Monday, September 15, 2025
Google search engine

Homeರಾಜ್ಯಸುದ್ದಿಜಾಲಯುವ ಸಮುದಾಯ ಜಾಗೃತವಾದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ: ಸಚಿವ ಸಂತೋಷ ಲಾಡ್

ಯುವ ಸಮುದಾಯ ಜಾಗೃತವಾದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ: ಸಚಿವ ಸಂತೋಷ ಲಾಡ್

  • ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಧಾರವಾಡ : ಸಮಾಜದ ಎಲ್ಲರಿಗೂ ಎಲ್ಲ ಕ್ಷೇತ್ರಗಳಲ್ಲೂ ಸಮಾನತೆ ತರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯವಾಗಿದೆ. ಪ್ರಜೆಗಳೆ ಪ್ರಜಾಪ್ರಭುತ್ವದ ಜೀವಾಳ ಎಂದು ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಅವರು ಇಂದು (ಸೆ.15) ಬೆಳಿಗ್ಗೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಮೀಸಲಾತಿ ಪರಿಕಲ್ಪನೆ ಬಂದಿದ್ದು, ಎಲ್ಲರಲ್ಲೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಮತ್ತು ಸಮಾನ ಅವಕಾಶ ತರುವುದಾಗಿದೆ. ಯುವ ಸಮುದಾಯ ಜಾಗೃತವಾದರೆ ಮಾತ್ರ ಪ್ರಜಾಪ್ರಭುತ್ವ ಸದೃಡವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ನಂಬಿಗೆ ಉಳ್ಳವರು, ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಇಂದು ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಸಮಾಜವನ್ನು ಉಳಿಸುವ, ಪ್ರಜಾಪ್ರಭುತ್ವ ಕಾಪಾಡುವ ಕಾರ್ಯ ಯುವಜನರ ಕೈಯಲ್ಲಿದೆ. ಇಂದಿನ ಯುವಕರು ಜಾಗೃತರಾಗಬೇಕು ಎಂದರು.

ಮೀಸಲಾತಿ ಪರಿಕಲ್ಪನೆ ಬಂದಿದ್ದು ಸರ್ವರ ಅಭಿವೃದ್ಧಿಯನ್ನು ಸಮಾನವಾಗಿ ಸಾಧಿಸುವದಾಗಿದೆ. ಮಹಿಳೆಯರಿಗೆ ಆಸ್ತಿ ಹಕ್ಕು ಬಂದಿದ್ದು, ಇತರ ಹಕ್ಕುಗಳನ್ನು ನೀಡಿದ್ದು ಲಿಂಗ ಸಮಾನತೆಯಾಗಿದೆ ಎಂದು ಸಚಿವರು ಹೇಳಿದರು.

ಸರ್ವರು, ಸರ್ವ ಜನಾಂಗದವರು ಸಮಾನರಾಗಿ ಬದುಕುವ ಅವಕಾಶ, ಹಕ್ಕು, ಎಲ್ಲವನ್ನು ನಮ್ಮ ಸಂವಿಧಾನ ನೀಡಿದೆ. ಸಂವಿಧಾನದ ಕಲಂ 19, ಕಲಂ 32 ರಂತ ಮಹತ್ವದ ಹಕ್ಕುಗಳನ್ನು ನಮಗೆ ನೀಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಸಮುದಾಯ, ವ್ಯವಸ್ಥೆಗೆ ಸೀಮಿತಗೊಳಿಸದೆ ಅವರ ಅಪಾರ ಕೊಡುಗೆಯನ್ನು ಸ್ಮರಿಸಿ, ಅವರ ಉದಾರತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಇವತ್ತು ಡ್ರಗ್ಸ್ ಒಂದು ಶಾಪವಾಗಿ, ಅಭಿವೃದ್ಧಿ ವಿರೋಧಿಯಾಗಿ ಬೆಳೆಯುತ್ತಿದೆ. ಇದನ್ನು ತಡೆಗಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ. ಸಂಪೂರ್ಣವಾಗಿ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು ಎಂದು ಸಚಿವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಕಳೆದ 2008 ರಿಂದ ದೇಶದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಜೆಗಳೇ ಪ್ರಜಾಪ್ರಭುತ್ವದ ಜೀವಾಳ. ಇಂದಿನ ಲಿಂಗ ಸಮಾನತೆ, ಅವಕಾಶಗಳ ಸಮಾನತೆ, ಎಲ್ಲರಿಗೂ ಆಸ್ತಿ ಹಕ್ಕು ಲಭಿಸಿದ್ದು ಸಂವಿಧಾನ ನೀಡಿರುವ ಅವಕಾಶವಾಗಿದೆ. ಮಹಿಳೆಯರು ಸಂವಿಧಾನ ನೀಡಿರುವ ಅವಕಾಶಗಳನ್ನು ಬಳಸಿಕೊಂಡು, ಅಭಿವೃದ್ಧಿ ಹೊಂದಬೇಕು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ಪ್ರಜಾಪ್ರಭುತ್ವಕ್ಕೆ ಗಟ್ಟಿ ತಳಪಾಯ ಹಾಕಿದ್ದಾರೆ. ಎಲ್ಲರೂ ಪ್ರಜಾಪ್ರಭುತ್ವವನ್ನು ಗೌರವಿಸಿ, ಪ್ರಜಾಪ್ರಭುತ್ವದ ತತ್ತ್ವಗಳನ್ನು ಪಾಲಿಸಬೇಕು ಎಂದರು.

