ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಇವರನ್ನು ಫೇಸ್ ಬುಕ್ ನಲ್ಲಿ ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಿನಾಂಕ 07-01-2026 ರಂದು ಸದಾನಂದ ಬಂಟ್ವಾಳ ತಾಲೂಕು ಎಂಬುವವರು ತನ್ನ ಮೊಬೈಲ್‌ನ ಫೇಸ್ ಬುಕ್ ಖಾತೆಯನ್ನು ಗಮನಿಸಿದಾಗ Billava Sandesh ಎಂಬ ಫೇಸ್ ಬುಕ್ ಖಾತೆಯಲ್ಲಿ ಸುಳ್ಯ ವಿಧಾನ ಸಭಾ ಶಾಸಕಿಯವರ ಫೋಟೊವನ್ನು ಅವಹೇಳನ ರೀತಿಯಲ್ಲಿ ಬರಹಗಳನ್ನು ಹಾಕಿ, ಸುಳ್ಳು ಅಪಪ್ರಚಾರವನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ಕಿನಲ್ಲಿ ಮಾಡಿರುವುದಾಗಿದೆ ಎಂದು ದೂರುದಾರರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರರ್ಜಿ ದಾಖಲಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.



