Tuesday, May 20, 2025
Google search engine

Homeರಾಜ್ಯಸುದ್ದಿಜಾಲಪ್ರತಾಪ್ ಸಿಂಹ ಕುರಿತ ಅವಹೇಳನಾಕಾರಿ ಪೋಸ್ಟರ್ ಪ್ರಕರಣ: ಕೆ.ಎಸ್ ಶಿವರಾಮು ವಿರುದ್ದ ಬಿಜೆಪಿ ಮುಖಂಡ ದೂರು

ಪ್ರತಾಪ್ ಸಿಂಹ ಕುರಿತ ಅವಹೇಳನಾಕಾರಿ ಪೋಸ್ಟರ್ ಪ್ರಕರಣ: ಕೆ.ಎಸ್ ಶಿವರಾಮು ವಿರುದ್ದ ಬಿಜೆಪಿ ಮುಖಂಡ ದೂರು

ಮೈಸೂರು: ಸಂಸದ ಪ್ರತಾಪಸಿಂಹ ಅವರನ್ನು ತೇಜೋವಧೆ ಮಾಡಲು ಮುಂದಾದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷನ ವಿರುದ್ಧ ಬಿಜೆಪಿ ಎನ್.ಆರ್. ಮಾಜಿ ಅಧ್ಯಕ್ಷ ಆನಂದ್ ಅವರು ಲಕ್ಷ್ಮೀ ಪುರಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್ ಅನುಮತಿ ಪಡೆಯದೆ ಸಹಿ ಸಂಗ್ರಹಣೆ ನೆಪದಲ್ಲಿ ಸಂಸದರ ಭಾವಚಿತ್ರವನ್ನು ಉಗ್ರಗಾಮಿಯ ರೀತಿ ಕೈ ಯಲ್ಲಿ ಬಾಂಬ್ ಹಿಡಿದಿರುವಂತೆ ಎಡಿಟ್ ಮಾಡಿ ಮೈಸೂರಿನಲ್ಲಿ ಕೋಮು ಗಲಭೆಗೆ ಪ್ರಚೋದಿಸಿದ್ದಾರೆ. ಇವರುಗಳು
ಸಂಸದರ ವಿರುದ್ಧ ದ್ವೇಷ ಕಾರುತ್ತಿರುವುದು ಇದು ಹೊಸತೇನಲ್ಲ ಆದರೆ ಈ ಬಾರಿ ಅತ್ಯಂತ ಹೇಯಕರವಾಗಿ ಬಿಂಬಿಸಿದ್ದಾರೆ. ಮೈಸೂರಿನವರು ಎಂಬ ವಿಶ್ವಾಸದ ಮೇಲೆ ಸಂಸದರು ಪಾಸ್ ನೀಡಿದ್ದಾರೆ ಹೊರತು ಇಂಥಹ ಯಾವುದೇ ಕುಕೃತ್ಯಗಳಿಗೆ ಅವರು ಎಂದಿಗೂ ಬೆಂಬಲಿಸಿಲ್ಲ.

ಅನುಮತಿ ಪಡೆಯದೆ ಮಾಡಿರುವ ಸಹಿ-ಸಂಗ್ರಹಣಾ ಪ್ರತಿಭಟನೆ ಮತ್ತು ಸಂಸದರ ಭಾವಚಿತ್ರವನ್ನು ವಿಕೃತವಾಗಿ ಎಡಿಟ್ ಮಾಡಿ ದೇಶದ್ರೋಹಿ ಎಂದು ಬರೆದು, ಅನುಮತಿ ಪಡೆಯದೇ ಸಾರ್ವಜನಿಕರಿಗೆ ತೊಂದರೆ ನೀಡುವ ಮೂಲಕ ಕಾನೂನು ಉಲ್ಲಂಘಿಸಿ ಜನಪ್ರತಿನಿಧಿಯನ್ನು ತೇಜೋವಧೆ ಮಾಡಿರುವ ಖಂಡನೀಯ ಹಾಗೂ ಈ ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಾಜಕೀಯ ಒತ್ತಡಕ್ಕೆ ಮಣಿಯದೇ ಕಾನೂನು ಕ್ರಮ ಜರುಗಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ನರಸಿಂಹರಾಜ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಆನಂದ್, ಓಬಿಸಿ ನಗರ ಪ್ರಧಾನ ಕಾರ್ಯದರ್ಶಿ ಬಿಜೆಪಿ ಹಿಂದುಳಿದ ವರ್ಗದ ನಗರ ಪ್ರಧಾನ ಕಾರ್ಯದರ್ಶಿ ಮನಿರತ್ನ, ನರಸಿಂಹರಾಜ ಕ್ಷೇತ್ರದ ಉಪಾಧ್ಯಕ್ಷ ಪದ್ಮನಾಭ, ಜಯಸಿಂಹ ಶ್ರೀಧರ್, ವಕೀಲರಾದ ಗೋಕುಲ್ ಗೋವರ್ಧನ್, ಹೇಮಂತ್ ಕುಮಾರ್, ಉಮೇಶ್, ಮನೋಜ್, ಸಂದೀಪ, ಧರ್ಮೇಂದ್ರ, ಹಾಗೂ ಇನಿತರು ಹಾಜರಿದ್ದರು

RELATED ARTICLES
- Advertisment -
Google search engine

Most Popular