ಐಎಎಸ್ ಪೆÇ್ರಬೇಷನರಿ ಅಧಿಕಾರಿ ರಿತೀಕಾ ವರ್ಮಾ ಅವರು ಮಾತನಾಡಿ, ಭಾರತದಲ್ಲಿ ಬಹು ಹಿಂದಿನಿಂದ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಇತರ ದೇಶಗಳಿಗೆ ನಮ್ಮ ಪ್ರಜಾಪ್ರಭುತ್ವ, ಸಂವಿಧಾನ ಮಾದರಿಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಗುಂಜನ್ ಆರ್ಯ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು, ಇತರರು ಇದ್ದರು.

ದೀಪ ಬೆಳಗಿಸುವ ಮೂಲಕ ಸಚಿವರು ಕಾರ್ಯಕ್ರಮ ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಾಜಿ ಉಪಪ್ರದಾನಿ ಡಾ.ಬಾಬು ಜಗಜೀವನ ಅವರ ಭಾವಚಿತ್ರಕ್ಕೆ ಪುμÁ್ಪರ್ಪಣೆ ಮಾಡಿ ನಮಿಸಿದರು.

ಸಭೆಯಲ್ಲಿ ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ವಾಚನ ಮಾಡಲಾಯಿತು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಕುರಿತು ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭ ಪಿ. ಅವರು ಸ್ವಾಗತಿಸಿದರು. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಭಾಷಣ, ಚಿತ್ರಕಲೆ ಹಾಗೂ ಛಾಯಾಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿ, ಗೌರವಿಸಿದರು.

ಸ್ಪರ್ಧೆ ವಿಜೇತರು: ಭಾಷಣ: ಕುಂದಗೋಳ ಸರಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಗಾಯತ್ರಿ ವಡ್ಡರ ಪ್ರಥಮ, ಧಾರವಾಡ ಸರಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಉದ್ದಮ್ಮ ಅಜ್ಜನಕಟ್ಟಿ ದ್ವಿತೀಯ ಮತ್ತು ಕಲಘಟಗಿ ಸರಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ನೀಲಾ ಹುಚ್ಚನೂರ ಹಾಗೂ ಸರಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ. ಬಿ. ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ಚಿತ್ರಕಲಾ ಸ್ಪರ್ಧೆ: ಜೆಎಸ್‍ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್‍ದ ವಿದ್ಯಾರ್ಥಿ ಕಾರ್ತಿಕ ಕುಂಬಾರ ಪ್ರಥಮ, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಜು ಪರಮೇಶ್ವರ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ಛಾಯಾಚಿತ್ರ ಸ್ಪರ್ಧೆ: ಛಾಯಾಚಿತ್ರ ಮುಕ್ತ ಸ್ಪರ್ಧೆಯಲ್ಲಿ ಅಳಗವಾಡಿ ಗ್ರಾಮದ ಪೆÇೀಟೊಗ್ರಾಫರ್ ರಾಘವೇಂದ್ರ ರಾಯಬಾಗಿ ಅವರು ಪ್ರಥಮ, ವಾರ್ತಾ ಇಲಾಖೆ ಪೆÇೀಟೊಗ್ರಾಫರ್ ಬಸವರಾಜ ಪಟಾತ್ ಅವರು ದ್ವಿತೀಯ ಮತ್ತು ಹುಬ್ಬಳ್ಳಿಯ ವಿನಾಯಕ ಬಾಕಳೆ ತೃತೀಯ ಸ್ಥಾನವನ್ನು ಹಾಗೂ ಧಾರವಾಡದ ಉಮೇಶ ಚಿಕ್ಕೊಡಿ ಅವರು ಸಮಾಧನಕರ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿ ವಿಭಾಗದಲ್ಲಿ ವಿದ್ಯಾರ್ಥಿನಿ ಸಂಗಮಿತ್ರ ಜನ್ನಾ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.

ಕಾರ್ಯಕ್ರಮದ ನಂತರ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕೆಸಿಡಿ ಕಾಲೇಜು ಮೈದಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದರು.

ಜಾಗೃತಿ ಮೂಡಿಸಿದ ಸೈಕಲ್ ಜಾಥಾ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಿತ್ತಿ ಪತ್ರ, ಘೋಷಣೆಗಳ ಮೂಲಕ ಭಾಗವಹಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಸೈಕಲ್ ಜಾಥಾವು ಕೆ ಸಿ ಡಿ ಕಾಲೇಜಿನಿಂದ ಪ್ರಾರಂಭವಾಗಿ ಸಪ್ತಾಪುರ್ ಬಾವಿ, ದಾಸನಕೊಪ್ಪ ಸರ್ಕಲ್, ಜಂಬಿಗಿ ಹಾಸ್ಪಿಟಲ್, ಎಲ್.ಇ.ಎ ಕ್ಯಾಂಟೀನ್, ಜ್ಯೂಬಲಿ ಸರ್ಕಲ್ ಮಾರ್ಗವಾಗಿ ಸಂಚರಿಸಿ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.

RELATED ARTICLES
- Advertisment -
Google search engine

Most Popular