಂಪರ್ಕಿಸಬಹುದು.

ಅಭ್ಯರ್ಥಿಗಳು ಎಸ್ಎಸ್ಸಿ ಮುಖ್ಯ ಕಚೇರಿ ನವದೆಹಲಿಯ ಜಾಲತಾಣ https://ssc.nic.in ಮತ್ತು ಎಸ್ಎಸ್ಸಿ ಕರ್ನಾಟಕ-ಕೇರಳ ಪ್ರದೇಶದ ಜಾಲತಾಣ www.ssckkr.kar.nic.in ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular